ತಕ್ಷಣ ಜ್ವರ ಕಡಿಮೆಯಾಗಲು ಸುಲಭ ಮನೆಮದ್ದುಗಳು..!!

0
1140

ಬಿಟ್ಟು ಬಿಟ್ಟು ಜ್ವರ ನಿಮ್ಮನ್ನು ಕಾಡುತ್ತಿದ್ದರೆ ಒಂದು ಪಾತ್ರೆಯಲ್ಲಿ ನೀರನ್ನು ಚೆನ್ನಾಗಿ ಕುದಿಸಿ ಕುದಿಯುತ್ತಿರುವ ನೀರಿಗೆ ಒಂದಷ್ಟು ತುಳಸಿ ಎಲೆಗಳನ್ನು ಹಾಕಿ ತುಳಸಿ ಎಲೆಗಳು ಕುದಿಯುವ ನೀರಿನಲ್ಲಿ ಬೆಂದ ನಂತರ ಸ್ಟವ್ ಅನ್ನು ಆಫ್ ಮಾಡಿ ಕುದಿಯುವ ನೀರು ತಾನಾಗಿಯೇ ಆರಲು ಬಿಡಿ ಉಗುರು ಬೆಚ್ಚಗಿನ ಸ್ಥಿತಿಗೆ ಆ ನೀರು ಬಂದಾಗ ಅದಕ್ಕೆ ಸ್ವಲ್ಪ ಶುದ್ಧ ಜೇನನ್ನು ಮಿಶ್ರಮಾಡಿ ಈ ಮಿಶ್ರಣವನ್ನು ದಿನಕ್ಕೆ ಮೂರು ಬಾರಿ ಬೆಳಗ್ಗೆ ಮಧ್ಯಾಹ್ನ ಹಾಗೂ ರಾತ್ರಿ ಕುಡಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಬಿಟ್ಟು ಬಿಡದೆ ಕಾಡುವ ಜ್ವರ ಮಾಯವಾಗುತ್ತದೆ.

ಒಂದು ಲೋಟದ ನೀರಿಗೆ ಸ್ವಲ್ಪ ದನಿಯ ಕಾಳನ್ನು ಹಾಕಿ ಚೆನ್ನಾಗಿ ಕುದಿಸಬೇಕು ಚೆನ್ನಾಗಿ ಕುದಿಸಿ ನಂತರ ಆರಿಸಿ ತಣ್ಣಗಾಗಲು ಬಿಡಿ ಪೂರ್ಣವಾಗಿ ತಣ್ಣಗಾದ ಮೇಲೆ ಅದನ್ನು ಟೀ ಸೋಸುವ ರೀತಿಯಲ್ಲಿ ಸೊಸಿ ಸ್ವಲ್ಪ ಹಾಲು ಮತ್ತು ಸಕ್ಕರೆ ಬೆರೆಸಿ ಮತ್ತೊಮ್ಮೆ ಸ್ವಲ್ಪ ಸಮಯ ಕಾಯಿಸಿ ಇಟ್ಟುಕೊಳ್ಳಿ ಹೀಗೆ ಜ್ವರ ಇರುವ ಸಮಯದಲ್ಲಿ ದಿನಕ್ಕೆ ಮೂರು ಬಾರಿ ಈ ರೀತಿಯ ಕೊತ್ತಂಬರಿ ಕಾಳಿನ ಅಂದರೆ ದನಿಯ ಬೀಜದ ಟೀ ಮಾಡಿ ಕುಡಿಸುವುದರಿಂದ ಮೈಯಲ್ಲಿನ ಜ್ವರ ಬಿಟ್ಟು ಹೋಗುತ್ತದೆ.

ಜ್ವರದ ಜೊತೆಯಲ್ಲಿ ಗಂಟಲು ಕಿರಿಕಿರಿ, ಕೆಮ್ಮು ಹಾಗೂ ಗಂಟಲು ಕೆರೆತ ಸಮಸ್ಯೆಗಳು ಹೆಚ್ಚಿದ್ದರೆ ಒಂದು ಗ್ಲಾಸ್ ಬ್ಲಾಕ್ ಟಿ ಯನ್ನು ಮಾಡಿಕೊಳ್ಳಿ ಹಾಗೂ ಅದರಲ್ಲಿ ಸ್ವಲ್ಪ ಶುಂಠಿಯನ್ನು ಹಾಕಿ ಚೆನ್ನಾಗಿ ಕುದಿಸಿರಿ ನಂತರ ಕುದಿ ಆರಿದ ಮೇಲೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಬಿಸಿ ಇರುವಾಗಲೇ ಕುಡಿದರೆ ಗಂಟಲಲ್ಲಿ ಕೆರೆತ ಹಾಗೂ ಕೆಮ್ಮಿನ ಸಮಸ್ಯೆಗಳಿದ್ದರೆ ನಿವಾರಣೆಯಾಗುತ್ತದೆ.

ಜ್ವರ ಅತಿ ಹೆಚ್ಚಿದ್ದು ಕೂಡಲೇ ಕಡಿಮೆಯಾಗಬೇಕಾದರೆ ನೀರಿನಲ್ಲಿ ಒಣದ್ರಾಕ್ಷಿಗಳನ್ನು ಚೆನ್ನಾಗಿ ನೆನೆಸಿ ನಂತರ ದ್ರಾಕ್ಷಿಯನ್ನು ಚೆನ್ನಾಗಿ ಕುಟ್ಟಿ ಬಜ್ಜಿ ಮಾಡಿ ಮತ್ತೆ ಅದೇ ನೀರಿನಲ್ಲಿ ಮಿಶ್ರಣ ಮಾಡಿ ಅರ್ಧ ಗಂಟೆ ಬಿಟ್ಟು ಆ ನೀರನ್ನು ಸೋಸಿ ಅದಕ್ಕೆ ಅರ್ಧ ನಿಂಬೆಹಣ್ಣಿನ ರಸವನ್ನು ಸೇರಿಸಿ ಕುದಿಸಿದರೆ ತಕ್ಷಣವೇ ಜ್ವರ ಕಡಿಮೆಯಾಗುವ ಸಾಧ್ಯತೆಗಳು ಹೆಚ್ಚಿದೆ.

LEAVE A REPLY

Please enter your comment!
Please enter your name here