ಈ ಸುಲಭ ಪರಿಹಾರಗಳನ್ನು ಪಾಲಿಸಿ ಬೋಡು ತಲೆ ಬಿಳಿ ಕೂದಲು ಹಾಗೂ ಹೊಟ್ಟು ಸಮಸ್ಯೆಯಿಂದ ದೂರವಿರಿ..!!

0
1750

ಹೆಣ್ಣಾಗಲಿ ಗಂಡಾಗಲಿ ಅವರ ಅಂದ ವೃದ್ಧಿಯಾಗಲು ಕೂದಲು ಅತಿ ಮುಖ್ಯ, ಬೋಡು ತಲೆಯ ವ್ಯಕ್ತಿಯು ಎಷ್ಟೇ ಅಂದವಾಗಿದ್ದರೂ ಏನು ಪ್ರಯೋಜನವಿರುವುದಿಲ್ಲ ಅಂದ ಚಂದದ ಬಗ್ಗೆ ಗಮನ ಹರಿಸುವವರು ಕೂದಲಿನ ಆರೋಗ್ಯದ ಬಗ್ಗೆಯೂ ಹೆಚ್ಚಿನ ಗಮನವನ್ನು ಇರಿಸ ಬೇಕಾಗುತ್ತದೆ ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿದೆ ಸರಿಯಾದ ಪೋಷಣೆ ಇಲ್ಲದೆ ಇರುವುದರಿಂದ ಕೂದಲು ಉದುರುತ್ತದೆ ಹಾಗೂ ಬಿಳಿ ಬಣ್ಣಕ್ಕೆ ತಿರುಗುತ್ತದೆ ಇಂತಹ ಕೂದಲ ಸಮಸ್ಯೆಗೆ ಇಲ್ಲಿದೆ ಹಲವು ಪರಿಹಾರ.

ಕೂದಲಿನ ಸ್ವಚ್ಛತೆ ಬಹಳ ಪ್ರಮುಖವಾದ ಅಂಶ ಗಂಡಸರು ಪ್ರತಿದಿನ ಕೂದಲನ್ನು ತೊಳೆಯುವುದು ಒಳ್ಳೆಯದು ಆದರೆ ಹೆಣ್ಣು ಮಕ್ಕಳು ವಾರಕ್ಕೆ ಎರಡು ಬಾರಿಯಾದರೂ ಕೂದಲನ್ನು ತೊಳೆಯುವುದು ಉತ್ತಮ ಅಭ್ಯಾಸ ಹಾಗೂ ಕೂದಲನ್ನು ತೊಳೆಯಲು ರಾಸಾಯನಿಕ ವಸ್ತುಗಳನ್ನು ಅಥವಾ ಶಾಂಪೂಗಳನ್ನು ಬಳಸದೆ ಆರೋಗ್ಯಕರ ಸೀಗೆಕಾಯಿ ಗಳನ್ನು ಬಳಸುವುದು ಒಳ್ಳೆಯದು.

ಒದ್ದೆ ಕೂದಲನ್ನು ಬಾಚಿ ದರೆ ಹೊಟ್ಟು ಉಂಟಾಗುವ ಸಮಸ್ಯೆಗಳು ಹೆಚ್ಚಿರುತ್ತವೆ ತಲೆಯಲ್ಲಿ ಹೊಟ್ಟು ಹೆಚ್ಚಾದರೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ ಕೂದಲಿನ ಬೆಳವಣಿಗೆ ಕುಂಠಿತವಾಗುತ್ತದೆ.

