ಪ್ರತಿದಿನ ಊಟದ ನಂತರ ಅನಾನಸ್ ತಿನ್ನುವುದರಿಂದ ಆಗುವ ಲಾಭಗಳು.

0
1035

ಅನಾನಸ್ ಅಥವಾ ಪೈನಾಪಲ್ ಹಣ್ಣು ಮೂಲತಃ ಬ್ರೆಜಿಲ್ ದೇಶಕ್ಕೆ ಸೇರಿದ್ದು, ಅನಾನಸ್ ಮಾನವ ದೇಹಕ್ಕೆ ಅತಿ ಉಪಯುಕ್ತವಾದ ಹಣ್ಣು ಗಳಲ್ಲಿ ಒಂದು, ಭಾರತದಲ್ಲಿ ಈ ಹಣ್ಣನ್ನು ಅಡುಗೆಯಲ್ಲಿ ಬಳಸುತ್ತಾರೆ ಉದಾಹರಣೆಗೆ ಇದರಿಂದ ಗೊಜ್ಜು ಕೇಸರಿಬಾತ್ ಫ್ರೂಟ್ ಸಲಾಡ್ ಇತ್ಯಾದಿ ರುಚಿಕರವಾದ ಅಡುಗೆ ಮಾಡಬಹುದು, ಹಣ್ಣಿನ ರಸದಿಂದ ಸಕ್ಕರೆ ಮಧ್ಯಗಳು ಹಾಗೂ ಸಿರಪ್ ಅನ್ನು ಸಹ ತಯಾರಿಸುತ್ತಾರೆ.

ಅಜೀರ್ಣ ಸಮಸ್ಯೆ ಇದ್ದವರು ಪ್ರತಿದಿನ ಊಟದ ನಂತರ ಅನಾನಸ್ ಹಣ್ಣಿನ ಹೋಳಿಗೆ ಸ್ವಲ್ಪ ಉಪ್ಪು ಮತ್ತು ಕರಿಮೆಣಸಿನ ಪುಡಿ ಬೆರೆಸಿ ತಿನ್ನುವುದರಿಂದ ಆಹಾರ ಜೀರ್ಣವಾಗಲು ಸಹಕಾರಿ ಹಾಗೂ ಆಮ್ಲಪಿತ್ತ ನಂತಹ ಸಮಸ್ಯೆಗಳು ದೂರವಾಗುತ್ತದೆ.

ಆಗಾಗ ಅನಾನಸ್ ಹಣ್ಣುಗಳನ್ನು ತಿನ್ನುವ ಅಭ್ಯಾಸ ರೂಢಿ ಮಾಡಿಕೊಂಡರೆ ಗಂಟಲು ಬೇನೆ ಗುಣವಾಗುತ್ತದೆ ಹಾಗೂ ಹೃದಯದ ದುರ್ಬಲತೆ ದೂರವಾಗುತ್ತದೆ.

ಮೂತ್ರ ಕಟ್ಟಿಕೊಳ್ಳುವ ಸಮಸ್ಯೆ ಅಥವಾ ಪಿತ್ತಕೋಶ ಉದಿಕೊಳ್ಳುವುದು ಹಾಗೂ ಕಣ್ಣಿನ ಸುತ್ತ ಮುತ್ತ ಉದಿಕೊಳ್ಳುವ ಸಮಸ್ಯೆಗಳು ಕಾಡಿದರೆ ತಾಜಾ ಅನಾನಸ್ ಹಣ್ಣುಗಳನ್ನು ತಿಂದು ಹಾಲನ್ನು ಕುಡಿಯಿರಿ ಏನನ್ನು ಸೇವಿಸಬಾರದು, ಹೀಗೆ ಮಾಡುವುದರಿಂದ ಸಮಸ್ಯೆಗಳಿಂದ ದೂರವಾಗುತ್ತಿರಿ.

ಧೂಮಪಾನದಿಂದ ನಿಮ್ಮ ಶ್ವಾಸಕೋಶಗಳ ಮೇಲೆ ಉಂಟಾದ ದುಷ್ಪರಿಣಾಮಗಳನ್ನು ನಿವಾರಿಸುವ ಶಕ್ತಿಯು ಅನಾನಸ್ ಹಣ್ಣುಗಳಿಗೆವೆ.

ಕೆಮ್ಮು ಅಥವಾ ಕಪದ ಸಮಸ್ಯೆ ಹೆಚ್ಚಾಗಿದ್ದರೆ ಅನಾನಸ್ ಹಣ್ಣಿಗೆ ಕರಿಮೆಣಸಿನ ಪುಡಿಯನ್ನು ಬೆರೆಸಿ ತಿನ್ನಬೇಕು, ಅತಿಯಾದ ಪೊಟ್ಯಾಶಿಯಂ ಅಂಶ ಈ ಹಣ್ಣುಗಳಲ್ಲಿ ಇರುವುದರಿಂದ ಮೂತ್ರ ಕಟ್ಟುವಿಕೆ ಅಥವಾ ಉರಿಮೂತ್ರ ದಂತಹ ಸಮಸ್ಯೆಗಳಿಗೂ ಉತ್ತಮ ಔಷಧ.

ಆನೆಕಾಲು ರೋಗ, ಕಜ್ಜಿ ಹಾಗೂ ಕುಷ್ಟ ರೋಗ ಸಮಸ್ಯೆ ಇದ್ದವರಿಗೆ ಅನಾನಸ್ ಹಣ್ಣಿನ ರಸವನ್ನು ಲೇಪಿಸುತ್ತಾರೆ.

LEAVE A REPLY

Please enter your comment!
Please enter your name here