ಮೊಳಕೆ ಕಾಳು ತಿನ್ನುವುದರಿಂದ ತಕ್ಷಣಕ್ಕೆ ಸಿಗುವ 4 ಸೂಪರ್ ಪವರ್ ನೋಡಿ!

0
2218

ಹೌದು ಮೊಳಕೆ ಕಾಳಿನಲ್ಲಿ ಹಲುವು ರೋಗ ನಿರೋಧಕ ಶಕ್ತಿಗಳಿವೆ, ಮೊಳಕೆ ಕಾಳಿನಲ್ಲಿ ಹಲುವು ಆರೋಗ್ಯಕ ಲಾಭಗಳನ್ನು ಪಡೆಯಬಹುದು. ಅದರಲ್ಲೂ ಮೊಳೆಕೆ ಸೇವಿಸುವುದರಿಂದಾಗಿ ಅತ್ಯಧಿಕ ಖನಿಜಗಳು, ವಿಟಮಿನ್‍ಗಳು, ಪೋಷಕಾಂಶಗಳು ಮತ್ತು ಪ್ರೊಟೀನ್‍ಗಳು ಆಹಾರ ರೂಪದಲ್ಲಿ ನಮ್ಮ ದೇಹವನ್ನು ಸೇರುತ್ತವೆ.

ಮೊಳಕೆಕಾಳುಗಳು ಬಹಳ ಶ್ರೀಮಂತ ಆಗಿರುತ್ತದೆ ಹಾಗು ಹಣ್ಣು ತರಕಾರಿಯಿಂದ ಸಿಗಬಹುದಾದ ನೂರು ಪಟ್ಟು ಹೆಚ್ಚಿನ ಎಂಜೈಮ್‌ಗಳು ದೇಹ ಸೇರಲಿದೆ. ಇವು ಬೇರೆ ಆಹಾರಗಳ ವಿಟಮಿನ್ಸ್, ಮಿನರಲ್ಸ್ ಇಥರೆ ಪೋಷಕಾಂಶಗಳನ್ನು ದೇಹಕ್ಕೆ ಹೀರಿಕೊಳ್ಳಲು ಸಹಕಾರಿಯಾಗಿವೆ.

ಜೀರ್ಣಕ್ರಿಯೆಗೆ ಹೆಚ್ಚು ಸಹಾಯಕವಾಗಿದೆ : ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಮೊಳಕೆ ಕಾಳು ತಿನ್ನುವುದು ಒಳ್ಳೆಯದು, ಇದರಲ್ಲಿರುವ ಪೋಷಕಾಂಶಗಳು ಆಹಾರವನ್ನು ಸರಿಯಾಗಿ ಜೀರ್ಣವಾಗಲು ಸಹಕರಿಸುತ್ತದೆ.

ರಕ್ತ ಪರಿಚಲನೆಗೆ ಉತ್ತಮವಾದ ಆಹಾರವಾಗಿದೆ : ರಕ್ತ ಪರಿಚಲನೆಗೆ ಮೊಳಕೆ ಕಾಳಿನ ಸೇವನೆ ಉತ್ತಮ, ಇದರಲ್ಲಿ ಕಬ್ಬಿಣ ಮತ್ತು ತವರದ ಅಂಶ ಸಾಕಷ್ಟಿದ್ದು, ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಎಷ್ಟು ಬೇಕೋ ಅಷ್ಟು ಇರುವಂತೆ ನೋಡಿಕೊಳ್ಳುತ್ತದೆ.

ತೂಕ ಇಳಿಸುವರಿಗೆ ಇದು ಇನ್ನು ಉತ್ತಮ : ತೂಕ ಇಳಿಸಲು ಡಯಟ್ ಮಾಡುವವರಮ ಆಹಾರದಲ್ಲಿ ಮೊಳಕೆ ಕಾಳು ಇರಲೇ ಬೇಕು, ಇದರಲ್ಲಿ ಫೈಬರ್ ಅಂಶ ಸಾಕಷ್ಟಿದ್ದು, ಹೊಟ್ಟೆ ತುಂಬಿರುವಂತೆ ಮಾಡುತ್ತದೆ, ಇದರಿಂದಾಗಿ ಆಗಾಗ ತಿನ್ನಬೇಕಾಗುವುದಿಲ್ಲ ನಾಲಿಗೆ ಮೇಲೂ ಕಡಿವಾಣ ಹಾಕಬಹುದು.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ : ಮೊಳಕೆ ಕಾಳಿನಲ್ಲಿ ವಿಟಮಿನ್ ಸಿ ಅಂಶ ಸಾಕಷ್ಟಿರುವುದರಿಂದ ರೋಗ ನಿರೋಧಕ ಶಕ್ತಿಯಿದೆ ಅಂತೆಯೇ ಇದರಲ್ಲಿ ವಿಟಮಿನ್ ಎ ಅಂಶವೂ ಇದೆ, ಈ ಮಾಹಿತಿ ನಿಮಗೆ ಇಷ್ಟ ವಾದಲ್ಲಿ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here