ಸ್ನೇಹಿತರೆ ಗಂಡು ಮತ್ತು ಹೆಣ್ಣು ಇಬ್ಬರಿಗೂ ಬಂಜೆತನ ಸಮಾನವಾಗಿರುತ್ತದೆ ಎಂದು ವೈದ್ಯಕೀಯ ಲೋಕ ಹೇಳುತ್ತದೆ, ಇದಕ್ಕೆ ಕಾರಣಗಳು ನಾನಾ ರೀತಿಯಲ್ಲಿ ಇರುತ್ತವೆ, ಸಾಮಾನ್ಯವಾಗಿ ದಂಪತಿಗಳು ಮದುವೆಯಾದ ತಕ್ಷಣ ಅಸುರಕ್ಷಿತವಾಗಿ ಈ ಕ್ರಿಯೆ ನಡೆಸಿದ ಹಲವು ವರ್ಷಗಳ ನಂತರವೂ ಮಗು ಆಗದಿರುವ ಸಮಸ್ಯೆ ಇರಬಹುದು, ಇಂತಹ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆದು ಗರ್ಭಧರಿಸಬಹುದು ಆಗಿದೆ, ಇನ್ನು ಈ ರೀತಿಯ ಸಮಸ್ಯೆಗಳಿಗೆ ಇರುವ ಹಲವು ಕಾರಣಗಳ ಬಗ್ಗೆ ತಿಳಿಯೋಣ.
ಕೆಲವೊಮ್ಮೆ ಅತಿಯಾಗಿ ಈ ಕ್ರಿಯೆ ಮಾಡುವುದು ಅಥವಾ ಅತಿ ಕಡಿಮೆ ಯಾಗಿ ಈ ಕ್ರಿಯೆಯನ್ನು ಮಾಡುವುದು, ಕೆಲವರಲ್ಲಿ ಈ ನಂಬಿಕೆ ಇರುತ್ತದೆ ಅತಿಯಾಗಿ ಈ ಕ್ರಿಯೆ ಮಾಡುವುದರಿಂದ ಮಗು ಬೇಗನೆ ಪಡೆಯಬಹುದು ಅಂತ ಅಂದುಕೊಂಡಿರುತ್ತಾರೆ ಆದರೆ ಇದು ತಪ್ಪು, ಅತಿಯಾಗಿ ಈ ಕ್ರಿಯೆಯನ್ನು ಮಾಡುವುದರಿಂದ ಪುರುಷರ ಹುರುಪು ಕಡಿಮೆಯಾಗಿ ಇದರಿಂದ ನಿಶ್ಯಕ್ತಿ ಆಯಾಸ ಮಂಡಿ ದೌರ್ಬಲ್ಯ ಮತ್ತು ಅತಿಯಾಗಿ ಮೂತ್ರ ವಿಸರ್ಜನೆ ಸಮಸ್ಯೆ ಕಾಡುತ್ತದೆ.
ಇನ್ನು ಪುರುಷದಲ್ಲಿ ಒತ್ತಡದ ಜೀವನದಿಂದಾಗಿ ಖಿನ್ನತೆಯನ್ನು ಅನುಭವಿಸುತ್ತಿರುತ್ತಾರೆ ಅವರಿಗೆ ಭಾವನಾತ್ಮಕ ತೊಂದರೆಗಳು ಕೂಡ ಫಲವತ್ತತೆಯ ಮೇಲೆ ಪರಿಣಾಮ ಬೀಳುತ್ತದೆ, ಮಗು ಪಡೆಯಲು ಬಯಸುವ ಪುರುಷರು ಯಾವಾಗಲೂ ಶಾಂತವಾಗಿರಬೇಕು ಇಲ್ಲವಾದರೆ ಪಿಟ್ಯೂಟರಿ ಕ್ರಾಂತಿ ನಿಯಂತ್ರಿಸುವಂತಹ ಮಸ್ತಿಷ್ಕನಿಮ್ನಾಂಗದ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಥೈರಾಯಿಡ್, ಮೂತ್ರ ಜನನಾಂಗ, ಗರ್ಭಕೋಶ ಮತ್ತು ಋತುಚಕ್ರದ ಮೇಲೆ ಪರಿಣಾಮ ಬೀಳುತ್ತದೆ.
ಅತಿ ಮುಖ್ಯವಾದ ಮತ್ತೊಂದು ಕಾರಣವೆಂದರೆ ಅದು ವೀರ್ಯ ಗಣತಿ ಕಡಿಮೆ ಇರುವುದು ಈ ರೀತಿಯ ಸಮಸ್ಯೆ ಈಗಿನ ಪುರುಷರಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ, ಶೇಕಡಾ 30ರಿಂದ 40ರಷ್ಟು ಇದೇ ಕಾರಣ ಪರಿಣಾಮ ಬೀರುತ್ತದೆ, ಹಾಗೂ ಈ ಕ್ರಿಯೆ ನಂತರ ಶೌಚಾಲಯಕ್ಕೆ ಹೋಗುವುದು ಹಾಗೂ ಅಲ್ಲಿ ಶುಚಿಗೊಳಿಸುವುದು ನಿಲ್ಲಿಸಿ, ಕೆಲವು ಕಾಲ ಹಾಸಿಗೆ ಮೇಲೆ ಇರುವುದು ಅಗತ್ಯ ವೀರ್ಯಾಣು ಅಂದನು ವರೆಗೆ ತಲುಪಲು ಸಮಯ ಕೊಡಿ.
ಕೆಲವು ಬಾರಿ ದೇಹದ ಬೊಜ್ಜು ಕೂಡ ಸಮಸ್ಯೆ ಒಡ್ಡುತ್ತದೆ, ಅತಿಯಾದ ತೂಕವು ಅಥವಾ ಅತಿಯಾದ ಕಡಿಮೆ ತೂಕವು ಗರ್ಭ ಧರಿಸಲು ತೊಂದರೆ ಉಂಟು ಮಾಡುತ್ತವೆ, ಹೀಗಾಗಿ ದೇಹದ ತೂಕವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಅತಿ ಅಗತ್ಯ, ಮಹಿಳೆಯರು ಮೊದಲು ಬಿಗಿಯಾದ ಒಳ ಉಡುಪನ್ನು ಧರಿಸುವ ಅಭ್ಯಾಸ ಬಿಡಬೇಕು ಇದರಿಂದ ಸಂತಾನೋತ್ಪತ್ತಿ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ.