ನೀರಿಂದ ತೊಳೆಯಿರಿ : ಸುಟ್ಟುಗಾಯವಾದ ತಕ್ಷಣ ನಲ್ಲಿಯಲ್ಲಿ ನೀರನ್ನು ಬಿಟ್ಟು ಅದರಲ್ಲಿ ಸುಟ್ಟುಕೊಂಡ ಭಾಗವನ್ನು ತೊಳೆಯಿರಿ, ಈ ರೀತಿ 10 ನಿಮಿಷ ತೊಳೆದು ನಂತರ ಐಸ್ ನಿಂದ ಮೆಲ್ಲನೆ ಉಜ್ಜಬೇಕು, ಗಾಯ ಒಣಗುವವರೆಗೆ 8-10 ಗ್ಲಾಸ್ ನೀರನ್ನು ಕಡ್ಡಾಯವಾಗಿ ಕುಡಿಯಲೇ ಬೇಕು.
ಜೇನು : ತಣ್ಣೀರಿನಲ್ಲಿ ಗಾಯವನ್ನು ತೊಳೆದ ನಂತರ ಆ ಭಾಗಕ್ಕೆ ಅರಿಶಿನದ ಬದಲು ಸ್ವಲ್ಪ ಜೇನು ಹಾಕಿ, ಇದರಿಂದ ಗಾಯಕ್ಕೆ ಸೋಂಕು ಆಗುವುದಿಲ್ಲ.
ಹಣ್ಣುಗಳು : ಟೊಮೆಟೊ, ಚೆರ್ರಿ, ದ್ರಾಕ್ಷಿ ಹೀಗೆ antioxidants ಜಾಸ್ತಿ ಇರುವ ಹಣ್ಣುಗಳನ್ನು ಸೇವಿಸಿದರೆ ಗಾಯ ಬೇಗನೆ ಗುಣಮುಖವಾಗುವುದು.
ಅರಿಶಿಣ : ರಾತ್ರಿ ಮಲಗುವಾಗ ಹಾಲನ್ನು ಬಿಸಿ ಮಡಿ ಅದರಲ್ಲಿ ಅರಿಶಿಣವನ್ನು ಕರಗಿಸಿ ಅದನ್ನು ಹಚ್ಚಿದರೆ ಗಾಯ ಗುಣವಾಗುತ್ತೆ.
ಉಪ್ಪು : ಬಿಸಿಯಾದ ಆಹಾರವನ್ನು ಬಾಯಿಗೆ ಹಾಕಿದರೆ ಬಾಯಿ ನಾಲಗೆ ಸುಟ್ಟು ಹೋಗುತ್ತದೆ, ಆಗ ಉಪ್ಪನ್ನು ಸ್ವಲ್ಪ ಬಿಸಿ ನೀರಿಗೆ ಹಾಕಿ ಅದರಿಂದ ಬಾಯಿ ಮುಕ್ಕಳಿಸಬೇಕು.
ಲ್ಯಾವೆಂಡರ್ ಎಣ್ಣೆ : ಸುಟ್ಟ ಗಾಯ ಒಣಗಿದ ಮೇಲೆ ಕಲೆಗಳು ಹೋಗಲು ಲ್ಯಾವೆಂಡರ್ ಎಣ್ಣೆಯನ್ನು ಹಚ್ಚಿ.
ಆಲೂಗೆಡ್ಡೆ : ಗಾಯವಾದ ತಕ್ಷಣ ಬೇಯಿಸಿದ ಆಲೂಗೆಡ್ಡೆಯನ್ನು ಪೇಸ್ಟ್ ಮಾಡಿ ಸುಟ್ಟ ಭಾಗಕ್ಕೆ ಹಚ್ಚಿದರೆ ಸೋಂಕು ಆಗುವುದನ್ನು ತಡೆಯುತ್ತದೆ.
ಲೋಳೆಸರ : ಸುಟ್ಟ ಜಾಗದಲ್ಲಿ ದಿನಕ್ಕೆ 2-3 ಬಾರಿ ಲೋಳೆಸರ ಹಚ್ಚಿಕೊಂಡರೆ ಗಾಯ ಬೇಗನೆ ಗುಣಮುಖವಾಗುತ್ತದೆ, ಅಲ್ಲದೆ ಕಲೆ ಕೂಡ ಕಡಿಮೆಯಾಗುವುದು.
ವಿನಿಗರ್ : ನೀರಿನಲ್ಲಿ ವಿನಿಗರ್ ಮಿಶ್ರ ಮಾಡಿ ಸುಟ್ಟಕೊಂಡ ಜಾಗಕ್ಕೆ ಹಚ್ಚಿದರೆ ಗಾಯ ಬೇಗನೆ ಗುಣಮುಖವಾಗುತ್ತದೆ.
ಎಚ್ಚರ ನಿಮಗೆ ಉಗರು ಕಚ್ಚುವ ಅಭ್ಯಾಸ ಇದ್ದರೆ ಇಲ್ಲಿ ಓದಿ!
ಕೆಲವರು ತಮ್ಮ ಉಗುರುಗಳನ್ನು ಕಚ್ಚುವ ಭೀಕರ ಅಭ್ಯಾಸವನ್ನು ಹೊಂದಿರುತ್ತಾರೆ, ಇದು ಕೇವಲ ನಿಮ್ಮ ಉಗುರುಗಳನ್ನು ಹಾನಿಗೊಳಿಸುವುದಲ್ಲದೆ ನಿಮ್ಮ ಹಲ್ಲುಗಳನ್ನೂ ಹಾನಿಮಾಡುತ್ತದೆ, ಈ ಅಭ್ಯಾಸವನ್ನು ತೊಡೆದುಹಾಕಲು ಕೆಲವು ಸಲಹೆಗಳು ಇಲ್ಲಿವೆ, ಹಾಗು ಉಗರನ್ನು ಏಕೆ ಕಚ್ಚಬಾರದು ಎಂಬುವ ಪ್ರೆಶ್ನೆಗು ಉತ್ತರವನ್ನ ನೀಡಲಾಗಿದೆ ಮುಂದೆ ಓದಿ.
ಕಾಲಕಾಲಕ್ಕೆ ನಿಮ್ಮ ಉಗುರುಗಳನ್ನು ಕತ್ತರಿಸಿ. ಈ ರೀತಿಯಾಗಿ ನೀವು ಮಾಡುವುದರಿಂದ ನಿಮ್ಮ ಕೈ ನಲ್ಲಿ ಯಾವುದೇ ಉಗುರು ಇರುವುದಿಲ್ಲ ಮತ್ತು ಉಗರು ಕಚ್ಚುವ ಅಭ್ಯಾಸ ಕಡಿಮೆಯಾಗುತ್ತದೆ.
ಈ ಅಭ್ಯಾಸವನ್ನ ಬಿಡಲು ನೀವು ದೃಡವಾದ ನಿರ್ದಾರವನ್ನು ಮಾಡಬೇಕು ಅದಕ್ಕೆ ಸಹಾಯವಾಗುವಂತೆ ನಿಮ್ಮ ಮೊಬೈಲ್ ನಲ್ಲಿ ರೆಮೈನ್ದೆರ್ ಗಳನ್ನೂ ಬಳಸಿ ನೆನಪಿಸಿಕೊಳ್ಳಿ ಮತ್ತು ನೀವು ಸಮಯ ಕಳೆಯುವ ಜಾಗದಲ್ಲಿ ಚೀಟಿಗಳಲ್ಲಿ ಬರೆದು ಅಂಟಿಸಿ ಕೊಳ್ಳಿ.
ಸ್ತ್ರೀಯರು ನಿಮ್ಮ ಉಗುರುಗಳಿಗೆ ಸುಂದರವಾದ ಅಲಂಕಾರಗಳನ್ನ ಮಾಡಿಕೊಳ್ಳಿ ಯಾಕೆಂದರೆ ಸುಂದರವಾಗಿ ಕಾಣುವ ನಿಮ್ಮ ಉಗುರುಗಳನ್ನು ಕಚ್ಚಲು ನಿಮಗೆ ಮನಸ್ಸು ಬರುವುದಿಲ್ಲ.
ಉಗುರು ಕಚ್ಚುವ ಅಭ್ಯಾಸ ನಿಮಗೆ ಕೆಲವೊಮ್ಮೆ ಕ್ಯಾಲ್ಸಿಯಂ ಕೊರತೆಯು ಒಂದು ಕಾರಣವಾಗಿರುತ್ತದೆ, ಆದ್ದರಿಂದ ಹಾಲು ಉತ್ಪನ್ನಗಳನ್ನು ಒಳಗೊಂಡಿರುವ ಆರೋಗ್ಯಕರ ಆಹಾರವನ್ನು ಸೇವಿಸಿ.
ಉಗುರುಗಳನ್ನು ಕಚ್ಚಬೇಕು ಅಂತ ಅನಿಸಿದಾಗ ನಿಮ್ಮ ಗಮನವನ್ನ ಬೇರೆಕಡೆ ಕೇಂದ್ರಿಕರಿಸಿ, ಇದು ಯಾವುದು ನಿಮಗೆ ಉಪಯೋಗ ವಾಗದಿದ್ದಲ್ಲಿ ರೋಗ ನಿರೋಧಕಗಳಾದ ಬೇವು ಅಥವಾ ಮೆಣಸಿನ ಪೇಸ್ಟ್ ಮಾಡಿ ಉಗುರುಗಳಿಗೆ ಹಚ್ಚುತ್ತಾಬನ್ನಿ.