ರಕ್ತದೊತ್ತಡ ನಿಯಂತ್ರಣ ಈ ಸಣ್ಣ ಕೆಲಸ ಪ್ರತಿ ದಿನ ಮಾಡಿ.

0
1237

ಇಂದು ರಕ್ತದ ಒತ್ತಡ ಬಹಳ ಚಿಕ್ಕವಯಸ್ಸಿನಲ್ಲೇ ಕಾಡುತ್ತದೆ. ಆಧುನಿಕ ಕಾಲದ ಕೆಲಸದ ಒತ್ತಡ, ವ್ಯಾಯಾಮ ಇಲ್ಲದ ಬದುಕು, ಅಶಿಸ್ತು, ಊಟವನ್ನು ಯಾವಾಗ ನೆನೆಸಿದರೆ ಅವಾಗ ಮಾಡುವುದು ಇಂತಹ ಕಾರಣದಿಂದ ರಕ್ತದ ಒತ್ತಡ ಕಂಡುಬರುವುದು. ಇದಕ್ಕೆ ಇಲ್ಲಿ ಕೊಟ್ಟಿರುವ ಸಲಹೆಗಳನ್ನು ಅನುಸರಿಸಿ.

ಸರ್ಪಗಂಧಿ ಗಿಡದಿಂದ ತಯಾರಿಸಿದ ಚೂರ್ಣವನ್ನು ಒಂದುವರೆ ಗ್ರಾಂ ನಷ್ಟೂ ತೆಗೆದುಕೊಂಡು ಉಗುರು ಬೆಚ್ಚಗಿನ ನೀರಿಗೆ ಬೆರೆಸಿ ಕುಡಿಯುವುದರಿಂದ ರಕ್ತದ ಒತ್ತಡ ದೂರವಾಗುತ್ತೆ.

ಸರ್ಪಗಂಧಿ ದ್ರಾವಣ ಅಥವಾ ಮಾತ್ರೆ ಸಹ ಅಂಗಡಿಯಲ್ಲಿ ಸಿಗುತ್ತದೆ ಅದರ ಸೇವನೆಯಿಂದಲೂ ಕೂಡ ರಕ್ತದೊತ್ತಡ ದೂರ ಮಾಡಬಹುದು.

ಬೆಳ್ಳುಳ್ಳಿ ಅಂತಾನೇ ಗೊತ್ತಿಲ್ಲ ಅದರ ಸೇವನೆಯಿಂದಲೂ ಕೂಡ ರಕ್ತದ ಒತ್ತಡ ದೂರವಾಗುತ್ತದೆ, ವ್ಯಾಯಾಮ, ಶಿಸ್ತು, ಧ್ಯಾನ, ಏಕಾಗ್ರತೆ ಗಳಿಂದಲೂ ರಕ್ತದೊತ್ತಡ ಬರದಂತೆ ತಡೆಯಬಹುದು.

ಒಂದು ಬಟ್ಟಲು ಅನ್ನದ ಗಂಜಿ ಯೋಜನೆ 2 ಚಮಚ ನಿಂಬೆರಸ, 2 ಚಮಚ ಜೇನುತುಪ್ಪ, 2 ಚಮಚ ಬೆಳ್ಳುಳ್ಳಿ ರಸವನ್ನು ಸೇರಿಸಿ ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುವುದು.

ಬೇಸಿಗೆಯಲ್ಲಿ ರಸಭರಿತವಾದ ನಿಂಬೆಹಣ್ಣುಗಳನ್ನು ತೆಗೆದುಕೊಂಡು ಅದನ್ನು ಮಧ್ಯಭಾಗಕ್ಕೆ ಸೀಳಿ. ಸೀಳಿದ ಹೋಳುಗಳಿಗೆ ಅಡುಗೆ ಉಪ್ಪು ತುಂಬಿ ಚೆನ್ನಾಗಿ ಒಣಗಿಸಿ. ಸುಮಾರು 15 ದಿನಗಳ ಕಾಲ ಒಣಗಿಸಬೇಕು. ಹೀಗೆ ಒಣಗಿದ ನಿಂಬೆ ಹಣ್ಣನ್ನು ಚೆನ್ನಾಗಿ ಕುಟ್ಟಿ ಚೂರ್ಣ ತಯಾರಿಸಿಕೊಳ್ಳಿ.ಪ್ರತಿದಿನ ಖಾಲಿ ಹೊಟ್ಟೆಗೆ ನಿಂಬೆ ಚೂರ್ಣವನ್ನು ತೆಗೆದುಕೊಳ್ಳುವುದರಿಂದ ರಕ್ತದ ಒತ್ತಡ ನಿವಾರಣೆ ಮಾಡಬಹುದು.

ರಾತ್ರಿ ಮಲಗುವ ಮೊದಲು ಶುಭ್ರವಾದ ಕಂಚಿನ ಪಾತ್ರೆಯಲ್ಲಿ ನೀರನ್ನು ತುಂಬಿಸಿ ರುದ್ರಾಕ್ಷಿಯನ್ನು ಹಾಕಿಡಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ರೋಗ ದೂರ ಮಾಡಬಹುದು.

ಎಲೆಕೋಸು, ಹಸಿರು ತರಕಾರಿಗಳು, ಸೊಪ್ಪುಗಳು ಅದರಲ್ಲೂ ಚಕ್ಕೀರೆ ಸೊಪ್ಪಿನ ಸೇವನೆಯಿಂದ ರಕ್ತದ ಒತ್ತಡ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು.

ಆಯುರ್ವೇದದಲ್ಲಿ ನ ಬರುವ ಶಂಕಪುಷ್ಟಿ ಕಷಾಯವನ್ನು ಸೇವಿಸುವುದರಿಂದ ರಕ್ತದೊತ್ತಡ ದೂರವಾಗುತ್ತದೆ.

ಗಮನಿಸಿ : ರಕ್ತದ ಒತ್ತಡ ನಿವಾರಿಸಲು ಆಯುರ್ವೇದದಲ್ಲಿ ಬರುವ ಔಷಧಿಗಳು ರಾಮಬಾಣದಂತೆ ಕೆಲಸ ಮಾಡುವುದು. ತರಕಾರಿಗಳಲ್ಲಿರುವ ಜೀವಸತ್ವಗಳು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.

LEAVE A REPLY

Please enter your comment!
Please enter your name here