2 ವಾರದಲ್ಲಿ ದೇಹದ ತೂಕ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸುಲಭ ಟಿಪ್ಸ್.

0
2824

ಬಹಳಷ್ಟು ಜನ ತೂಕ ಕಡಿಮೆ ಮಾಡುವುದರ ಬಗ್ಗೆ ಕಷ್ಟ ಪಡುವುದನ್ನು ನಾವು ನಿತ್ಯವೂ ನೋಡುತ್ತೇವೆ. ಆದರೆ ತೂಕ ಹೆಚ್ಚಿಸಿಕೊಳಲ್ಲು ಆಸೆ ಪಡುವ ತುಂಬಾ ಜನರು ಸಹ ನಮ್ಮ ನಡುವೆ ಇದ್ದಾರೆ. ನಿಮ್ಮ ಎತ್ತರಕ್ಕೆ ಸರಿಯಾದ ತೂಕ ನೀವು ಇಲ್ಲದಿದ್ದರೆ ಕೂಡಲೇ ಅದನ್ನು ಪರೀಕ್ಷಿಸಿಕೊಳ್ಳಿ. ಇದು ಕೆಲವು ಕಾಯಿಲೆಯ ಲಕ್ಷಣವಾಗಿರಬಹುದು. ತೂಕ ಹೆಚ್ಚಿಸಿಕೊಳ್ಳಲು ನೀವು ಅನೇಕ ಆಹಾರಗಳನ್ನು ಸೇವಿಸುತ್ತಿದ್ದರು ಆ ಆಹಾರಗಳಿಂದ ನಿಮ್ಮ ತೂಕ ಹೆಚ್ಚುತ್ತಿಲ್ಲವೇ? ಈ ಕೆಳಗಿನ ಲೇಖನದಲ್ಲಿ ವೇಗವಾಗಿ ತೂಕ ಹೆಚ್ಚಿಸಲು ಕೆಲವು ಸಲಹೆಗಳನ್ನು ನೀಡಲಾಗಿದೆ.

ಕಡಿಮೆ ತೂಕಕ್ಕೆ ಕಾರಣಗಳು : ಹಸಿವಿಲ್ಲದಿರುವಿಕೆ, ಅನಾರೋಗ್ಯ, ವಂಶವಾಹಿ ಸಮಸ್ಯೆ, ಕ್ರೀಡಾ ಅಭ್ಯಸಗಳು.

ಸಸಾರಜನಕ ಹೇರಳವಾಗಿರುವ ಆಹಾರದ ಸೇವನೆ ಹಾಗೂ ವ್ಯಾಯಾಮದಿಂದ ದೇಹದ ತೂಕವನ್ನು ಅನಾಯಾಸವಾಗಿ ಹೆಚ್ಚಿಸಿಕೊಳ್ಳಬಹುದು. ತೂಕವನ್ನು ಹೆಚ್ಚಿಸಿಕೊಳ್ಳ್ಲುವ ಈ ಕೆಳಗಿನ ವಿಧಾನಗಳು ನಿಮ್ಮ ಕಡಿಮೆ ತೂಕದ ಸಮಸ್ಯೆಯನ್ನು ಪರಿಹರಿಸಬಹುದು.

ನೀವು ಬಹಳ ಸಣ್ಣದಾಗಿದ್ದರೆ, ತೂಕವನ್ನು ಹೆಚ್ಚಿಸಿಕೊಳ್ಳಲು ನಿಮ್ಮಗೆ ಎರಡು ವಿಧಾನಗಳಿವೆ : ಮಾಂಸಖಂಡಗಳ ಸಂರಚನೆಯನ್ನು ಬೆಳೆಸುವುದು : ದೇಹದಲ್ಲಿನ ಮಾಂಸಖಂಡಗಳನ್ನು ಹೆಚ್ಚಿಸುವುದರಿಂದ ನೀವು ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಹೀಗೆ ಕುಸ್ತಿ ಪಟುಗಳು, ಜಿಮ್ ನ ಬಾಡಿ ಬಿಲ್ಡೆರ್ ಗಳು ಅಂದರೆ ವೃತ್ತಿಪರ ವ್ಯೆಕ್ತಿಗಳು ಹೀಗೆ ದೇಹದ ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆ, ಆದರೆ ನಿಮಗೆ ಈ ರೀತಿಯ ದೇಹ ರಚನೆ ಇಷ್ಟವಾಗದ್ದಿದ್ದರು ಕೆಲವು ಕಡಿಮೆ ತೂಕ ಎತ್ತುವುದು ಹಾಗೂ ವ್ಯಯಮಗಳು ನಿಮ್ಮಗೆ ಸಾಕಾಗಬಹುದು.

