ಅಲಸಂದೆ ಕಾಳಿನಲ್ಲಿ ಇರುವ ಈ ಸೀಕ್ರೆಟ್ ನಿಮಗೆ ಗೊತ್ತಾ?

0
1340

ಅಲಸಂದೆಯನ್ನು ಹಿತಮಿತವಾಗಿ ಸೇವಿಸುವುದರಿಂದ ದೇಹ ಬಲ ಹೆಚ್ಚುವುದು ಹಾಲುಣಿಸುವ ಸ್ತ್ರೀಯರಲ್ಲಿ ಎದೆ ಹಾಲು ಹೆಚ್ಚುವುದು ಪುರುಷರಲ್ಲಿ ವೀರ್ಯ ವೃದ್ಧಿಯಾಗುವುದು.

ಒಣ ಅಲಸಂದೆ ಕಾಳನ್ನು ನೀರಿನಲ್ಲಿ ಬೇಯಿಸಿ ಬಸಿಯಬೇಕು ಆ ನೀರನ್ನು ಪ್ರತಿದಿನ ಒಂದು ಬಟ್ಟಲಿನಷ್ಟು ಸೇವಿಸುತ್ತಿದ್ದರೆ ಮೂತ್ರವಿಸರ್ಜನೆ ಚೆನ್ನಾಗಿ ಆಗುವುದು ಹೊಟ್ಟೆಯಲ್ಲಿ ಜಂತು ಹುಳುಗಳಿದ್ದು ಹೊಟ್ಟೆನೋವು ವಾಕರಿಕೆ ಈ ಲಕ್ಷಣಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದ ಪಕ್ಷದಲ್ಲಿ ಇದರಿಂದ ಗುಣ ಕಂಡುಬರುವುದು ಅಧಿಕ ಆಮ್ಲದಿಂದ ಆಗುವ ತೊಂದರೆ ನಿವಾರಣೆಯಾಗುವುದು.

ಅಲಸಂದೆ ಮತ್ತು ನುಗ್ಗೆಸೊಪ್ಪು ಬೇಯಿಸಿ ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚುವುದು ಮತ್ತು ಶಕ್ತಿ ವೃದ್ಧಿಯಾಗುವುದು ಹಲಸಂದೆಯು ದೇಹ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸಿದರು ಅಲಸಂದೆಯನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಿದಲ್ಲಿ ಜಠರದಲ್ಲಿ ಗಾಳಿ ತುಂಬಿಕೊಳ್ಳುವುದು ಅಜೀರ್ಣ ಉಂಟಾಗುವುದು ಮತ್ತು ಮಲ ಕಟ್ಟುವುದು.

ಅಜೀರ್ಣ ಜ್ಞಾಪಕಶಕ್ತಿ ಇಲ್ಲದಿರುವಿಕೆ ಅಂಗಾಂಗಗಳನ್ನು ಸೂಜಿಗಳಿಂದ ಚುಚ್ಚಿದಂತಾಗುವಿಕೆ ಇತ್ಯಾದಿ ರೋಗ ಲಕ್ಷಣಗಳು ಕಂಡುಬಂದಾಗ ಹಸಿರು ಹಲಸಂದೆ ಕಾಳನ್ನು ಹುರಿದು ಪ್ರತಿದಿನ ಒಂದು ಹಿಡಿ ಕಾಳು ತಿನ್ನುತ್ತಾ ಇದ್ದಲ್ಲಿ ಗುಣ ಕಂಡುಬರುವುದು.

ಪ್ರತಿದಿನ ಹಸಿರು ಅಲಸಂದೆ ಕಾಲನ್ನು ಬೆಲ್ಲದೊಂದಿಗೆ ಅಗಿದು ತಿನ್ನುವುದರಿಂದ ನಿದ್ರಾವಸ್ಥೆಯಿಂದ ಪಾರಾಗಬಹುದು ರಿಕೆಟ್ಸ್ ರೋಗದಿಂದ ಮುಕ್ತರಾಗಬಹುದು.

ಹಸಿ ಅಲಸಂದೆ ಕಾಯಿಯನ್ನು ಬೇಯಿಸದೆ ತಿನ್ನುವುದರಿಂದ ದೈಹಿಕ ಮತ್ತು ಮಾನಸಿಕ ಶಕ್ತಿ ಹೆಚ್ಚುವುದು.

LEAVE A REPLY

Please enter your comment!
Please enter your name here