ಪ್ರತಿದಿನ ರಾತ್ರಿ ಬೆಂಡೆಕಾಯಿಯನ್ನು ನೀರಿನಲ್ಲಿ ನೆನೆಸಿ ಕುಡಿದರೆ ಏನಾಗುತ್ತೆ ಗೊತ್ತಾ ?

0
1157

ಮಾನವ ಜೀವ ಸಂಕುಲಕ್ಕೆ ಪ್ರಮುಖ ಆಹಾರ ತರಕಾರಿ ಮತ್ತು ಹಣ್ಣುಗಳು ಎಂದರೆ ತಪ್ಪಾಗಲಾರದು, ಯಾಕೆಂದರೆ ಮಾನವನ ದೇಹಕ್ಕೆ ಬೇಕಾದ ಹಾಗೂ ಹೊಂದಿಕೊಳ್ಳುವಂತೆ ಅನೇಕ ಪೋಷಕಾಂಶಗಳು, ರೋಗನಿರೋಧಕ ಶಕ್ತಿಗಳು ಅನೇಕ ಖನಿಜಾಂಶ ತರಕಾರಿ ಹಾಗೂ ಹಣ್ಣುಗಳಲ್ಲಿ ಹೇರಳವಾಗಿ ಸಿಗುವುದು, ಅಷ್ಟೇ ಅಲ್ಲದೆ ನಮ್ಮ ಪ್ರಾಚೀನರು ತರಕಾರಿ ಹಾಗೂ ಹಣ್ಣುಗಳನ್ನು ಬಳಸಿ ಅನೇಕ ರೋಗಗಳಿಗೆ ಮತ್ತು ಗಳನ್ನು ಕಂಡು ಹಿಡಿದಿದ್ದಾರೆ, ಆಯುರ್ವೇದದಲ್ಲಿ ಈ ರೀತಿಯ ತರಕಾರಿಯ ಬಳಕೆಯನ್ನು ನಾವು ಕಾಣುತ್ತೇವೆ.

ಇನ್ನು ಬೆಂಡೆಕಾಯಿಯನ್ನು ಬಳಸಿ ಯಾವ ರೀತಿಯಲ್ಲಿ ನಮ್ಮ ಆರೋಗ್ಯವನ್ನು ಉತ್ತಮಗೊಳಿಸಿ ಕೊಳ್ಳಬಹುದು, ಹಾಗೂ ಯಾವ ಕಾಯಿಲೆಗಳನ್ನು ಗುಣ ಪಡಿಸಿಕೊಳ್ಳುವ ಬಹುದು ಎಂಬುದರ ಬಗ್ಗೆ ತಿಳಿಯೋಣ, ಅದರಂತೆ ಬೆಂಡೆಕಾಯಿಯನ್ನು ರಾತ್ರಿ ಮಲಗುವ ಮುಂಚೆ ನೀರಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ನಂತರ ಆ ನೀರನ್ನು ಕುಡಿದರೆ ಆರೋಗ್ಯಕ್ಕೆ ಲಾಭ ಸಿಗುತ್ತದೆ ಎಂಬುದನ್ನು ಮುಂದೆ ತಿಳಿಯೋಣ.

ಬೆಂಡೆಕಾಯಿಯಲ್ಲಿ ಸುಮಾರು ಮೂವತ್ತಕ್ಕೂ ಅಧಿಕ ಕ್ಯಾಲೊರಿ ಪೌಷ್ಟಿಕಾಂಶ ಹೇರಳವಾಗಿ ಇರುತ್ತದೆ ಅದರಲ್ಲೂ ನಾರಿನಾಂಶ ಮತ್ತು ಹೆಚ್ಚಾಗಿಯೇ ಇರುತ್ತದೆ, ಕತ್ತರಿಸಿದ ಒಂದು ತುಂಡು ಬೆಂಡೆಕಾಯಿ ತಿಂದರೂ ಸಾಕು ಒಂದು ಒಂದು ಬಟ್ಟಲು ತುಂಬ ತುಂಬಿರುವ ಟೊಮೆಟೊ ತಿಂದರೆ ಸಿಗುವ ಸಿ ಜೀವಸತ್ವ ದಷ್ಟು ಸಿಗುತ್ತದೆ.

