ಆಲೂಗಡ್ಡೆ ಸಿಪ್ಪೆಗಳನ್ನು ಬಿಸಾಕುವ ಬದಲು ಈ ರೀತಿ ಉಪಯೋಗ ಮಾಡಿ! ತುಂಬಾ ಆಶ್ಚರ್ಯ ಪಡುತ್ತೀರಾ..!!

0
1556

ಸಾಮಾನ್ಯವಾಗಿ ಅಡುಗೆಗೆ ಆಲೂಗಡ್ಡೆಯನ್ನು ಬಳಸಿದ ನಂತರ ಅದರ ಸಿಪ್ಪೆಯನ್ನು ನಾವು ಬಿಸಾಕುತ್ತೇವೆ ಹಳ್ಳಿಯ ಜನ ಹಸುಗಳನ್ನು ಸಾಕಿದ್ದರೆ ಅದನ್ನು ಹಸುಗಳ ಊಟಕ್ಕಾಗಿ ಬಳಸುತ್ತಾರೆ ಇದನ್ನು ಬಿಟ್ಟರೆ ಬೇರೆ ಯಾವ ಕಾರಣಕ್ಕೂ ನಾವು ಆಲೂಗಡ್ಡೆ ಸಿಪ್ಪೆ ಯನ್ನು ಬಳಸುವುದಿಲ್ಲ ಆದರೆ ಇಂದು ನಾವು ಆಲೂಗೆಡ್ಡೆ ಸಿಪ್ಪೆಯನ್ನು ಎಷ್ಟು ರೀತಿಯಲ್ಲಿ ಬಳಸಿಕೊಳ್ಳಬಹುದು ಮತ್ತು ಎಷ್ಟೆಲ್ಲಾ ಉಪಯೋಗಗಳನ್ನು ಸಿಪ್ಪೆಯಿಂದ ಪಡೆಯಬಹುದು ಎಂಬುದರ ಬಗ್ಗೆ ಮಾಹಿತಿ ನೀಡುತ್ತೇವೆ ಸ್ನೇಹಿತರೆ ನಿಮಗೆ ತಿಳಿದಿರಲಿ ಆಲೂಗಡ್ಡೆ ಗಿಂತ ಹೆಚ್ಚಿನ ಉಪಯುಕ್ತ ಪ್ರೋಟೀನ್ಗಳು ಅದರ ಸಿಪ್ಪೆಯಲ್ಲಿ ಸಿಗುತ್ತದೆ.

ಡಾರ್ಕ್ ಸರ್ಕಲ್ ತೆಗೆಯಲು : ಕಣ್ಣುಗಳ ಕೆಳಗೆ ಇರುವ ಡಾರ್ಕ್ ಸರ್ಕಲ್ ತೆಗೆಯಲು, ಚರ್ಮದ ಬಣ್ಣವನ್ನು ಹೆಚ್ಚಿಸಲು ಆಯ್ಲಿ ಸ್ಕಿನ್ ಗಳಿಗಾಗಿ ಆಲೂಗಡ್ಡೆ ಸಿಪ್ಪೆಗಳನ್ನು ಬಳಸಬಹುದು ಆಲೂಗಡ್ಡೆ ಸಿಪ್ಪೆ ಯನ್ನು ಡಾರ್ಕ್ ಸರ್ಕಲ್ ಇರುವ ಜಾಗದಲ್ಲಿ ಚೆನ್ನಾಗಿ ಮಸಾಜ್ ಮಾಡಿದರೆ ಈ ಸಮಸ್ಯೆಗಳಿಂದ ದೂರವಾಗಬಹುದು ಆದರೆ ಅದಕ್ಕೂ ಮೊದಲು ಸಿಪ್ಪೆಯನ್ನು ಸ್ವಲ್ಪ ಬೆಚ್ಚಗೆ ಆಗುವವರಿಗೆ ನೀರಿನಲ್ಲಿ ಕಾಯಿಸಿ ನಂತರ ಬಳಸಿ.

ತ್ವಚೆ ಕಾಂತಿ ಗಾಗಿ : ಆಲೂಗಡ್ಡೆ ಸಿಪ್ಪೆಯನ್ನು ಮೊದಲು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ, ನಂತರ ಅದರಿಂದ ರಸವನ್ನು ತೆಗೆಯಿರಿ ಈ ರೀತಿ ತೆಗೆದ ರಸವನ್ನು ಹತ್ತಿಯನ್ನು ಬಳಸಿ ನಿಮ್ಮ ಮುಖದ ಚರ್ಮಕ್ಕೆ ಮಸಾಜ್ ಮಾಡಿ ಸ್ವಲ್ಪ ಸಮಯ ಕಳೆದ ನಂತರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ ಈ ರೀತಿ ಮಾಡುವುದರಿಂದ ನಿಮ್ಮ ತ್ವಚೆ ಕಾಂತಿಯುತವಾಗುತ್ತದೆ.

ಜಂಗು ಕಲೆಗಳನ್ನು ತೆಗೆಯಲು : ಬಟ್ಟೆ ನಲ್ಲಿ ತುಕ್ಕು ಅಥವಾ ಜಂಗೂ ಕಲೆಗಳಿದ್ದರೆ ಅದನ್ನು ತೆಗೆಯಲು ನೀವು ಆಲೂಗಡ್ಡೆ ಸಿಪ್ಪೆಗಳನ್ನು ಬಳಸಿಕೊಳ್ಳಬಹುದು ಕೇವಲ ಆಲೂಗಡ್ಡೆ ಸಿಪ್ಪೆಗಳಿಂದ ಆ ಕಲೆಗಳನ್ನು ಉಜ್ಜಿ ನಂತರ ಸಾಮಾನ್ಯ ರೀತಿಯಲ್ಲಿ ನಿಮ್ಮ ಬಟ್ಟೆಗಳನ್ನು ತೊಳೆಯಬಹುದು ಈ ರೀತಿ ಮಾಡುವುದರಿಂದ ತುಕ್ಕಿನ ಕಲೆಗಳು ಮಾಯವಾಗುತ್ತದೆ.

ಗಿಡಗಳಿಗೆ ಗೊಬ್ಬರವಾಗಿ : ಆಲೂಗಡ್ಡೆ ಸಿಪ್ಪೆಗಳನ್ನು ನಿಮ್ಮ ಮನೆ ಅಂಗಳದಲ್ಲಿ ಪಾಟಿನಲ್ಲಿ ಬೆಳೆದಿರುವ ಗಿಡಗಳಿಗೆ ಉತ್ತಮ ಗೊಬ್ಬರದ ಹಾಗೆ ಬಳಕೆ ಮಾಡಬಹುದು ಅಷ್ಟೇ ಅಲ್ಲದೆ ಫೋಟಿಲೇಸರ್ ಆಗಿ ಕೂಡ ಬಳಸಬಹುದು ನಾಲ್ಕು ಲೋಟ ನೀರಿನಲ್ಲಿ ಆಲೂಗಡ್ಡೆ ಸಿಪ್ಪೆಗಳನ್ನು ನೆನೆ ಹಾಕಿ ಮೂರು ದಿನಗಳ ನಂತರ ಬಳಸಿ.

LEAVE A REPLY

Please enter your comment!
Please enter your name here