ಏಕಾಗ್ರತೆ ಅನ್ನೋ ಶಕ್ತಿ ಮನುಷ್ಯನಿಗೆ ಅಷ್ಟು ಸುಲಭವಾಗಿ ಸಿಗಲ್ಲ! ಅದಕ್ಕಾಗಿ ಸುಲಭ ಟಿಪ್ಸ್ ನೋಡಿ

0
1784

ಓದಿನ ಸಮಯದಲ್ಲಿ ಮನಸ್ಸನ್ನು ಮಗ್ನವಾಗಿಸುವುದು ಬಹುದೊಡ್ಡ ಸಮಸ್ಯೆ, ಚಿಕ್ಕ ಚಿಕ್ಕ ವಿಷಯಗಳಿಗೂ ಓದಿನಿಂದ ಆಚೆಗೆ ಪದೇ ಪದೆ ಮನಸ್ಸು ಓಡಿಹೋಗುವುದು, ಒಂದು ಬಾರಿ ಓಡಿ ಹೋದ ಮನಸ್ಸು ವಾಪಸ್ಸು ಬಂದು ಪುಸ್ತಕದಲ್ಲಿ ಕೂರುವುದೂ ಕಷ್ಟ. ಕೆಲವರಿಗೆ ಏಕಾಗ್ರತೆ ಹುಟ್ಟಿನಿಂದ ಸಹಜವಾಗಿ ಬಂದರೆ ಇನ್ನು ಕೆಲವರು ಅದನ್ನು ವಿಕಸನಗೊಳಸಿಕೊಳ್ಳ ಬೇಕಾಗುತ್ತದೆ. ಹಾಗೆ ಏಕಾಗ್ರತೆಯನ್ನು ಪಡೆಯಲು ಅಥವಾ ಹೆಚ್ಚಿಸಿಕೊಳ್ಳಲು ಕೆಲ ಸರಳೋಪಾಯಗಳು ಇಲ್ಲಿವೆ.

ಲೆಕ್ಕ ಹಾಕಿಕೊಳ್ಳಿ : ದಿನಕ್ಕೆ ಒಂದು ಎಂಬಂತೆ ಕಾರ್ಡ್ ಗಳನ್ನು ತಯಾರು ಮಾಡಿಕೊಳ್ಳಿ, ದಿನಂಪ್ರತಿ ಓದುವ ಸಮಯದಲ್ಲಿ ಕಾರ್ಡ್ ಅನ್ನು ಪಕ್ಕದಲ್ಲಿಟ್ಟುಕೊಳ್ಳಿ. ಪ್ರತೀ ಬಾರಿ ಮನಸ್ಸು ಬೇರೆಡೆ ಹರಿದಾಗ ಕಾರ್ಡ್ ನಲ್ಲಿ ಗುರುತು ಮಾಡಿಕೊಳ್ಳಿ. ದಿನದ ಕೊನೆಯಲ್ಲಿ ಒಮ್ಮೆ ಯಾವಾಗೆಲ್ಲ ಮನಸ್ಸು ಜಾರಿದೆ ಎಂಬುದನ್ನು ಲೆಕ್ಕ ಹಾಕಿಡಿ, ಒಂದೆರಡು ದಿನ ಈ ರೀತಿ ಅಭ್ಯಾಸ ಮಾಡುತ್ತಿದ್ದಂತೆ ಕಾರ್ಡ್ ನಲ್ಲಿ ಗುರುತುಗಳು ತಾವೇ ತಾವಾಗಿ ಕಡಿಮೆ ಆಗತೊಡಗುತ್ತವೆ, ಮನಸ್ಸು ಸ್ಥಿರವಾಗತೊಡಗುತ್ತವೆ ಕೇವಲ ಲೆಕ್ಕ ಇಡುವ ಏಕೈಕ ಅಭ್ಯಾಸ ಇಷ್ಟೊಂದು ಕೆಲಸ ಮಾಡುತ್ತದೆ.

