ಇತ್ತೀಚಿನ ಫಾಸ್ಟ್ ಫುಡ್ ಜಮಾನದಲ್ಲಿ ರೋಗಗಳ ಸಂಖ್ಯೆ ಹೆಚ್ಚುತ್ತಲೇ ಇದೆ, ಯಾವುದೇ ರೋಗವನ್ನೇ ಆಗಲಿ ಬೇಗನೆ ಪತ್ತೆ ಹಚ್ಚಿ ಚಿಕಿತ್ಸೆ ತೆಗೆದುಕೊಂಡು ಅಥವಾ ಜೀವನ ಶೈಲಿಯನ್ನು ಬದಲಿಸಿಕೊಂಡು ಆರೋಗ್ಯಕರವಾಗಿರಬಹುದು. ಇತ್ತೀಚಿಗೆ ಸಕ್ಕರೆ ಕಾಯಿಲೆ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ ಆದ್ದರಿಂದ ಈ ಸಮಸ್ಯೆಗಳಿದ್ದರೆ ದಯವಿಟ್ಟು ನೀವು ಟೆಸ್ಟ್ ಮಾಡಿಸಿಕೊಳ್ಳಿ, ಇದು ನಿಮ್ಮ ಒಳಿತಿಗಾಗಿ.
ಪದೇ ಪದೇ ಮೂತ್ರ ವಿಸರ್ಜನೆ ಆಗುತಿದ್ದರೆ. ಟೈಪ್ ೨ ಡಯಾಬಿಟಿಸ್ ನಲ್ಲಿ ಗ್ಲುಕೋಸ್ ಯಥೇಚ್ಛವಾಗಿದ್ದರೆ ಇದು ಪದೇ ಪದೇ ಮೂತ್ರ ವಿಸರ್ಜನೆಗೆ ಒತ್ತಡ ಹೇರುತ್ತದೆ.
ಯಾವುದೇ ಕೆಲಸ ಮಾಡದಿದ್ದರೂ ಪದೇ ಪದೇ ಆಯಾಸ, ನೀರಡಿಕೆ, ಗಂಟಲು ಒಣಗುತ್ತಿದ್ದರೆ.
ಊಟ ಮಾಡಿ ಸೋಲ್ಪವೇ ಸಮಯ ಕಳೆದಿದ್ದರು ಪದೇ ಪದೇ ಹೊಟ್ಟೆ ಹಸಿಯುತ್ತಿದ್ದರೆ, ಮಧ್ಯರಾತ್ರಿಯೂ ತುಂಬಾ ಹಸಿವಾಗುತಿದ್ದರೆ.
ಸ್ವಲ್ಪ ಸಮಯ ಕೂತರೆ ಅಥವಾ ನಿಂತ ಜಾಗದಲ್ಲಿ ಕಾಲುಗಳ ಜಡೆತ ಅಂದರೆ ಪಾದದಲ್ಲಿ ಜುಮ್ ಹಿಡಿಯುತಿದ್ದರೆ.
ಸಡನ್ ಆಗಿ ಕಣ್ಣು ಮಂಜಾಗುತ್ತಿದ್ದರೆ, ಅಂದರೆ ಮಂಜು ಮಂಜಾಗಿ ಕಾಣುತಿದ್ದರೆ.
ಯಾವುದೇ ಚಿಕ್ಕ ಪುಟ್ಟ ಗಾಯಗಳಾದರೂ ಕೂಡ ಬೇಗ ವಾಸಿಯಾಗದೆ ಇರುವುದು.
ಯಾವುದೇ ಕಾರಣ ವಿಲ್ಲದೆ ದಿಡೀರನೆ ದೇಹದ ತೂಕ ಕಡಿಮೆಯಾಗುವುದು.
ಈ ಮೇಲಿನ ಲಕ್ಷಣಗಳು ಕಂಡುಬಂದರೆ ಇದು ಖಂಡಿತವಾಗಿಯೂ ಸಕ್ಕರೆ ಕಾಯಿಲೆ ಇರಬಹುದು ಆದರೆ ಶೇಕಡಾ 100 ರಷ್ಟು ಇರುತ್ತೆ ಅಂತ ಅಲ್ಲ, ಆದರೆ ಯಾವುದೇ ಕಾಯಿಲೆಗೆ ಮೊದಲ ಹಂತದಲ್ಲಿಯೇ ಚಿಕಿತ್ಸೆ ಪಡೆದರೆ ಬೇಗನೆ ಗುಣವಾಗಬಹುದು.