ರಾತ್ರಿಯ ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೆ ಮಾಡಿದಲ್ಲಿ ಜೀವನದಲ್ಲಿ ಬರುವ ಅನೇಕ ಕಷ್ಟಗಳು ದೂರವಾಗುತ್ತವೆ ಶಾಸ್ತ್ರದಲ್ಲಿ ರಾತ್ರಿ ಹಾಗು ಹಗಲಿಗೆ ಬೇರೆ ಬೇರೆ ನಿಯಮಗಳು ಜಾರಿಯಲ್ಲಿವೆ ಈ ನಿಯಮಗಳ ಪ್ರಕಾರ ನಡೆದಲ್ಲಿ ಜೀವನದಲ್ಲಿ ಬರುವ ಎಲ್ಲ ದುಃಖಗಳಿಗೆ ಮುಕ್ತಿಸಿಗುವ ಜೊತೆಗೆ ಯಶಸ್ಸು ಲಭಿಸುತ್ತದೆ ಆಧುನಿಕ ಜಗತ್ತಿನಲ್ಲಿ ಜನರು ಶಾಸ್ತ್ರದ ಪ್ರಕಾರ ನಡೆಯುವುದಿಲ್ಲ ಹಾಗಾಗಿ ಅವರ ಜೀವನದಲ್ಲಿ ದುಃಖ ಅಸಫಲತೆ ಬರ್ತಾ ಇರುತ್ತೆ.
ರಾತ್ರಿ ಮಲಗುವಾಗ ಸೆಂಟ್ ಡಿಯೋ ಸೇರಿದಂತೆ ಸುಗಂಧ ದ್ರವ್ಯಗಳನ್ನು ಅನೇಕರು ಹಚ್ಚಿಕೊಳ್ತಾರೆ ಆದ್ರೆ ಇದು ಒಳ್ಳೆಯ ಹವ್ಯಾಸವಲ್ಲ ನಮ್ಮ ದೇಹದಿಂದ ಬರುವ ಸುವಾಸನೆ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
ಸನಾತನ ಧರ್ಮದ ಪ್ರಕಾರ ರಾತ್ರಿ ಮಲಗುವ ಮುನ್ನ ಕೈ, ಕಾಲು ಹಾಗೂ ಮುಖವನ್ನು ತೊಳೆದು ಬಟ್ಟೆಯಲ್ಲಿ ಒರೆಸಿಕೊಂಡು ಭಗವಂತನ ಧ್ಯಾನ ಮಾಡ್ತಾ ಮಲಗಬೇಕು ಹೀಗೆ ಮಾಡಿದ್ರೆ ರಾತ್ರಿ ಮಲಗಿದ ವೇಳೆ ನಾವೆಷ್ಟು ಬಾರಿ ಉಸಿರಾಡುತ್ತೇವೆಯೋ ಅಷ್ಟು ಬಾರಿ ದೇವರ ನಾಮ ಜಪಿಸಿದಂತಾಗುತ್ತದೆ.
ರಾತ್ರಿ ಹಾಸಿಗೆಗೆ ಹೋದ ತಕ್ಷಣ ಕಟ್ಟಿದ್ದ ಕೂದಲುಗಳನ್ನು ಬಿಚ್ಚಿಮಲಗುವ ಹವ್ಯಾಸ ಅನೇಕ ಮಹಿಳೆಯರಿಗಿರುತ್ತದ ಪುರಾಣದ ಪ್ರಕಾರ ಬಿಚ್ಚಿದ ಕೂದಲು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಹಾಗಾಗಿ ರಾತ್ರಿ ಮಲಗುವಾಗ ಕೂದಲನ್ನು ಕಟ್ಟಿ ಮಲಗಬೇಕು.
ರಾತ್ರಿ ವೇಳೆ ಸ್ಮಶಾನಕ್ಕೆ ಅಥವಾ ಸ್ಮಶಾನದ ಕಡೆ ಹೋಗಬಾರದು ಯಾವಾಗಲೂ ಅಲ್ಲಿನಕಾರಾತ್ಮಕ ಶಕ್ತಿ ನೆಲೆಸಿರುತ್ತದೆ ಮುಸ್ಸಂಜೆಯ ನಂತ್ರ ನಕಾರಾತ್ಮಕ ಶಕ್ತಿಯ ಪ್ರಭಾವಹೆಚ್ಚಿರುತ್ತದೆ ಅದು ನಮ್ಮ ಆತ್ಮಸಾಕ್ಷಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಹಾಗೆ ಸೂರ್ಯಾಸ್ತದ ನಂತ್ರಸ್ನಾನ ಮಾಡಬಾರದೆಂದು ಗ್ರಂಥಗಳಲ್ಲಿ ಹೇಳಲಾಗಿದೆ.
ರಾತ್ರಿ ಹೊತ್ತು ನಾಲ್ಕೈದು ರಸ್ತೆ ಕೂಡುವ ಜಾಗಕ್ಕೆ ಹೋಗಬಾರದು ಪುರಾಣದ ಪ್ರಕಾರ ಅಲ್ಲಿ ರಾಹು ನೆಲೆಸಿರ್ತಾನೆ ಅಪರಾಧ ಹಾಗೂ ತಪ್ಪುಗಳ ಮೂಲ ಕಾರಣ ರಾಹು ಹಾಗೆ ಅಲ್ಲಿ ಭೂತ, ಪಿಶಾಚಿಗಳು ನೆಲೆಸಿರುತ್ತವೆ ದುಷ್ಟಶಕ್ತಿಗಳ ವಾಸಸ್ಥಾನದಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿರುತ್ತದೆ ರಾತ್ರಿ ಸಮಯ ಅನವಶ್ಯಕವಾಗಿ ಹೊರಗೆ ಹೋಗುವ ಬದಲು ಮನೆಯಲ್ಲಿರುವುದು ಒಳ್ಳೆಯದು.