ಸಾವಿರಾರು ವರ್ಷಗಳಿಂದಲೂ ಶುಂಠಿ ನಮ್ಮ ಆಹಾರ ಸಂಸ್ಕೃತಿ ಮತ್ತು ಔಷಧ ಸಂಸ್ಕೃತಿ ಎರಡರಲ್ಲೂ ಮಹತ್ವದ ಸ್ಥಾನ ಗಳಿಸಿಕೊಂಡಿದೆ ಭಾರತ ಸೇರಿದಂತೆ ಏಷ್ಯಾದ ರಾಷ್ಟ್ರಗಳಲ್ಲಿ ಇದರ ಬಳಕೆ ಹೆಚ್ಚು ಶೀತವಾಗಲಿ, ಅಜೀರ್ಣವಾಗಲಿ, ತಲೆನೋವಾಗಲಿ, ಮನೆಮದ್ದುಗಳ ಪೈಕಿ ತಕ್ಷಣ ನೆನಪಿಗೆ ಬರುವುದು ಶುಂಠಿ ಅರ್ಧಕಪ್ ಶುಂಠಿ ಕಷಾಯ ಕುಡಿದರೆ ಸಣ್ಣಪುಟ್ಟ ತೊಂದರೆಗಳೆಲ್ಲಾ ಮಾಯ ಹೀಗಾಗಿಯೇ ನಮ್ಮ ಹಿತ್ತಲುಗಳಲ್ಲಿ ಶುಂಠಿಗಿಡಕ್ಕೆ ಕಾಯಂ ಸ್ಥಾನ.
ಶುಂಠಿಯ ಬೇರು ಉತ್ತಮ ಹೀರುವಿಕೆಗೆ ಸಹಾಯ ಮಾಡುತ್ತದೆ ಮತ್ತು ಲೋಳೆ ಬಿಡುಗಡೆಗೊಳ್ಳಲು ಸಹ ಉತ್ತೇಜಿಸಿ ಹೊಟ್ಟೆಯನ್ನು ಹುಣ್ಣುಗಳಿಂದ ರಕ್ಷಿಸುತ್ತದೆ ಮತ್ತು ಹೊಟ್ಟೆಯಲ್ಲಿ ಆಮ್ಲದ ಪರಿಣಾಮವನ್ನು ಕಡಿಮೆ ಮಾಡುತ್ತದೆ.
ನೀವು ಶುಂಠಿಯ ಒಂದು ಚಿಕ್ಕ ತುಂಡನ್ನು ಅಗೆಯಬಹುದು ಇಲ್ಲವೆಂದರೆ ಅದನ್ನು ಸ್ವಲ್ಪ ನೀರಿನಲ್ಲಿ ಕುದಿಸಿ ಅದಕ್ಕೆ ಜೇನುತುಪ್ಪ ಅಥವಾ ಬೆಲ್ಲವನ್ನು ಹಾಕಿ ಮಾಡಿದ ಕಷಾಯವನ್ನು ಕುಡಿಯಿರಿ.
ಶುಂಠಿ ತೀವ್ರ ಥರದ ಸಂಧಿವಾತವನ್ನೂ ನಿಯಂತ್ರಣಕ್ಕೆ ತರುತ್ತದೆ ಎನ್ನುತ್ತಾರೆ ಡೆನ್ಮಾರ್ಕ್ನ ಒಡೆನ್ಸ್ ವಿಶ್ವವಿದ್ಯಾಲಯದ ಡಾ.ಕೃಷ್ಣ ಶ್ರೀವಾತ್ಸವ ಸಂಧಿವಾತದಿಂದ ಬಳಲುತ್ತಿದ್ದ ವ್ಯಕ್ತಿಗೆ ಅವರು ನಿತ್ಯ 50 ಗ್ರಾಂ ನಷ್ಟು ಶುಂಠಿಯನ್ನು ಒಂದು ತಿಂಗಳು ಸೇವಿಸಲು ಸಲಹೆ ಮಾಡಿದ್ದರು ಮೂರು ತಿಂಗಳ ಬಳಿಕ ಅವರನ್ನು ಪರೀಕ್ಷಿಸಿದಾಗ ಸಂಧಿವಾತದಿಂದ ಸಂಪೂರ್ಣ ಗುಣಮುಖರಾಗಿದ್ದರು ಇದು ಹತ್ತು ವರ್ಷ ಹಿಂದಿನ ಘಟನೆ ಆನಂತರ ಒಮ್ಮೆಯೂ ಆ ವ್ಯಕ್ತಿಯನ್ನು ವಾತ ಕಾಡಿಲ್ಲ ಎನ್ನುತ್ತಾರೆ ಡಾ.ಕೃಷ್ಣ ಸಂಧಿವಾತದಿಂದ ಬಳಲುತ್ತಿರುವವರು ಒಂದು ಸಲಕ್ಕೆ 5 ಗ್ರಾಂ ನಂತೆ ದಿನಕ್ಕೆ ಮೂರು ಸಲ ಒಂದು ತಿಂಗಳ ಕಾಲ ಶುಂಠಿ ಸೇವಿಸುವುದು ಉತ್ತಮ ಎನ್ನುವುದು ಅವರ ಸಲಹೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.