ಚಿಕ್ಕ ವಯಸ್ಸಿನಲ್ಲಿ ನಿಮ್ಮ ಕೂದಲು ಬೆಳ್ಳಗಾಗುತ್ತದೆ ಚಿಂತೆ ಬೇಡ ಒಂದು ಬಟ್ಟಲಿನಲ್ಲಿ ಕೊಬ್ಬರಿ ಎಣ್ಣೆ ತೆಗೆದುಕೊಂಡು ಅದಕ್ಕೆ ಸ್ವಲ್ಪ ಮೆಂತ್ಯವನ್ನು ಬೆರೆಸಿ ಚೆನ್ನಾಗಿ ಕಾಯಿಸಿ, ಕಾಯಿಸಿದ ಕೊಬ್ಬರಿ ಎಣ್ಣೆ ಆರಿದ ನಂತರ ಒಂದು ಡಬ್ಬಿಯಲ್ಲಿ ಹಾಕಿ ಎತ್ತಿಡಿ ಈ ಎಣ್ಣೆಯನ್ನು ವಾರಕ್ಕೆ ಮೂರು ಬಾರಿ ನಿಮ್ಮ ಕೂದಲಿಗೆ ಬಳಸುವುದರಿಂದ ಬಿಳಿ ಕೂದಲ ಸಮಸ್ಯೆಯಿಂದ ನೀವು ದೂರವಿರಬಹುದು.

ಇನ್ನೂ ಕೂದಲು ನಿಮಗೆ ಹೆಚ್ಚಾಗಿ ಬೆಳೆಯುತ್ತಿಲ್ಲ ಅಥವಾ ಬೆಳವಣಿಗೆ ಕುಂಠಿತವಾಗಿ ಇದ್ದರೆ ದಂಟಿನ ಸೊಪ್ಪಿನ ರಸವನ್ನು ಕೂದಲಿನ ಬುಡ ಗಳಿಗೆ ಹಚ್ಚುವುದರಿಂದ ಕೂದಲು ಸಮೃದ್ಧವಾಗಿ ಬೆಳೆಯಲು ಶುರುವಾಗುತ್ತದೆ.

ಮದುವೆ ಮನೆಗಳಲ್ಲಿ ತಾಂಬೂಲದಲ್ಲಿ ಸಿಗುವ ವೀಳ್ಯದೆಲೆಯನ್ನು ಚೆನ್ನಾಗಿ ಅರೆದು ಕೊಬ್ಬರಿ ಎಣ್ಣೆಗೆ ಬೆರೆಸಿ ಸ್ವಲ್ಪ ಕಾಯಿಸಿ ಆರಿದ ನಂತರ ಏನೇನು ಸಹ ತಲೆಗೆ ಹಚ್ಚುವುದರಿಂದ ಬಿಳಿ ಕೂದಲ ಸಮಸ್ಯೆಯಿಂದ ದೂರವಾಗಬಹುದು.

ಸ್ವಲ್ಪ ಮೆಂತ್ಯವನ್ನು ರಾತ್ರಿ ಹಾಲಿನಲ್ಲಿ ನೆನೆಸಿ ಮರುದಿನ ಅದನ್ನು ನುಣ್ಣಗೆ ರುಬ್ಬಿ ಈ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ ನಿಮ್ಮ ಕೂದಲು ರೇಷ್ಮೆಯಂತ ಸಂಪಾಗಿ ಬೆಳೆಯಲು ಶುರು ಮಾಡುತ್ತದೆ ದಾಸವಾಳದ ಎಲೆಗಳನ್ನು ಅರೆದು ತಲೆಗೆ ಹಚ್ಚುವುದರಿಂದಲೂ ಕೂಡ ಕೂದಲು ಸೊಂಪಾಗಿ ಬೆಳೆಯುವುದು.

ಅತಿ ಮುಖ್ಯವಾಗಿ ಕೂದಲು ಬೆಳೆಯಬೇಕಾದರೆ ಮೊದಲು ದೇಹದಲ್ಲಿ ಉತ್ಕೃಷ್ಟವಾದ ಜೀವಸತ್ವಗಳು ಇರಬೇಕು ಕೂದಲು ಬೆಳೆಯಲು ಸಮತೋಲನ ಆಹಾರವನ್ನು ಸೇವಿಸಬೇಕು.

LEAVE A REPLY

Please enter your comment!
Please enter your name here