ಅಬ್ಬಬ್ಬಾ ಹುಣಸೆ ಹಣ್ಣಿನ ಅರೋಗ್ಯ ಲಾಭಗಳು ಇಷ್ಟೊಂದು ಇದ್ಯಾ..!!

0
1880

ಆರೋಗ್ಯದ ದೃಷ್ಟಿಯಿಂದ ಹೊಸ ಹುಣಸೆಹಣ್ಣಿಗಿಂತ ಹಳೆಯ ಹುಣಸೆಹಣ್ಣು ಉತ್ತಮ ಹುಣಸೆಹಣ್ಣಿನ ರಸ ವಿರೇಚಕ ಗುಣವುಳ್ಳದ್ದು ಇದು ಪಿತ್ತ ಪ್ರಕೋಪವನ್ನು ನಿವಾರಿಸುವುದು ಆಲ್ಕೋಹಾಲ್ ಸೇವಿಸುವುದರಿಂದ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟುವುದು ಗೋಲಿ ಗಾತ್ರದ ಹುಣಸೆಹಣ್ಣು ಸ್ವಲ್ಪ ಬೆಲ್ಲ ಜೀರಿಗೆ ಚೆನ್ನಾಗಿ ಕುಟ್ಟಿ ದಿನಕ್ಕೆ ಮೂರುವರ್ತಿ ಸೇವಿಸುವುದರಿಂದ ಕಾಮಾಲೆ, ಹೊಟ್ಟೆ ನುಲಿತ, ತಲೆಸುತ್ತುವುದು, ವಾಂತಿಯಾಗುವಿಕೆ, ಈ ಸಂದರ್ಭಗಳಲ್ಲಿ ಉತ್ತಮ ಗುಣ ಕಂಡುಬರುವುದು.

ಹುಣಸೆಹಣ್ಣು, ಪುದಿನಾ, ಮೆಣಸು ಹುರಿದ ಏಲಕ್ಕಿ ಕಾಳು ಯೋಗ್ಯ ಪ್ರಮಾಣದಲ್ಲಿ ತೆಗೆದುಕೊಂಡು ನುಣ್ಣಗೆ ಅರೆದು ರುಚಿಗೆ ತಕ್ಕಷ್ಟು ಉಪ್ಪು ಕೂಡಿಸಿ ಸೇವಿಸುವುದರಿಂದ ಹೊಟ್ಟೆ ನೋವು ಶಾಂತವಾಗುವುದು ಈ ಚಟ್ನಿ ಸೇವಿಸುವುದರಿಂದ ವಾಂತಿ ಮತ್ತು ಭೇದಿ ಬಹುತೇಕ ಹತೋಟಿಗೆ ಬರುವುದು ಈ ಚಟ್ನಿಯು ಕಾಲರಾ ರೋಗದಲ್ಲಿ ಗುಣಕಾರಿ.

ಒಂದು ಟೀ ಚಮಚ ಹುಣಸೆ ಗೊಜ್ಜನ್ನು ಒಂದು ಬಟ್ಟಲು ಮಜ್ಜಿಗೆ ಬೆರೆಸಿ ಒಂದೆರಡು ಬಾಳೆಹಣ್ಣು ಸುಲಿದು ತಿರುಳನ್ನು ಚೆನ್ನಾಗಿ ಮಸೆಯಿರಿ ಆ ತಿರುಳು ತಿಂದು ಹುಳಿ ಮಿಶ್ರಿತ ಮಜ್ಜಿಗೆ ಸೇವಿಸಿರಿ ಇದರಿಂದ ಆಮಶಂಕೆ ಅತಿಸಾರ ಶಮನವಾಗುವುದು ಹುಣಸೆಹಣ್ಣಿನ ಸಕ್ಕರೆ ಪಾನಕ ಸೇವಿಸುವುದರಿಂದ ಉಷ್ಣದ ತಲೆನೋವು ನಿಲ್ಲುವುದು.

ಅಜೀರ್ಣವಾಗಿರುವಾಗ ಸ್ವಲ್ಪ ಹುಣಸೆ ಹಣ್ಣು, ಮೆಣಸು, ಉಪ್ಪು ಚೆನ್ನಾಗಿ ಅಗಿದು ರಸ ಹೀರುವುದರಿಂದ ಗುಣ ಉಂಟು, ವಾಕರಿಕೆ, ತಲೆಸುತ್ತುವುಕೆ, ಕಂಡು ಬಂದಾಗ ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಹಾಕಿ ಕಿವುಚಿ ತಿಳಿ ಬಸಿದು ಸಕ್ಕರೆ ಬೆರೆಸಿ ಆ ತಿಳಿಯನ್ನು ಸೇವಿಸಿ ಹುಣಸೆ ಹಣ್ಣು ಚೆನ್ನಾಗಿ ಸೇವಿಸುವುದರಿಂದ ಕೆಮ್ಮು ಬರುವುದು ಮತ್ತು ಸಂಭೋಗ ಸಾಮರ್ಥ್ಯ ಕುಗ್ಗುವುದು ಆದ್ದುದರಿಂದ ಅಗತ್ಯಗಿಂತ ಹೆಚ್ಚು ಹುಣಸೆ ಹಣ್ಣನ್ನು ಸೇವಿಸುವುದು ಒಳಿತಲ್ಲ.

ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಹಾಕಿ ಚೆನ್ನಾಕಿ ಕಿವುಚಿ ರಸ ತೆಗೆಯಿರಿ ಗೊಜ್ಜಿನಂತಿರುವ ಒಂದು ಬಟ್ಟಿಲು ರಸವನ್ನು ಸ್ಟೀಲ್ ಡಬ್ಬಿಯಲ್ಲಿ ಸುರಿದು ಕಾಯಿಸಿ ಈ ಗೊಜ್ಜಿಗೆ ಒಂದು ಟಿ ಚಮಚ ಅಡುಗೆ ಉಪ್ಪು ಮತ್ತು ಒಂದು ಗೋಲಿ ಗಾತ್ರ ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ ನಂತ್ರ ಬಿಸಿಯಾದ ಗೊಜ್ಜನ್ನು ಹುಳುಕಿರುವ ಭಾಗದ ಮೇಲೆ ಹದವರಿತು ಲೇಪಿಸಿ ದಿನಕ್ಕೆ ಒಂದುಸಾರಿ ಮೂರು ದಿನಗಳ ಕಾಲ ಈ ಉಪಚಾರ ಮಾಡುವುದರಿಂದ ನೋವು ಕಡಿಮೆಯಾಗುವುದು ಮತ್ತು ಊತ ನಿಲ್ಲುವುದು.

ಹುಣಸೆ ಎಲೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರಿನಿಂದ ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು ಗುಣವಾಗುವುದು ಅದೇ ನೀರಿನಿಂದ ವ್ರಣಗಳನ್ನು ತೊಳಿಯಬಹುದು.

LEAVE A REPLY

Please enter your comment!
Please enter your name here