ನಾವು ದೇಹದ ತೂಕ ಹೆಚ್ಚಾಗಿ ಬೊಜ್ಜು ಹೆಚ್ಚಾಗುತ್ತಿದ್ದಂತೆ ತಲೆ ಬಿಸಿ ಮಾಡಿಕೊಳ್ಳುತ್ತೇವೆ, ಆದರೆ ಇದಕ್ಕೆ ನಾವು ಯಾವುದು ರಾಸಾಯನಿಕಗಳನ್ನ ಬಳಸದೆ ಸುಲಭವಾಗಿ ಮನೆಯಲ್ಲಿ ಸಿಗುವ ಟಮೊಟೊವನ್ನ ಬಳಸ ಬಹುದು, ಹೌದು ದೇಹದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಟೊಮ್ಯಾಟೋ ಒಂದು ವರದಾನವೇ ಸರಿ, ದೇಹದಲ್ಲಿ ಸೇರಿಕೊಂಡಿರುವ ಕೊಬ್ಬಿನಂತಹ ಪದಾರ್ಥಗಳನ್ನು ದೇಹದಿಂದ ಹೊರಹಾಕಲು ಇದು ಹೆಚ್ಚು ಸಹಕಾರಿಯಾಗಿದೆ.
ಟೊಮ್ಯಾಟೋ ಹಣ್ಣನ್ನು ಹಸಿಯಾಗಿ ಸ್ವಲ್ಪ ಉಪ್ಪು ಮತ್ತು ಸ್ವಲ್ಪ ಈರುಳ್ಳಿಯ ಜೊತೆಗೆ ದಿನವೂ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹದ ತೂಕ ಗಣನೀಯವಾಗಿ ಕಡಿಮೆಯಾಗುತ್ತದೆ.
ಟೊಮ್ಯಾಟೋ ಹಣ್ಣಿನ ರಸಕ್ಕೆ ಚಿಟಿಕೆ ಉಪ್ಪು ಮತ್ತು ಮೆಣಸಿನ ಕಾಳನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದಲ್ಲಿ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
ಟೊಮ್ಯಾಟೋ ಹಣ್ಣುಗಳಿಗೆ ಸ್ವಲ್ಪ ಉಪ್ಪು, ಸ್ವಲ್ಪ ಕರಿಮೆಣಸಿನ ಪುಡಿ ಸೇರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದಲ್ಲಿ ಹೊಟ್ಟೆಯಲ್ಲಿ ಹುಳುಗಳಿದ್ದರೆ ಹೊರಹೋಗುತ್ತವೆ.
ಟೊಮ್ಯಾಟೋ ಅರೆದು ಮುಖಕ್ಕೆ ಲೇಪನ ಮಾಡಿ ಮೃದುವಾಗಿ ಮಾಲಿಶ್ ಮಾಡಬೇಕು, ಸ್ವಲ್ಪ ಹೊತ್ತಿನ ನಂತರ ತೊಳೆಯಬೇಕು, ಇದರಿಂದ ಮುಖದ ಮೇಲಿರುವ ಕಲೆಗಳು ಮಾಯವಾಗಿ ಚರ್ಮ ನುಣುಪಾಗುತ್ತದೆ, ಮಾತ್ರವಲ್ಲ ಕಾಂತಿಯುತವೂ ಆಗುತ್ತದೆ.