ಕಾಮಾಲೆ ಸೇರಿದಂತೆ ಇನ್ನು ಅತಿ ಹೆಚ್ಚು ಸಮಸ್ಯೆಗಳಿಗೆ ಒಂದು ಸಣ್ಣ ಅರಿಶಿನದ ಕೊಂಬನ್ನು ಈ ರೀತಿ ಬಳಸಿ.

0
1408

ನಾನಾ ವಿಧವಾದ ರೋಗಗಳನ್ನು ಗುಣ ಪಡಿಸುವ ಶಕ್ತಿ ಅರಿಶಿನದಲ್ಲಿ ಅಡಗಿದೆ ಅರಿಶಿನದ ಸದುಪಯೋಗ ಪಡೆಯಬೇಕಾದರೆ ಮಾರುಕಟ್ಟೆಯಲ್ಲಿ ದೊರಕುವ ಅರಿಶಿನದ ಪುಡಿಯನ್ನು ಬಳಸಬಾರದು ಇದು ಮಾನ್ಯವಾಗಿ ಅನ್ಯ ವಸ್ತುಗಳಿಂದ ಕೂಡಿದ ಕೃತಕ ಅರಿಶಿನ, ಅರಿಶಿನ ಕೊಂಬುಗಳನ್ನು ತಂದು ಕುಟ್ಟಿ ನುಣ್ಣಗೆ ಪುಡಿಮಾಡಿಟ್ಟು ಕೊಂಡು ಬಳಸುವುದು ಸರ್ವಶ್ರೇಷ್ಠ.

ಅಡುಗೆಯಲ್ಲಿ ಅರಿಶಿನ ಬಳಸುವ ಉದ್ದೇಶಗಳು ಈ ರೀತಿಯಾಗಿವೆ : ಅಪಾರ ಸುಗಂಧಯುಕ್ತವಾಗಿರುವುದು, ಅಡುಗೆಯ ಮಾಧುರ್ಯ ಹೆಚ್ಚುವುದು, ಕಜ್ಜ ಹರ್ಷವನ್ನೀಯುವ ಬಣ್ಣ ಆಹಾರಕ್ಕೆ ಬರುವುದು ಇಷ್ಟೇ ಅಲ್ಲದೆ ಆಹಾರ ಸುಲಭವಾಗಿ ಜೀರ್ಣಿಸುವುದು ಅರಿಶಿನದಲ್ಲಿ ಜೀರ್ಣಕಾರಕ ಬೆಲ್ಲವನ್ನು ಹಾಲಿನೊಂದಿಗೆ ನುಣ್ಣಗೆ ಅರೆದು ಗಂಟಲಿನ ಹೊರಭಾಗಕ್ಕೆ ಲೇಪಿಸುವುದರಿಂದ ಗುಣ ಕಂಡುಬರುವುದು.

ಸುಮಾರು ಹತ್ತುಗ್ರಾಂತೂಕ ನಯವಾದ ಅರಿಶಿನದ ಪುಡಿಯನ್ನು ಒಂದು ಬಟ್ಟಲು ಮೊಸರಿನಲ್ಲಿ ಚಿನ್ನಾಗಿ ಕದಡಿ ಪ್ರತಿದಿನ ಪ್ರಾತಃಕಾಲ ಸೇವಿಸಿ ಏಳೆಂಟು ದಿನಗಳ ಕಾಲ ಇದೇ ಕ್ರಮ ಅನುಸರಿಸಿದರೆ ಕಾಮಾಲೆ ರೋಗ ಗುಣವಾಗುವುದು.

ಸುಮಾರು ಒಂದು ಅಂಗುಲ ಉದ್ದದ ಅರಿಶಿನದ ಕೊನೆಯನ್ನು ನುಣ್ಣಗೆ ಅರೆಯಿರಿ ಅದನ್ನು ಒಂದು ಬಟ್ಟಲು ಮಜ್ಜಿಗೆಯಲ್ಲಿ ಕದಡಿ ಕುಡಿಯಿರಿ ಒಂದು ವಾರ ಕಾಲ ಇದನ್ನು ಬಳಸುವುದರಿಂದ ಅರಿಶಿನ ಕಾಮಾಲೆ, ಮೂಲವ್ಯಾಧಿ, ಮಲಕಟ್ಟು, ಮಲ ವಿಸರ್ಜನೆಯ ನಂತರ ಗುದದ್ವಾರದಲ್ಲಾಗುವ ನೋವು, ಅತಿಸಾರ, ಸಂಧಿವಾತ ಮತ್ತು ಹಳೆಯ ಚರ್ಮರೋಗಗಳು ಗುಣವಾಗುವುವು.

ಅರಿಶಿನದ ಪುಡಿಯನ್ನು ಹರಳೆಣ್ಣೆ ಅಥವಾ ಕೊಬರಿ ಎಣ್ಣೆಯಲ್ಲಿ ಮಿಶ್ರಮಾಡಿ ಅಂಗಾಂಗಗಳಿಗೆ ಹಚ್ಚಿಕೊಂಡು ಸ್ನಾನಮಾಡುವ ಅಭ್ಯಾಸವಿಟ್ಟು ಕೊಂಡರೆ ಚರ್ಮರೋಗಗಳು ನಿವಾರಣೆಯಾಗುವುವು, ಚರ್ಮದ ಕಾಂತಿ ಹೆಚ್ಚುವುದು.

