ಅವರೆಕಾಯಿ ತಿನ್ನಲು ಇಷ್ಟ ಪಡುವವರು ತಪ್ಪದೆ ಇಲ್ಲಿ ಓದಲೇ ಬೇಕು!

0
1699

ಅವರೇ ಕಾಯಿ ಕೇವಲ ಭಾರತದಲ್ಲಿ ಮಾತ್ರ ಬಳುಸುತ್ತಾರೆ ಅಂದರೆ ಅದು ತಪ್ಪಾಗುತ್ತದೆ ಕಾರಣ ಅವರೆಕಾಯಿ ಪ್ರಪಂಚದ ಇತರ ಎಲ್ಲಾ ದೇಶದಲ್ಲೂ ಬಳಕೆಯಲ್ಲಿದೆ ಅದರಲ್ಲೂ ಆಫ್ರಿಕಾ ಮಾತು ಏಷ್ಯಾದ ಖಂಡಗಳಲ್ಲಿ ಅತಿಯಾಗಿ ಬಳಸುತ್ತಾರೆ, ಇನ್ನು ಅವರೆಕಾಯಿ ಮಾತ್ರವಲ್ಲದೆ ಅದರ ಎಲೆ, ಹೂ ಮತ್ತು ಕಾಂಡಗಳನ್ನು ಔಷದಿಗಳಿಗಾಗಿ ಬಳಸುತ್ತಾರೆ, ಹೌದು ಇಂದು ನಿಮಗೆ ಅಚ್ಚರಿ ಮೂಡಿಸುವ ಅವರೇ ಕಾಯಿಯ ಅರೋಗ್ಯ ಲಾಭಗಳನ್ನು ಇಂದು ತಿಳಿಸುತ್ತೇವೆ.

ತಲೆ ನೋವು ಕಡಿಮೆ ಮಾಡುತ್ತದೆ : ಹೌದು ಅವರೇ ಕಾಯಿಯ ಎಲೆಗಳನ್ನು ಜಜ್ಜಿ ಪೂರ್ವ ಆಫ್ರಿಕಾ ದೇಶಗಳಲ್ಲಿ ಅದರ ವಾಸನೆಯನ್ನು ನೋಡುತ್ತಾರೆ, ಹೀಗೆ ಮಾಡುವುದರಿಂದ ತಲೆ ನೋವಿಗೆ ತಕ್ಷಣ ಪರಿಹಾರ ಸಿಗುತ್ತದೆ.

ಜನನ ಕ್ರಿಯೆ ಸರಾಗ : ಅವರೆಕಾಯಿಯ ಬೀಜ ಅಥವಾ ಅವರೆಕಾಯಿಯ ಹೂಗಳ ಕಷಾಯ ಮಾಡಿ ಗರ್ಭಿಣಿಯರಿಗೆ ಕುಡಿಸುವ ವಾಡಿಕೆಯನ್ನು ಆಫ್ರಿಕಾ ದೇಶದಲ್ಲಿ ಅನುಸರಿಸುತ್ತಾರೆ, ಇದರಿಂದ ಜನನ ಕ್ರಿಯೆ ಸರಾಗವಾಗಿ ನಡೆಯುತ್ತದೆ.

ಹೊಟ್ಟೆ ನೋವು : ಚೀನಾ ಮತ್ತು ಭಾರತ ದೇಶದಲ್ಲೂ ಸಹ ಭೇದಿ, ಹೊಟ್ಟೆ ನುಲಿತ, ಹೊಟ್ತೆ ಉಬ್ಬರ ಇದ್ದರೆ ಅವರೆಕಾಳು ಬಳಕೆ ಹೆಚ್ಚಾಗಿ ಮಾಡಲಾಗುತ್ತದೆ ಹಾಗು ಪರಿಹಾರವು ಸಿಗುತ್ತದೆ.

ಹಾವು ಕಚ್ಚಿದರೆ : ಪೂರ್ವ ಆಫ್ರಿಕಾ ದೇಶದಲ್ಲಿ ಬುಡಕಟ್ಟು ಹೆಚ್ಚು ಅಂತಹ ಪ್ರದೇಶದ ಜನರು ಹಾವುಗಳು ಕಚ್ಚಿದರೆ ಅವರೆ ಎಲೆಯನ್ನು ಜಜ್ಜಿ ವಿನೆಗರ್ ಜೊತೆ ಸೇರಿಸಿ ಬೆಚ್ಚಾರ (ಪೌಲ್ಟೀಸ್) ಮಾಡಿ ಕಚ್ಚಿದ ಜಾಗಕ್ಕೆ ಕಟ್ಟುತಾರಂತೆ.

ಆರೋಗ್ಯಕ ತರಕಾರಿ : ಅವರೆಕಾಯಿಯಲ್ಲಿ ಪ್ರೋಟೀನ್, ಕಬ್ಬಿಣಾಂಶ, ಮೆಗ್ನೀಶಿಯಂ, ಫಾಸ್ಫರಸ್, ಸತು ಮತ್ತು ಹೇರಳವಾಗಿ ವಿಟಮಿನ್ ಬಿ ಮತ್ತು ಸಿ ಯಂತಹ ಅಂಶಗಳು ಹೇರಳವಾಗಿದ್ದು, ಅವರೆಕಾಯಿ ತಿನ್ನಲು ಉತ್ತಮ ತರಕಾರಿಯಾಗಿದೆ.

ಹೃದಯದ ತೊಂದರೆ : ಆಂಟಿ-ಆಕ್ಸಿಡೆಂಟ್ಸ್ ಅವರೆಕಾಯಿಯಲ್ಲಿ ಸಹಜವಾಗಿ ಇರುವುದರಿಂದ ಹೃದಯದ ಆರೋಗ್ಯಕ್ಕೆ ಬಹಳಷ್ಟು ಸಹಾಯಕಾರಿ, ರುವಾಂಡಾ ಎನ್ನುವ ದೇಶದಲ್ಲಿ ಅವರೆಕಾಯಿಯ ಎಲೆಗಳನ್ನು ಬಳಸಿ ಔಷದಿ ತಾಯಾರಿಸುತ್ತಾರೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here