ಭಾವನಾತ್ಮಕತೆ : ಸೀನು ಹಾಕುವುದು ಅಥವಾ ಸೀನುವುದು ಎಂದರೆ ನಮ್ಮ ದೇಹದಿಂದ ಕೆಲವು ಬ್ಯಾಕ್ಟೀರಿಯಾಗಳನ್ನು ಹೊರಗೆ ಹಾಕುವುದು ಎನ್ನುವ ಅರ್ಥ ಆದರೆ ನಾವು ಹತ್ತಾರು ಜನ ಇರುವ ಕಡೆ ಸೀನು ಬಂದರೆ ಕೂಡಲೇ ತಡೆಹಿಡಿಯಲು ಯತ್ನಿಸುತ್ತೇವೆ ಹೀಗೆ ಮಾಡುವುದರಿಂದ ರೋಗಗಳು ಹರಡುವ ಕೀಟಾಣುಗಳು ಒಳಗೆ ಉಳಿದುಬಿಡುತ್ತದೆ ಆದ್ದರಿಂದ ಒಳಗೆ ಇರುವ ರೋಗಾಣುಗಳು ಅಧಿಕ ರೋಗಾಣುಗಳನ್ನು ಉತ್ಪತ್ತಿಮಾಡಿ ರೋಗಗಳು ಜಾಸ್ತಿಯಾಗುವಂತೆ ಮಾಡಬಲ್ಲದು.
ನಾವು ಬರುವ ಸೀನು ತಡೆಹಿಡಿದು ರೋಗಗ್ರಸ್ಥರಾಗುರುದಕ್ಕಿಂತ ಸೀನಿನ ಮೂಲಕ ರೋಗಾಣುಗಳನ್ನು ಹೊರಗೆ ಹಾಕಿ ಮುಕ್ತರಾಗುವುದು ವಾಸಿ ಅದೇ ರೀತಿ ಅಪನ ವಾಯು ಎಂದರೆ ಗುದದ್ವಾರದ ಮೂಲಕ ಹೊರಬಿಡುವ ವಾಯು ಸಹ ನಮ್ಮ ಆರೋಗ್ಯದ ಸುಧಾರಣೆಗೆ ಸಹಾಯ ಮಾಡುವುದು ನಿಶ್ಚಿತ ಆದರೆ ನಾಗರಿಕ ಸಮಾಜದಲ್ಲಿ ಇಂತಹ ಘಟನೆಗಳು ನಡೆದರೆ ನಾವು ನಾಚಿಕೆಯಿಂದ ಮುಖ ಮುಚ್ಚಿ ಕೊಳ್ಳಬೇಕಾಗುತ್ತದೆ ಅಪಾನವಾಯು ಮಲ-ಮೂತ್ರ ವಿಸರ್ಜನೆಗಳನ್ನು ತಡೆಹಿಡಿಯುವುದು ಸರಿಯಲ್ಲ ಎನ್ನುವ ಸಂಗತಿ ಮನಗಂಡು ನಡೆದುಕೊಳ್ಳಿ ದೇಹ ಎನ್ನುವುದು ತಿಂದ ಆಹಾರ ಜೀರ್ಣ ಮಾಡಿಕೊಳ್ಳುವ ಯಂತ್ರ ಆದರೆ ಯಾವುದೇ ಯಂತ್ರವಾದ ರೂ ಅಲ್ಪಸ್ವಲ್ಪ ಕಲ್ಮಶ ಉಳಿಸಿಕೊಂಡು ಬಿಡುತ್ತದೆ ಆ ಕಲ್ಮಶ ಎನ್ನುವುದು ಸೀನು ಕೆಮ್ಮು ನೆಗಡಿ ಮಲ-ಮೂತ್ರಗಳ ಮೂಲಕ ಹೊರಗೆ ಹೋಗಿ ನಮಗೆ ಆರೋಗ್ಯ ನೀಡುತ್ತದೆ.
ವಾಸ್ತವಿಕತೆ : ದೇಹ ಎನ್ನುವುದು ಒಂದು ಯಂತ್ರ ಹಲವಾರು ಭಾಗಗಳನ್ನು ಹೊಂದಿರುವ ಯಂತ್ರ ಪ್ರತಿಯೊಂದು ಭಾಗ ಸಹ ಕೆಲಸ ಮಾಡಬೇಕು ಆಗಲೇ ಮನುಷ್ಯ ಆರೋಗ್ಯದಿಂದ ಇರಲು ಸಾಧ್ಯ ಇಲ್ಲದಿದ್ದರೆ ಅಲ್ಲಲ್ಲಿ ಅನಾರೋಗ್ಯ ಗೋಚರವಾಗುತ್ತದೆ ನಾವು ರೋಗಾಣುಗಳನ್ನು ಹೊರಹಾಕುವ ಸಮಯದಲ್ಲಿ ಸಂಕೋಚಕ್ಕೆ ಒಳಗಾಗಬಾರದು ಆಗಲೇ ನಮ್ಮ ಆರೋಗ್ಯದಲ್ಲಿ ಕಾಲಕ್ಕೆ ತಕ್ಕಂತೆ ಪ್ರಗತಿ ಕಾಣಬೇಕು.
ವೈಚಾರಿಕತೆ : ವಾಸನೆ, ಸುವಾಸನೆ ನಮ್ಮ ಪ್ರಕೃತಿ ಭಾಗ ಅದೇ ರೀತಿ ನಮ್ಮ ದೇಹ ಸಹ ಉಪಯುಕ್ತ ನಿರುಪಯುಕ್ತ ಎನ್ನುವ ಚಿಂತನೆ ಮಾಡುತ್ತದೆ, ನಾವು ಸೇವಿಸಿದ ಆಹಾರ ಜೀರ್ಣವಾಗಿ ರಕ್ತದಲ್ಲಿ ಸೇರಿಕೊಂಡು ದೇಹಕ್ಕೆ ಬೇಕಾಗುವ ಶಕ್ತಿ ಹಂಚಿಕೆ ಮಾಡುವುದು, ಉಪಯುಕ್ತ ಸಂಗತಿ ನಿರುಪಯುಕ್ತ ಎಂದರೆ ಬಿಡದಿರುವ ತಾಜ್ಯ ನಮ್ಮ ಶರೀರದಲ್ಲಿ ಉಳಿಸಿಕೊಳ್ಳಬಾರದು ಆಗ ನಮ್ಮ ದೇಹವು ರೋಗಗ್ರಸ್ತ ಜಾಗ ಆಗಿಬಿಡುವುದು, ಹೀಗಾಗಿ ನಾವು ಎಚ್ಚರಿಕೆಯಿಂದ ನಿರುಪಯುಕ್ತ ವಸ್ತುಗಳು ಎಂದು ಕರೆಸಿಕೊಳ್ಳುವ ಸೀನು ನೆಗಡಿ ಕೆಮ್ಮು ಮಲ-ಮೂತ್ರ ಕಾಲ ಅವಶ್ಯಕತೆಗೆ ಅನುಗುಣವಾಗಿ ಹೊರಗೆ ಹಾಕಬೇಕು, ಇಲ್ಲದಿದ್ದರೆ ವಿನಾಕಾರಣ ನಾವೇ ರೋಗಕ್ಕೆ ಆಹ್ವಾನ ನೀಡಿದಂತೆ ಆಗುತ್ತದೆ.