ತೂಕವನ್ನು ಹೆಚ್ಚಿಸುವಲ ಆಹಾರ ಪದರ್ಥಗಳು : ಗಂಡಸರು ದಿನವೂ ಬೆಳ್ಳಿಗ್ಗೆ ಎರಡು ಮೂರು ಹಸಿ ಮೊತ್ತೆಗಳನ್ನು ಹಾಗೂ ಎರಡು ಮೂರು ಬೇಯಿಸಿದ ಮೊಟ್ಟೆಯನ್ನು ಮಧ್ಯಾನ್ಹದ ವೇಳೆ ಸೇವಿಸಬೇಕು. ಮೊಟ್ಟೆಯಲ್ಲಿ ಸಾಕಷ್ಟು ಸಸಾರಜನಕವಿರುವುದರಿಂದ ಗಂಡಸರಲ್ಲಿ ಮಾಂಸಖಂಡ ಬೆಳೆಯಲು ಸಹಾಯವಾಗುತ್ತದೆ.

ಹೆಂಗಸರ ಆಹಾರ ಕ್ರಮ ಸಹ ವಿಭಿನ್ನವಾಗೆ ಇರಬೇಕಾಗುತ್ತದೆ, ಮಹಿಳೆಯರು ಕ್ಯಾಲೋರಿ ಹೆಚ್ಚಿರುವ ಆಹಾರ ಅಂದರೆ ಗಿಣ್ಣು, ಆಲೂಗಡ್ಡೆಯ ಚಿಪ್ಸ್, ಪಿಜ್ಜಾ, ಎಣ್ಣೆಯಿರುವ ಆಹಾರ ಇತ್ಯಾದಿಗಳನ್ನು ಸೇವಿಸಿ ತೂಕವನ್ನು ಹೆಚ್ಚಿಸಿಕೊಳ್ಳಬಹುದು.

ನಿಯಮಿತವಾದ ಆಹಾರ ಸೇವಿಸುವುದರಿಂದ ಸಹ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಉದಾಹರಣೆಗೆ ನೀವು ದಿನಕ್ಕೆ ಒಂದು ಬಾರಿ ಲಘು ತಿಂಡಿಯನ್ನು ಸೇವಿಸುವಿರಾದರೆ ಅದನ್ನು ಎರಡು ಬಾರಿ ಸೇವಿಸುವಂತೆ ವ್ಯವಸ್ತೆ ಮಾಡಿಕೊಳ್ಳಿ ಹಾಗೆಯೇ ಒಂದು ಊಟಕ್ಕೆ ಬದಲಾಗಿ ಎರಡು ಮೂರು ಸಣ್ಣ ಊಟಗಳನ್ನು ಮಾಡಿ ಎರಡು ಅಥವಾ ಮೂರು ಗಂಟೆಗಳ ಅಂತರದಲ್ಲಿ ಸೇವಿಸಬೇಕು. ಇದರಿಂದ ದಿನಕ್ಕೆ ಆರು ಬಾರಿ ಆಹಾರವನ್ನು ಸೇವಿಸುವ ಅಭ್ಯಾಸವನ್ನು ರೂಡಿಸಿಕೊಳ್ಳಬಹುದು.

LEAVE A REPLY

Please enter your comment!
Please enter your name here