ಪ್ರತಿಯೊಂದು ಸಾಂಬಾರ ಪದಾರ್ಥಗಳಲ್ಲಿ ನಮ್ಮ ದೇಹಕ್ಕೆ ಬೇಕಾಗುವ ರೋಗನಿರೋಧಕ ಶಕ್ತಿ ಹಾಗು ಕಾಯಿಲೆಗಳು ಬರದಂತೆ ತಡೆಯುವ ಶಕ್ತಿ ಇದೆ. ಇದರಿಂದಾಗಿ ಹಿಂದಿನಿಂದಲೂ ಭಾರತೀಯರ ಅಡುಗೆ ತುಂಬಾ ಆರೋಗ್ಯಕಾರಿ ಎಂದು ಪರಿಗಣಿಸಲಾಗಿದೆ. ಅದರಲ್ಲೂ ಪ್ರತಿಯೊಂದು ಸಮಭಾರ ಪದಾರ್ತಗಳನ್ನು ಒಂದಲ್ಲ ಓದು ರೀತಿಯಿಂದ ದಿನ ನಿತ್ಯ ಸೇವಿಸುವ ಕಾರಣದಿಂದಾಗಿ ನಾವು ಕಾಯಿಲೆಗಳಿಂದ ದೂರ ಉಳಿಯುವುದು ಖಚಿತ.
ಅಡುಗೆ ಮನೆಯಲ್ಲಿ ಹೆಚ್ಚಿನ ಎಲ್ಲ ಅಡುಗೆಗಳಿಗೂ ಬಳಸುವಂತಹ ಜೀರಿಗೆಯೂ ತುಂಬಾ ಜನಪತಿಯ. ಜೀರಿಗೆಯೂ ಏಷ್ಯಾದ ಹೆಚ್ಚಿನ ದೇಶಗಳಲ್ಲಿ ಸಾಂಬಾರ ಪದಾರ್ಥವಾಗಿ ಬಳಕೆಯಾಗುತ್ತಿದೆ. ಇದರಲ್ಲಿ ಹಲವಾರು ರೀತಿಯ ಆರೋಗ್ಯಕರ ಗುಣಗಳಿವೆ. ಅದರಲ್ಲೂ ಜೀರಿಗೆ ನಿಯೋರು ಆರೋಗ್ಯಕ್ಕೆ ಅತ್ಯುತ್ತಮ. ಬಿಸಿ ನೀರಿಗೆ ಸ್ವಲ್ಪ ಜೀರಿಗೆ ಹಾಕಿಕೊಂಡು ಕುಡಿಸಿ ಸೋಸಿಕೊಂಡು ನೀರನ್ನು ದಿನದಲ್ಲಿ ಒಂದು ಅಥವಾ ಎರಡು ಸಲ ಕುಡಿಯಬೇಕು. ಇದನ್ನು ಜಲ್ ಜಿರವೆಂದು ಕರೆಯಲಾಗುತ್ತದೆ. ಇದರಲ್ಲಿರುವ ಅರೋಗ್ಯ ಲಾಭಗಳ ಬಗ್ಗೆ ಮುಂದೆ ತಿಳಿಯಿರಿ.
ಜೀರ್ಣ ಕ್ರಿಯೆಗೆ ಸಹಕಾರಿ ಜೀರಿಗೆ ನೀರು ಜೀರ್ಣಕ್ರಿಯೆಗೆ ತುಂಬಾ ಲಾಭಕಾರಿ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಜೀರಿಗೆ ನೀರು ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ಸ್ ವಿಘಟಿಸುವ ಕಿಣ್ವಗಳ ಸ್ರವಿಸುವಿಕೆ ಹೆಚಿಸುವುದು. ಹೊಟ್ಟೆಗೆ ಸಂಬಂಧಿಸಿದ ವಿವಿಧ ರೀತಿಯ ಸಮಸ್ಯೆಗಳಾದ, ಅತಿಸಾರ, ಬೆಳಗ್ಗಿನ ನೋವು, ವಾಂತಿ ಮತ್ತು ಅಟೋನಿಕ್ ಡಿಸ್ಪೆಪ್ಸಿಯಾವನ್ನು ಕಡಿಮೆ ಮಾಡುವುದು.
ಕಲ್ಮಶ ಹೊರಹಾಕುವುದು ಜೀರಿಗೆ ನೀರು ಹೊಟ್ಟೆ ಹಾಗು ಯಕೃತ್ತಿಗೆ ಹಲವಾರು ರೀತಿಯ ಲಾಭ ಉಂಟು ಮಾಡಲಿದೆ. ಜೀರಿಗೆ ನೀರಿನಲ್ಲಿ ಇರುವಂತಹ ಆಹಾರದ ನಾರಿನಂಶವು ದೇಹದಲ್ಲಿರುವ ಹಾನಿಕಾರಕ ಕಲ್ಮಶ ಹೊರಹಾಕಿ ಕರುಳಿನ ಕ್ರಿಯೆ ಸರಾಗವಾಗುವಂತೆ ಮಾಡುವುದು. ರೋಗನಿರೋಧಕ ಶಕ್ತಿ ಹೆಚ್ಚಳ ಜೀರಿಗೆಯಲ್ಲಿ ಕಬ್ಬಿನಂಶವು ಸಂವೃದ್ದವಾಗಿದೆ. ಇದರಿಂದಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚಿಸುವುದು. ಒಂದು ಚಮಚ ಜೀರಿಗೆಯಿಂದ ಮಾಡಿರುವಂತಹ ನೀರಿನಲ್ಲಿ 1 .3 ಮಿ.ಗ್ರಾಂ ಕಬ್ಬಿನಂಶವಿದೆ. ವಿಟಮಿನ್ ಎ ಮತ್ತು ವಿಟಮಿನ್ ಸಿ ಸಂವೃದ್ದವಾಗಿರುವ ಕಾರಣ ಇದು ಆಂಟಿ ಆಕ್ಸಿಡೆಂಟ್ಸ್ ಆಗಿ ಕೆಲಸ ಮಾಡುವುದು.
ಜೀರಿಗೆಯಲ್ಲಿರುವ ಕಬ್ಬಿನಂಶವು ರಕ್ತ ಹೀನತೆ ನಿವಾರಣೆ ಮಾಡುವುದು. ಕಬ್ಬಿನಂಶವು ದೇಹದಲ್ಲಿ ಹಲವಾರು ರೀತಿಯ ಕೆಲಸಗಳನ್ನು ನಿರ್ವಹಿಸುವುದು. ಇದು ಕೆಂಪು ರಕ್ತ ಕಣಗಳನ್ನು ನಿರ್ಮಿಸುವುದು ಮಾತು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚಿಸುವುದು.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.