ಅರಿಶಿನದ ಪುಡಿಯನ್ನು ಕೆಂಡದ ಮೇಲೆ ಹಾಕಿದಾಗ ಹೊಗೆ ಹೊರಡುವುದು, ಈ ಹೊಗೆಯನ್ನು ಮೂಗಿನ ಮೂಲಕಸೇವಿಸುವುದರಿಂದ ನೆಗಡಿ ಶಾಂತವಾಗುವುದು, ಹೊಗೆ ಸೇವಿಸಿದ ನಂತರ ಕೆಲವು ಗಂಟೆಗಳ ಕಾಲ ನೀರು ಕುಡಿಯದಿದ್ದರೆ ಉತ್ತಮ ಫಲ ದೊರೆಯುವುದು.

ನುಣುಪಾದ ಅರಿಶಿನದ ಪುಡಿಯನ್ನು ಜೇನುತುಪ್ಪದಲ್ಲಿ ಕಲಸಿ ಸ್ವಲ್ಪಭಾಗ ಸೇವಿಸಿ ಮತ್ತು ಉಳಿದ ಭಾಗವನ್ನು ವ್ಯಾಧಿಗ್ರಸ್ತ ಚರ್ಮದ ಮೇಲೆ ಲೇಪಿಸಿ ಈ ಚ್ರಕತ್ಸೆಯಿಂದ ಚರ್ಮವ್ಯಾಧಿಗಳು ಗುಣವಾಗುವುವು.

ಅರಿಶಿನದ ಗಂಧ ಮತ್ತು ಶ್ರೀಗಂಧದ ಗಂಧವನ್ನು ಹಾಲಿನ ಕೆನೆಯೊಂದಿಗೆ ಚೆನ್ನಾಗಿ ಮಿಶ್ರಮಾಡಿ ಮುಖಕ್ಕಿ ಹಚ್ಚಿಕೊಂಡರೆ ಮೊಡವೆಗಳು ಮಾಯಿತ್ತವೆ, ಮುಖದ ಚರ್ಮ ಮೃದುವಾಗುತ್ತದೆ, ಚರ್ಮದ ಕಾಂತಿ ಹೆಚ್ಚುತ್ತದೆ, ಚಳಿಗಾಲದಲ್ಲಿ ಚರ್ಮ ಓಡೆದಾಗ ಈ ಮಿಶ್ರಣವನ್ನು ಮುಖ ಮತ್ತು ಕೈಕಾಲುಗಳಿಗೆ ಲೇಪಿಸುವುದು ಲೇಸು.

ದೊಡ್ಡದಾದ ಅರಿಶಿನದ ಕೊಂಬನ್ನು ಕೆಂಡದ ಮೇಲಿಟ್ಟು ಸುಡಬೇಕು, ಅದು ಹೊತ್ತಿಕೊಂಡು ಉರಿಯುವಾಗ ಚಿಮಟದ ಸಹಾಯದಿಂದ ತೆಗೆದು ನಾಡ ಹೆಂಚಿನ ಮೇಲಿಡಿ ಅರಿಶಿನದ ಕೊಂಬು ಉರಿದು ಭಸ್ಮವಾಗುವುದು ಈ ಭಸ್ಮವನ್ನು ವ್ರಣಗಳಿಗೆ ಹಚ್ಚಬಹುದು ಎಂತಹ ಕೆಟ್ಟ ಹುಣ್ಣಾದರೂ ಸರಿಯೇ ಈ ಚಿಕಿತ್ಸೆಯಿಂದ ಗುಣವಾಗುವುದು.

ಅರಿಶಿನ ಮತ್ತು ಗರಿಕೆ ಹುಲ್ಲನ್ನು ಗೋಮೂತ್ರದಲ್ಲಿ ನುಣ್ಣಗೆ ಅರೆದು ವ್ಯಾಧಿಗ್ರಸ್ತ ಚರ್ಮದ ಮೇಲೆ ಹಚ್ಚುವುದರಿಂದ ಕಜ್ಜಿ ತುರಿ, ನಷೆ, ದದ್ದು ಇತ್ಯಾದಿ ಚರ್ಮವ್ಯಾಧಿಗಳಲ್ಲಿ ಉತ್ತಮ ಗುಣ ಕಂಡುಬರುವುದು.

ಅರಿಶಿನದ ಕೊಂಬು ಸುಟ್ಟು, ಆ ಭಸ್ಮದೊಂದಿಗೆ ಉಪ್ಪು ಮಿಶ್ರ ಮಾಡಿ ಹಲ್ಲು ತಿಕ್ಕುವುದರಿಂದ ಹಲ್ಲುನೋವು ನಿಂತುಹೋಗುವುದು ಮತ್ತು ದಂತಕ್ಷಯ ನಿವಾರಣೆಯಾಗುವುದು.

ಬಿಸಿಯಾದ ಹಾಲಿಗೆ ಸ್ವಲ್ಪ ಅರಿಶಿನದ ಪುಡಿ ಮತ್ತು ಕಾಳು ಮೆಣಸಿನಪುಡಿ ಸೇರಿಸಿ ಸೇವಿಸುವುದರಿಂದ ಕೆಮ್ಮು, ನೆಗಡಿ ಮತ್ತು ಗಂಟಲು ನೋವು ಇದ್ದಲ್ಲಿ ಉಪಶಮನವಾಗುವುದು.

LEAVE A REPLY

Please enter your comment!
Please enter your name here