ಚಳಿಗಾಲದಲ್ಲಿ ಅಥವಾ ವಾತಾವರಣ ವ್ಯತ್ಯಾಸವಾದಾಗ ಕಾಡುವಂತಹ ಅನೇಕ ಕಾಯಿಲೆಗಳಾದ ನೆಗಡಿ ಕೆಮ್ಮು ಇತರ ಸಮಸ್ಯೆಗಳಿಂದ ಬೆಂಡೆಕಾಯಿ ನಮ್ಮನ್ನು ಕಾಪಾಡುತ್ತದೆ ಹಾಗು ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ದ್ವಿಗುಣಗೊಳಿಸುವ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಗ್ಯಾಸ್ ಅಥವಾ ಹೊಟ್ಟೆ ಉಬ್ಬರ ಸಮಸ್ಯೆ ಇಂದ ನೀವು ಬಳಲುತ್ತಿದ್ದರೆ ಚಿಂತೆ ಬೇಡ ಬೆಂಡೆಕಾಯಿ ಪ್ರತಿದಿನ ನಿಮ್ಮ ಅಡಿಗೆಯಲ್ಲಿ ಬಳಸಲು ಶುರು ಮಾಡಿ ಆಗ ಗ್ಯಾಸ್ ಹೊಟ್ಟೆ ಉಬ್ಬರ ಮಲಬದ್ಧತೆಯ ಸಮಸ್ಯೆಗಳಿಂದ ಬಹಳ ಬೇಗ ಮುಕ್ತಿಯನ್ನು ಪಡೆಯುತ್ತಿರಿ.

ಬೆಂಡೆಕಾಯಿ ದೇಹದ ಕರುಳಿಗೆ ಬೇಕಾದ ಒಳ್ಳೆಯ ಬೀಜಗಳನ್ನು ಉತ್ಪತ್ತಿ ಮಾಡಲು ಸಹಕರಿಸುತ್ತದೆ ಅಲ್ಲದೆ ಇದರಲ್ಲಿರುವ ವಿಟಮಿನ್ ಸಿ ಅಂಶವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ದೇಹದಲ್ಲಿನ ರಕ್ತದ ಅಂಶವನ್ನು ಹೆಚ್ಚಿಸಲು ಬೆಂಡೆ ಕಾಯಿಯನ್ನು ಬೇಯಿಸಿ ಕೊಂಡು ತಿನ್ನುವುದಕ್ಕಿಂತ ಆದಷ್ಟು ಹಸಿಯಾಗಿ ತಿಂದರೆ ಬಹಳ ಒಳ್ಳೆಯದು, ಇದರಲ್ಲಿರುವ ನಾರಿನಂಶವು ದೇಹದ ರಕ್ತ ಅಂಶವನ್ನು ಹೆಚ್ಚಿಸಲು ಬಹಳ ಸಹಕಾರಿ.

ತೂಕ ಹೆಚ್ಚಿನವರಿಗೆ ಇದು ಬಹಳ ಉಪಕಾರಿ ಬೆಂಡೆಕಾಯಿಯಲ್ಲಿ ತೂಕ ಕಳೆದುಕೊಳ್ಳಲು ಕಡಿಮೆ ಮಟ್ಟದ ಕ್ಯಾಲೋರಿಗಳಿವೆ ಇದರಲ್ಲಿ ಯಾವುದೇ ರೀತಿಯ ಸಂಸ್ಕರಿತ ಕೊಬ್ಬು ಅಥವಾ ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ.

ಮುಖದ ಚರ್ಮದ ಕಾಂತಿಯನ್ನು ಹೆಚ್ಚಿಸಲು ಬೇಕಾದ ವಿಟಮಿನ್ c ಹಾಗೂ ಆಂಟಿ ಆಕ್ಸಿಡೆಂಟ್ ಬೆಂಡೆಕಾಯಿಯಲ್ಲಿ ಹೇರಳವಾಗಿದ್ದು ಬೆಂಡೆಕಾಯಿ ತಿನ್ನುವವರ ಮುಖದ ಚರ್ಮ ಕಾಂತಿಯುತವಾಗಿರುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here