ಮನಸ್ಸಿನ ವಿಹಾರಕ್ಕಾಗಿಯೇ ಸಮಯ ಮೀಸಲಿಡಿ : ಮನಸ್ಸು ಕೊಂಚ ವಿಹಾರ ಬಯಸುತ್ತದೆ. ಕನಸ್ಸನ್ನು ಕಾಣಲು ಅದಕ್ಕೂ ಸ್ವಲ್ಪ ಇಂಬು ಬೇಕು. ಸಂಜೆ ಶಾಲೆಯಿಂದ ಬಂದ ನಂತರ ಅಥವಾ ಮಲಗುವ ಮುಂಚೆ ಹಗಲುಗನಸುಗಳಿಗಾಗಿ ಕೊಂಚ ಸಮಯ ಇಟ್ಟರೆ ಓದಿನ ಸಮಯದಲ್ಲಿ ವಿಹಾರ ಮಾಡಲು ಮನಸ್ಸು ಹೆಚ್ಚು ಹಠ ಮಾಡುವುದಿಲ್ಲ.

ಡಿಜಿಟಲ್ ಸೆಳೆತಗಳಿಂದ ದೂರ ಇರಿ : ಮೊಬೈಲ್, ವಾಟ್ಸಪ್, ಫೇಡ್ ಬುಕ್ ಇತ್ಯಾದಿಗಳು ಮನಸ್ಸನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಇವನ್ನು ದೂರ ಇಟ್ಟಷ್ಟು ಎಲ್ಲಾ ರೀತಿಯಿಂದಲೂ ಒಳ್ಳೆಯದು. ಸಾಮಾಜಿಕ ತಾಣಗಳಿಂದಾಗಿ ಮಕ್ಕಳ ಮೆದುಳಿನ ಮೇಲೆ ಮ್ತು ಚಿಂತನಾಶಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮಗಳುಂಟಾಗಿರುವುದನ್ನು ಅನೇಕ ಅಧ್ಯಯನಗಳು ಧೃಢಪಡಿಸಿವೆ. ಈ ತಾಣಗಳಿಂದಾಗಿ ಮಕ್ಕಳು ಹೆಚ್ಚು ಸಂಯಮರಹಿತರಾಗಿಯೂ, ಸ್ವಯಂ ಪ್ರತಿಷ್ಟೆಯುಳ್ಳವರಾಗಿಯೂ ವರ್ತಿಸುತ್ತಾರೆ ಎಂದು ಅನೇಕ ಮನಃಶಾಸ್ತ್ರಜ್ಞರು ಹೇಳುತ್ತಾರೆ. ಇವೆರಡೂ ಸಹ ಏಕಾಗ್ರತೆಗೆ ಮಾರಕ!

ಮೆದುಳಿಗೆ ಹೆಚ್ಚು ಆಮ್ಲಜನಕ ಒದಗಿಸಿ : ಮೆದುಳು ಚುರುಕಾಗಿ ಕೆಲಸ ಮಾಡಲು ಹೆಚ್ಚಿನ ಆಮ್ಲಜನಕ ಅವಶ್ಯಕ. ಮೆದುಳಿಗೆ ಹೆಚ್ಚಿನ ಆಮ್ಲಜನಕ ಒದಗಿಸಲು ಸಾಕಷ್ಟು ಆಟಗಳಲ್ಲಿ ತೊಡಗುವುದು, ವ್ಯಾಯಾಮ ಮಾಡುವುದು, ಮತ್ಯಾವುದೇ ದೈಹಿಕ ಶ್ರಮದ ಚಟುವಟಿಕೆಗಳಲ್ಲಿ ತೊಡಗಬಹುದು. ಧ್ಯಾನ ಮಾಡುವುದೂ ಸಹ ಏಕಾಗ್ರತೆ ಹೆಚ್ಚಿಸುತ್ತದೆ. ಧ್ಯಾನಕ್ಕಾಗಿ ಸೂಕ್ತ ಸ್ಥಳ ಮತ್ತು ಗುರುವನ್ನು ಆಯ್ಕೆ ಮಾಡಿಕೊಂಡು ಧ್ಯಾನದ ಅಭ್ಯಾಸದಲ್ಲಿ ತೊಡಗಬಹುದು. ದಿನಕ್ಕೆ ಹದಿನೈದು ನಿಮಿಷಗಳ ಧ್ಯಾನ ಬೇಕಾದಷ್ಟಾಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here