ದೇಹದ ತೂಕವನ್ನು ಒಂದೇ ವಾರದಲ್ಲಿ ಕಡಿಮೆಮಾಡುತ್ತದೆ ಈ ಪಾನಕ.

0
2390

ಆರೋಗ್ಯ ನಮ್ಮ ಹತೋಟಿಯಲ್ಲಿ ಇರಬೇಕಾದರೆ ಮೊದಲು ದೇಹದ ತೂಕ ನಮ್ಮ ಹತೋಟಿಗೆ ತರಬೇಕು, ಇತ್ತೀಚಿನ ದಿನಗಳಲ್ಲಿ ದೇಹದ ತೂಕದ ಬಗ್ಗೆ ಗಮನಹರಿಸುವುದು ಬಹಳ ಕಷ್ಟಕರವಾಗಿದೆ, ಇನ್ನೂ ಕೆಲವರು ದೇಹದ ತೂಕವನ್ನು ಕಡಿಮೆ ಮಾಡಲು ಹಲವು ವಿಧಾನಗಳನ್ನು ಅನುಸರಿಸಿ ಬೆವರು ಸುರಿಸುತ್ತಾರೆ, ಕಾರಣ ಫಿಟ್ ಆದ ದೇಹ ಅಷ್ಟು ಸುಲಭವಾಗಿ ಸಿಗುವುದಿಲ್ಲ, ಅದೇ ಕಾರಣಕ್ಕಾಗಿ ವ್ಯಾಯಾಮ ಮತ್ತು ಯೋಗ ಮತ್ತು ಶಿಸ್ತುಬದ್ಧ ಆಹಾರ ಕ್ರಮದಿಂದ ಇರಬೇಕಾಗುತ್ತದೆ.

ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ನಿಮಗೆ ಇಷ್ಟವಾದ ಹಲವು ಆಹಾರಗಳನ್ನು ತಿಳಿಸಬೇಕಾಗಿ ಬರುತ್ತದೆ, ಆದರೆ ಇಂದಿನ ಜೀವನ ಶೈಲಿ ಬದಲಾಯಿಸಿಕೊಳ್ಳಲು ಬಹಳ ಕಷ್ಟ ಆದ್ದರಿಂದ ನೀವು ದೇಹದ ತೂಕದ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟಿರುತ್ತೀರಿ, ಹಸಿವಾದ ಕೂಡಲೇ ಬರ್ಗರ್ ಅಥವಾ ಚಿಪ್ಸ್ ನಂತಹ ಆಹಾರಗಳನ್ನು ಸೇವನೆ ಮಾಡಿ ಬಿಡುತ್ತೇವೆ.

ಈ ರೀತಿಯ ಆಹಾರಗಳಲ್ಲಿ ಕ್ಯಾಲರಿ ಉನ್ನತ ಮಟ್ಟದಲ್ಲಿ ಇರುತ್ತದೆ, ಈ ಕ್ಯಾಲರಿಗಳು ದೇಹದಲ್ಲಿ ಶೇಖರಣೆಯಾಗಿ ಬೊಜ್ಜು ಹೆಚ್ಚಿಸುವುದಲ್ಲದೆ ಹೃದಯ ಸಂಬಂಧಿ ಕಾಯಿಲೆಗಳು ನಿಮ್ಮ ದೇಹವನ್ನು ಆವರಿಸುವಂತೆ ಮಾಡುತ್ತದೆ, ಅಷ್ಟೇ ಅಲ್ಲದೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿ ರಕ್ತ ಸಂಚಾರವನ್ನು ನಿಲ್ಲಿಸಿಬಿಡಬಹುದು, ಇದೇ ಕಾರಣಕ್ಕಾಗಿಯೇ ತಡಮಾಡದೆ ಮೊದಲು ಆಹಾರಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು, ಅದರಲ್ಲೂ ಇಂದು ನಾವು ತಿಳಿಸುವ ಬೆಲ್ಲದ ನಿಂಬೆ ನೀರಿನ ಆರೋಗ್ಯ ಲಾಭವನ್ನು ತಿಳಿಸುತ್ತೇವೆ.

ಮೊದಲಿಗೆ ನಿಂಬೆಹಣ್ಣಿನ ಲಾಭಗಳನ್ನು ತಿಳಿಯೋಣ.

ನಿಂಬೆಹಣ್ಣಿನಲ್ಲಿ ಅಧಿಕ ವಿಟಮಿನ್ ಗಳು ಮತ್ತು ಸಿಟ್ರಸ್ ಅಂಶ ಇರುವುದರಿಂದ ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ, ಬೆಳಿಗ್ಗೆ ಪ್ರತಿದಿನ ನಿಂಬೆಹಣ್ಣಿನ ರಸ ಸೇವನೆ ಮಾಡಿದರೆ ತೂಕ ಕಳೆದುಕೊಳ್ಳಲು ಬಯಸುವವರಿಗೆ ಇದು, ಆಸ್ಟ್ರೇಲಿಯಾದ ನಿಂಬೆಹಣ್ಣಿನಲ್ಲಿ ಆಮ್ಲೀಯ ಗುಣಗಳು ಹೆಚ್ಚಾಗಿ ಇರುವುದರಿಂದ ದೇಹದ ಕ್ಯಾಲರಿ ದಹಿಸಲು ಮತ್ತು ಜೀರ್ಣಕ್ರಿಯೆ ಪ್ರಕ್ರಿಯೆ ಹೆಚ್ಚಿಸಲು ಸಹಕರಿಸುತ್ತದೆ.

ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಿ, ದೇಹಕ್ಕೆ ಬೇಕಾದ ನೀರಿನ ಅಂಶವನ್ನು ಸಮರ್ಥವಾಗಿ ಪೂರೈಸುವಂತೆ ಮಾಡುತ್ತದೆ, ಹಾಗಾಗಿ ಪ್ರತಿ ಬಾರಿ ನೀವು ನೀರು ಕುಡಿಯುವಾಗ ಅದರಲ್ಲಿ ನಿಂಬೆರಸ ಹಿಂಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ, ವಿಟಮಿನ್-ಸಿ ನಿಂಬೆಹಣ್ಣಿನಲ್ಲಿ ಅಧಿಕವಾಗಿ ಇರುವುದರಿಂದ ಹೃದಯ ಸಂಬಂಧಿ ರೋಗಗಳು ಬಾರದಂತೆ ತಡೆಯುತ್ತದೆ, ಈ ಮೊದಲೇ ಹೇಳಿದಂತೆ ರಕ್ತದೊತ್ತಡವನ್ನು ಸಮತೋಲನದಲ್ಲಿ ಇರುತ್ತದೆ ಅಷ್ಟೇ ಅಲ್ಲದೆ ಮಳೆಗಾಲದಲ್ಲಿ ಉಂಟುಮಾಡುವ ವೈರಸ್ ವಿರುದ್ಧ ಹೋರಾಡುತ್ತದೆ.

ನಿಂಬೆಹಣ್ಣಿನ ನೀರು ಕುಡಿಯುವ ಅಭ್ಯಾಸ ಇದ್ದವರಿಗೆ ಮುಖದ ಚರ್ಮದಲ್ಲಿ ನೆರಿಗೆ ಅಥವಾ ಚರ್ಮ ಒಣಗುವ ಸಮಸ್ಯೆಗಳು ಕಾಣುವುದಿಲ್ಲ, ಕಾರಣ ನಿಂಬೆಹಣ್ಣು ದೇಹದ ನೀರಿನ ಪ್ರಮಾಣವನ್ನು ಸಮತೋಲನದಲ್ಲಿ ಇರುವುದರಿಂದ ಈ ಸಮಸ್ಯೆಗಳು ದೂರವಾಗುತ್ತವೆ, ಹಾಗೂ ಮಾನವ ದೇಹಕ್ಕೆ ಬಲು ಪ್ರಮುಖವಾದ ಚಯಾಪಚಯ ಕ್ರಿಯೆ ಗೆ ವೇಗ ನೀಡಿ ಜೀರ್ಣಕ್ರಿಯೆಯನ್ನು ಸರಾಗಗೊಳಿಸುವುದು.

ಬೆಲ್ಲದ ಲಾಭಗಳ ಬಗ್ಗೆ ಮಾತನಾಡಬೇಕಾದರೆ ಹೆಚ್ಚಿನವರು ಪ್ರತಿಬಾರಿ ಸಕ್ಕರೆಯಲ್ಲಿ ಅತಿಯಾಗಿ ಬಳಸುತ್ತಾರೆ ಹಾಗೂ ಬೆಲ್ಲವನ್ನು ಕಡೆಗಣಿಸುತ್ತಾರೆ, ಆದರೆ ನೆನಪಿರಲಿ ದೇಹಕ್ಕೆ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ರೋಗಗಳನ್ನು ತರುವುದು ಸಕ್ಕರೆ, ಆದರೆ ಅದರ ಬದಲಿಗೆ ಬೆಲ್ಲ ಸೇವನೆ ಹಲವಾರು ಉಪಯೋಗಗಳನ್ನು, ಬೆಲ್ಲದಿಂದ ಕೃತಕ ಸಿಹಿ ಇರುವುದಿಲ್ಲ ಇದನ್ನು ಸಂಪೂರ್ಣವಾಗಿ ಸಕ್ಕರೆಗೆ ಪರ್ಯಾಯವಾಗಿ ಬಳಸಿ.

ಬೆಲ್ಲವೂ ನಾಲಿಗೆಗೆ ಸಿಹಿ ಅಂಶವನ್ನು ನೀಡಲು ಇದರಲ್ಲಿರುವ ನೈಸರ್ಗಿಕ ಸುಕ್ರೋಸ್ ಮುಖ್ಯ ಕಾರಣ, ಅಷ್ಟೇ ಅಲ್ಲದೆ ಬೆಲ್ಲದಲ್ಲಿ ನಾರಿನಂಶ ಉನ್ನತಮಟ್ಟದಲ್ಲಿ ಇರುತ್ತದೆ ಹಾಗೂ ಖನಿಜಾಂಶ ಮತ್ತು ಪ್ರೋಟೀನ್ ಬಹಳಷ್ಟಿದೆ, ಬೆಲ್ಲವೂ ದೇಹದಲ್ಲಿನ ಅನವಶ್ಯಕ ಕೊಬ್ಬನ್ನು ಕರಗಿಸಲು ಹಾಗೂ ಚಯಾಪಚಯ ಕ್ರಿಯೆ ಸರಾಗವಾಗಿ ನಡೆದು ದೇಹದ ತೂಕ ಇಳಿಸಲು ನೆರವಾಗುವುದು.

LEAVE A REPLY

Please enter your comment!
Please enter your name here