ಈ ಬೀಜ ಹೀಗೆ ಬಳಸಿ ಯಾವತ್ತೂ ಕೂದಲು ಉದುರುವುದಿಲ್ಲ!

0
1644

ಅಗಸೆ ಬೀಜ ನೈಸರ್ಗಿಕವಾಗಿ ಸಿಗುವಂತದ್ದು ಇದರಲ್ಲಿ ಹಲವು ಪೋಷಕಾಂಶ ಭರಿತವಾದ ಅಂಶಗಳು ಇವೆ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ತಲೆ ಕೂದಲು ಉದುರುವ ಸಮಸ್ಯೆ ಕೆಲವರಲ್ಲಿ ಜಾಸ್ತಿಯಾಗಿದೆ ಇದಕ್ಕೆ ಪರಿಹಾರ ಮಾರ್ಗಗಳು ಹಲವು ಇವೆ, ಅವುಗಳಲ್ಲಿ ಈ ಅಗಸೆ ಬೀಜದ ಮದ್ದು ಕೂಡ ಒಂದು.

ಅಗಸೆ ಬೀಜದಲ್ಲಿ ವಿಟಮಿನ್ ಇ ಹಾಗು ಒಮೇಗಾ 3 ಅಂಶ ಹೇರಳವಾಗಿದ್ದು, ಕೂದಲ ಸಂರಕ್ಷಣೆಗೆ ಬಹಳ ಸಕಾರಿಯಾಗಿದೆ, ಅಗಸೆ ಬೀಜವನ್ನು ಹೇಗೆ ಬಳಸಿ ಪರಿಹಾರ ಕಂಡುಕೊಳ್ಳಬಹುದು ಅನ್ನೋದನ್ನ ತಿಳಿಯೋಣ.

ಮೊದಲು ಒಂದು ಪಾತ್ರೆಯಲ್ಲಿ ಒಂದು ಬಟ್ಟಲು ಅಗಸೆ ಬೀಜ ಹಾಕಿ, ಅದಕ್ಕೆ ಅಗಸೆ ಬೀಜ ಹಾಕಿರು ಬಟ್ಟಲಿನ ಮೂರರಷ್ಟು ನೀರನ್ನ ಹಾಕಿ ಚನ್ನಾಗಿ ಕುದಿಸಿ. ಅದು ಚನ್ನಾಗಿ ಕುದಿದ ನಂತರ ಅದನ್ನ ಒಂದು ಬಟ್ಟಲಿನಲ್ಲಿ ಸೋಸಿ ಅದರ ನೀರನ್ನ ಒಂದು ಡಬ್ಬಿಯಲ್ಲಿ ಹಾಕಿ ಇಡಿ. ಇದನ್ನ ಫ್ರಿಜ್ ಅಲ್ಲಿ ಇಟ್ಟು ಹದಿನೈದರಿಂದ ಇಪ್ಪತ್ತು ದಿನಗಳ ವರೆಗೆ ಬಳಸಬಹುದು.

ನಾವು ಮೊದಲೇ ಶೇಖರಿಸಿಟ್ಟ ಅಗಸೆ ಬೀಜ ಕುದಿದ ನೀರು ತಣ್ಣಗಾದ ಬಳಿಕ ಜೆಲ್ ಆಗಿ ಪರಿವರ್ತನೆಯಾಗಿರುತ್ತದೆ. ಈ ಜೆಲ್ ಅನ್ನು ಒಂದು ಚಿಕ್ಕ ಬಟ್ಟಲಿನಲ್ಲಿ ಎರಡು ಚಮಚ (ನಮ್ಮ ಕೂದಲ ಅಳತೆಗೆ ತಕ್ಕಂತೆ) ತೆಗೆದು ಕೊಂಡು, ಅದಕ್ಕೆ ಎರಡು ಚಮಚ ಕೊಬ್ಬರಿ ಎಣ್ಣೆ ಅಥವಾ, ಒಂದು ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ ಚನ್ನಾಗಿ ಕಲಸಿ ಕೂದಲಿನ ಬುಡಕ್ಕೆ ಹಚ್ಚಿ ಚನ್ನಾಗಿ ಮಸಾಜ್ ಮಾಡಬೇಕು, ನಂತರ ಅರ್ಥ ಗಂಟೆಗಳ ಬಳಿಕ ಕೂದಲನ್ನ ತೊಳೆಯ ಬೇಕು.

ಇದನ್ನ ವಾರಕ್ಕೆ ಎರಡು ಬಾರಿ ಬಳಸುವುದರಿಂದ ಉತ್ತಮ ಫಲಿತಾಂಶವನ್ನ ಕಾಣಬಹುದು. ಇದನ್ನ ಬಳಸಿದ ಬಳಿಕ ನಾವು ಕೂದಲಿಗೆ ಕಂಡೀಷನರ್ ಅನ್ನು ಬಳಸುವ ಅಗತ್ಯವಿಲ್ಲ, ಇದು ಉತ್ತಮ ಏರ್ ಕಂಡೀಷನರ್ ಆಗಿ ಕೆಲಸ ಮಾಡುತ್ತದೆ. ಇದು ನಮ್ಮ ಕೂದಲನ್ನ ಮೃದುವಾಗಿಸುತ್ತದೆ ಮತ್ತು ದಟ್ಟವಾಗಿ ಬೆಳೆಯುವಂತೆ ಮಾಡುತ್ತದೆ.

LEAVE A REPLY

Please enter your comment!
Please enter your name here