ಹಳೆ ಕಾಲದ ಸಾಂಪ್ರದಾಯಕ ಸಿಹಿತಿಂಡಿ ಹಾಲುಬಾಯಿ ಮಾಡುವ ಸುಲಭ ವಿಧಾನ ನೋಡಿ!

0
786

ಈಗಿನ ಮಕ್ಕಳಿಗೆ ಹಾಲುಬಾಯಿ ತಿಳಿದಿರುವುದಿಲ್ಲ ಕಾರಣ ಇದನ್ನು ಹಿಂದಿನ ಕಾಲದಲ್ಲಿ ಹೆಚ್ಚಾಗಿ ಮಾಡುತ್ತಿದ್ದರು ಇದನ್ನು ಸಾಂಪ್ರದಾಯಿಕ ಸಿಹಿತಿಂಡಿ ಎಂದರೆ ತಪ್ಪಾಗಲಾರದು, ಆದರೆ ಈ ಸಿಹಿ ತಿಂಡಿಯ ರುಚಿ ಮಾತ್ರ ಅದ್ಭುತವಾಗಿರುತ್ತದೆ, ಒಮ್ಮೆಯಾದರೂ ಇದನ್ನು ತಯಾರುಮಾಡಿ ತಿನ್ನಲೇಬೇಕು, ಒಮ್ಮೆ ತಿಂದರೆ ಮತ್ತೆ ಮತ್ತೆ ಮಾಡಿಕೊಂಡು ತಿನ್ನಬೇಕು ಎನ್ನಿಸುವಷ್ಟು ರುಚಿಯಾದ ಸಿಹಿ ತಿಂಡಿ ಇದು, ಹಾಗಾದರೆ ಈ ಸಿಹಿತಿಂಡಿಯನ್ನು ತಯಾರಿಸಲು ಇರುವ ಸುಲಭ ವಿಧಾನಗಳನ್ನು ತಿಳಿಸುತ್ತೇವೆ ನೋಡಿ.

ಹಾಲುಬಾಯಿ ತಯಾರಿಸಲು ಬೇಕಾದ ಪದಾರ್ಥಗಳು : 1 ಕಪ್ ಸೋನಾಮಸೂರಿ ಅಕ್ಕಿ, ಒಂದು ಮೀಡಿಯಂ ಕಪ್ ನಲ್ಲಿ ತೆಂಗಿನ ಹಾಲು, ಅದೇ ಅಳತೆಯಲ್ಲಿ ಬೆಲ್ಲ, ಹಾಗೂ ಸ್ವಲ್ಪ ಏಲಕ್ಕಿ.

ಮಾಡುವ ವಿಧಾನ : ಒಂದು ಮಿಕ್ಸಿ ಜಾಟ್ ತೆಗೆದುಕೊಂಡು ಅದರಲ್ಲಿ ಮೊದಲಿಗೆ ಅಕ್ಕಿಯನ್ನು ಹಾಕಿ, ನಂತರ ಅದಕ್ಕೆ ತೆಂಗಿನ ಹಾಲನ್ನು ಮಿಕ್ಸ್ ಮಾಡಿ ನಂತರ ಇದನ್ನು ನುಣ್ಣಗೆ ರುಬ್ಬಿಕೊಳ್ಳಿ, ಹಾಗೂ ಪುಡಿ ಮಾಡಿಟ್ಟುಕೊಂಡಿದ್ದ 1 ಕಪ್ ಬೆಲ್ಲವನ್ನು ಇದಕ್ಕೆ ಮಿಶ್ರಣಮಾಡಿ, ನಂತರ ಮತ್ತೊಮ್ಮೆ ರುಬ್ಬಿಕೊಳ್ಳಿ ಕಾರಣ ಬೆಲ್ಲ ಅದರಲ್ಲಿ ಕರಗಬೇಕು, ಸಣ್ಣ ಉರಿಯಲ್ಲಿ ಸ್ಟವ್ ಮೇಲೆ ಬಾಣಲೆಯನ್ನು ಇಟ್ಟು ಅದರಲ್ಲಿ ನೀವು ರುಬ್ಬಿಕೊಂಡ ಮಿಶ್ರಣವನ್ನು ಹಾಕಿ, 18 ನಿಮಿಷದವರೆಗೂ ಸಣ್ಣ ಉರಿಯಲ್ಲಿ ಮಿಕ್ಸ್ ಮಾಡುತ್ತಿರಿ, ಕಾರಣ ನಾವು ಹಸಿ ಅಕ್ಕಿಯನ್ನು ಹಾಕಿರುವುದರಿಂದ ಅದು ಚೆನ್ನಾಗಿ ಬೇಯಬೇಕು, ಅನಂತರ ಅದು ಗಟ್ಟಿಯಾಗುತ್ತದೆ, ಒಂದು ಪ್ಲೇಟ್ ನಲ್ಲಿ ತುಪ್ಪ ಸವರಿ ಇಟ್ಟುಕೊಂಡು ಅದರಲ್ಲಿ ಈ ಗಟ್ಟಿಯಾದ ಮಿಶ್ರಣವನ್ನು ಹರಡಿ ನಂತರ ಅದನ್ನು ನಿಮ್ಮ ಇಷ್ಟದಂತೆ ಕಟ್ ಮಾಡಿಕೊಳ್ಳಿ, ತಣ್ಣಗಾದ ಮೇಲೆ ಹಾಲುಬಾಯಿ ತಿನ್ನಲು ರೆಡಿಯಾಗಿರುತ್ತದೆ.

ಕೆಳಗೆ ಈ ಅಡುಗೆ ಮಾಡಿ ತೋರಿಸಿರುವ ಪ್ರೀತಿಯಿಂದ ಶುಭ ಅವರ ಯುಟ್ಯೂಬ್ ಚಾನೆಲ್ ಲಿಂಕ ನೀಡಲಾಗಿದ್ದು, ಹಾಲುಬಾಯಿ ತಯಾರು ಮಾಡುವ ಮೊದಲು ಇದನ್ನು ನೋಡಿಬಿಡಿ, ಆಗ ಯಾವುದೇ ವ್ಯತ್ಯಾಸವಿಲ್ಲದೆ ಹಾಲುಬಾಯಿ ರುಚಿಯಾಗಿ ತಯಾರು ಮಾಡಲು ಸಹಾಯವಾಗುತ್ತದೆ.

ಜಾಹಿರಾತು : ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 95350 04448 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here