ಸಾಸಿವೆ ನುಣ್ಣಗೆ ಅರೆದು ದೇಹಕ್ಕೆ ಹಚ್ಚಿದರೆ ಏನಾಗುತ್ತೆ ಗೊತ್ತಾ..?

0
1155

ಆಯುರ್ವೇದ ಗ್ರಂಥದಲ್ಲಿ ಕುಷ್ಠರೋಗವನ್ನು ಕುರಿತು ಹೇಳುವ ಸಂದರ್ಭದಲ್ಲಿ ತೈಲ ಎಂಬ ಮಾತು ಎಲ್ಲಿಯೇ ಬಂದರೂ ಅಲ್ಲಿ ಎಳ್ಳಿನ ಎಣ್ಣೆಯ ಬದಲು ಸಾಸಿವೆ ಎಣ್ಣೆಯನ್ನ ಬಳಸಬೇಕೆಂದು ಆಯುರ್ವೇದದ ವೈದ್ಯರು ಭಾವಿಸುತ್ತಾರೆ, ಪ್ಲೀಹದ ಊತದ ಲಕ್ಶಣದಲ್ಲಿ ಸಾಸುವೆ ಎಣ್ಣೆಯನ್ನು, ಸಾಸುವೆ ಕಾಲುಗಳನ್ನು ಆಹಾರವಾಗಿ ತೆಗೆದುಕೊಳ್ಳಬೇಕೆಂದು ಕಾಶ್ಯಪ ಸಂಹಿತೆ ಎಂಬ ಆಯುರ್ವೇಧ ಗ್ರಂಥದಲ್ಲಿ ಹೇಳಿದೆ, ಸಾಸಿವೆಯೂ ಕೆಂಪು, ಕಪ್ಪು, ಬಿಳಿ ಮೂರೂ ಬಣ್ಣದಲ್ಲಿ ದೊರೆಯುತ್ತದೆ.

ಇದು ಖಾರವಾಗಿ ಘಾಟಾಗಿರುತ್ತದೆ, ಚೆನ್ನಾಗಿ ಉಷ್ಣ ನೀಡುತ್ತದೆ, ಆದರೆ ಕಫ ವಾತಕ್ಕೆ ಸಂಬಂದಿಸಿದ ರೋಗಗಳನ್ನು ಹೋಗಲಾಡಿಸುವಲ್ಲಿ ಇದು ಅದ್ಬುತ ಕೆಲಸ ಮಾಡುತ್ತದೆ, ಇದರಲ್ಲಿ ತೀಕ್ಷ್ಣ ಗುಣ ಇರುವುದರಿಂದ ಮಾಡುವ ಕೆಲಸವೂ ತೀಕ್ಷ್ಣವಾಗಿರುತ್ತದೆ, ಮುಖ್ಯವಾಗಿ ಸೊಂಟದ ನೋವು, ಕೀಲಿನ ಊತ, ಪಾರ್ಶ್ವ ವಾಯು, ಇರುಳು ಗುರುಡು, ಅಜೀರ್ಣ, ಕೆಮ್ಮು, ನೆಗಡಿ, ಆಯಾಸ, ತುರಿಕೆ, ದದ್ದು, ವಿರೇಚನಗಳ ರೋಗಗಳಿಗೆ ಇದರ ಪ್ರಭಾವ ಹೆಚ್ಚು.

ಚರ್ಮ ರಕ್ಷಕ ಸಾಸುವೆ : ಸಾಸುವೆ ಚರ್ಮ ರೋಗವನ್ನು ಹೋಗಲಾಡಿಸುವುದಲ್ಲದೆ ಬಣ್ಣವನ್ನು ನೀಡುತ್ತದೆ.

ಬಿಳಿಯ ಸಾಸುವೆ ಸೌಂದರ್ಯ ಸಾಧನೆಗಳಲ್ಲೇ ಮುಖ್ಯವಾದ ಪದಾರ್ಥವಾಗಿದೆ, ತೆಂಗಿನ ಎಣ್ಣೆಯಲ್ಲಾಗಲಿ, ಎಳ್ಳೆಣ್ಣೆಯಲ್ಲಾಗಲಿ ಬಿಳಿಯ ಸಾಸಿವೆಯನ್ನ ಹೆಣ್ಣಾಗಿ ಹುರಿದು ಆ ಎಣ್ಣೆಯನ್ನು ಸೋಸಿ ಶೀಶೆಯಲ್ಲಿ ತುಂಬಿಡಿ, ದಿನವೂ ಈ ಎಣ್ಣೆಯನ್ನು ಮುಖಕ್ಕೆ ಹಚ್ಚಿ ಕೊಂಡರೆ ಮೊಡವೆಗಳು ಕಡಿಮೆಯಾಗಿ ಮುಖ ಕಾಂತಿಯುತ ವಾಗುತ್ತದೆ.

ಸಾಸಿವೆಯನ್ನು ನುಣ್ಣಗೆ ಅರೆದು, ದೇಹಕ್ಕೆ ಹಚ್ಚಿಕೊಂಡು ಸ್ನಾನ ಕುಷ್ಠ ರೋಗ, ಕಜ್ಜಿ, ಹುಳುಕಡ್ಡಿ, ಬೆವರುಸಾಲೆ, ಮೊದಲಾದ ಚರ್ಮ ರೋಗಗಳು ಗುಣವಾಗುತ್ತದೆ.

ಕಜ್ಜಿ ಚರ್ಮ ರೋಗಗಳು ಕಡಿಮೆ ಯಾಗಲು ಸಾಸಿವೆ ಎಣ್ಣೆಯನ್ನು ಹಚ್ಚಬೇಕು ಹಚ್ಚಬೇಕು ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here