ಸಮಯ ಯಾರಿಗೂ ಕಾಯುವುದಿಲ್ಲ, ಸಮಯದ ಹಿಂದೆ ನಾವು ಓಡುತ್ತಿರಬೇಕು ನಿಂತರೆ ಜೀವನದಲ್ಲಿ ಸೋತು ಬಿಡುತ್ತೇವೆ, ಈ ಮಾತುಗಳನ್ನು ಹಿರಿಯರ ಬಾಯಲ್ಲಿ ಪದೇ ಪದೇ ಕೇಳುತ್ತಲೇ ಇರುತ್ತೇವೆ, ಸಮಯದ ಮಹತ್ವವನ್ನು ಅರಿತು ನಡೆದರೆ ಮಾತ್ರ ಜೀವನದಲ್ಲಿ ಯಶಸ್ಸು ಸಿಗುತ್ತದೆ ಇದೇ ಸಮಯವನ್ನು ತೋರಿಸುವ ಮನೆಯ ಗಡಿಯಾರವು ನಮ್ಮ ಜೀವನದ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದರೆ ನಿಮಗೆ ಅಚ್ಚರಿಯಾಗಬಹುದು ಆದರೆ ವಾಸ್ತು ಶಾಸ್ತ್ರದ ಪ್ರಕಾರ ಇದು ನಿಜ.
ವಾಸ್ತುಶಾಸ್ತ್ರಕ್ಕೆ ಸಮಯಕ್ಕೂ ಏನ್ರೀ ಸಂಬಂಧ ಇಂದು ನೀವು ಕೇಳುವುದಾದರೆ ವಾಸ್ತು ಶಾಸ್ತ್ರ ಈ ಪ್ರಶ್ನೆಗೆ ವಿವರವಾದ ಉತ್ತರ ನೀಡುತ್ತದೆ, ವಾಸ್ತುಶಾಸ್ತ್ರದಲ್ಲಿ ಗೋಡೆ ಗಡಿಯಾರವನ್ನು ಇಡುವ ದಿಕ್ಕಿನ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ, ಗಡಿಯಾರ ಇಡುವ ಸರಿಯಾದ ದಿಕ್ಕು ನಿಮ್ಮ ಜೀವನದಲ್ಲಿ ಸಕಾರಾತ್ಮಕವಾದ ಬದಲಾವಣೆಗಳು ತರುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಗಡಿಯಾರವನ್ನು ಇಡುವ ಸೂಕ್ತ ದಿಕ್ಕು ಯಾವುದು.
ಮನೆಯ ದಕ್ಷಿಣ ಗೋಡೆಯ ಮೇಲೆ ಗಡಿಯಾರವನ್ನು ಇಷ್ಟವೇ ಇದು ಸಂಪೂರ್ಣ ಅಶುಭ ಎಂದು ಪರಿಗಣಿಸಲಾಗುತ್ತದೆ, ಇನ್ನು ಕೆಲವರು ಗೋಡೆ ರಂಧ್ರ ಮಾಡಲು ಮನಸ್ಸಾಗದೆ ಬಾಗಿಲ ಮೇಲೆ ನೇತು ಹಾಕುತ್ತಾರೆ ಈ ರೀತಿ ಯಾವುದೇ ಕಾರಣಕ್ಕೂ ಮಾಡಬೇಡಿ, ಅಷ್ಟೇ ಅಲ್ಲ ನಿಮ್ಮ ಮನೆ ಗಡಿಯಾರ ಯಾವುದೇ ಕಾರಣಕ್ಕೂ ನಿಲ್ಲಬಾರದು, ಅದರ ಬ್ಯಾಟರಿ ಖಾಲಿಯಾದಾಗ ತಕ್ಷಣ ಬದಲಾಯಿಸಿ.
ಮನೆಯಲ್ಲಿ ಗಡಿಯಾರ ಇಡುವ ಸೂಕ್ತವಾದ ಸ್ಥಳ ಯಾವುದು ಎಂದರೆ ಅದು ಮನೆಯ ಉತ್ತರ ದಿಕ್ಕು, ಈ ದಿಕ್ಕಿನಲ್ಲಿ ಮನೆ ಗಡಿಯಾರ ಇರುವುದರಿಂದ ಸಂಪತ್ತು ಹಾಗೂ ಸಮೃದ್ಧಿ ಒಲಿದು ಬರುತ್ತದೆ, ನಿಮಗೆ ತಿಳಿದಿರಲಿ ಉತ್ತರ ದಿಕ್ಕನ್ನು ಕುಬೇರ ಮೂಲೆ ಹಾಗೂ ವಿಗ್ನ ವಿನಾಶಕ ಗಣೇಶನ ಮೂಲೆ ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ನಿಮಗೆ ವ್ಯಾಪಾರದಲ್ಲಿ ಅಭಿವೃದ್ಧಿ ಜೀವನದಲ್ಲಿ ಉನ್ನತಿಯನ್ನು ದೊರೆಯುತ್ತದೆ.
ಮನೆಯ ಪೂರ್ವದಿಕ್ಕಿನಲ್ಲಿ ನೀವು ಗಡಿಯಾರವನ್ನು ಇಡಬಹುದು ಇದರಿಂದ ಶಿಕ್ಷಣದ ಗುಣಮಟ್ಟ ಹೆಚ್ಚಾಗುತ್ತದೆ, ಪೂರ್ವ ದಿಕ್ಕು ನೀವು ಮಾಡಲು ಹೊರಟ ಕಾರ್ಯಗಳನ್ನು ಉತ್ತಮಗೊಳಿಸುತ್ತದೆ, ಆದ್ದರಿಂದ ಪೂರ್ವ ದಿಕ್ಕು ಸಹ ಗಡಿಯಾರಕ್ಕೆ ಸೂಕ್ತ ಸ್ಥಳ ಎಂದು ಹೇಳಲಾಗುತ್ತದೆ, ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.