ಓದಿದ್ದು ನೆನಪಿರಬೇಕು ಅಂದರೆ ಜಸ್ಟ್ ಈ ರೀತಿ ಮಾಡಿ ನೋಡಿ! ಸಿಂಪಲ್ ಟ್ರಿಕ್ಸ್

0
1757

ಮರೆವಿನ ಸಮಸ್ಯೆ ಹೆಚ್ಚಾಗಿ ಕಾಡುವುದು ಮಕ್ಕಳಲ್ಲಿ ಹಾಗೂ ವಯಸ್ಸಾದವರಲ್ಲಿ,  ಮಕ್ಕಳು ಕಷ್ಟಪಟ್ಟು ಪರೀಕ್ಷೆಗೆ ತಯಾರಿ ಮಾಡಿಕೊಂಡಿರುತ್ತಾರೆ ಅವರು ಓದಿರುವ ಪ್ರಶ್ನೆಯೇ ಪರೀಕ್ಷೆಯಲ್ಲಿ ಬಂದಿರುತ್ತದೆ ಆದರೆ ಅದಕ್ಕೆ ಉತ್ತರ ಬರೆಯಲು ಅವರಿಗೆ ಸಾಧ್ಯವಾಗಿರುವುದಿಲ್ಲ ಹಾಗೂ ಈ ಮಾತನ್ನು ಮಕ್ಕಳು ಹೇಳಿರುವುದನ್ನು ನೀವು ಕೇಳಿರುತ್ತೀರಿ, ಅಷ್ಟೇ ಅಲ್ಲ ದೊಡ್ಡವರು ಸಹ ಮರೆವಿನ ಸಮಸ್ಯೆಗೆ ಸಿಲುಕಿ ಒದ್ದಾಡುತ್ತಿರುತ್ತಾರೆ ಉದಾಹರಣೆಗೆ ಪಾರ್ಕಿನಲ್ಲಿ ಬೈಕ್ ನಿಲ್ಲಿಸಿ ಬೇರೆ ಕಡೆ ಅವರ ಬೈಕನ್ನು ಹುಡುಕುತ್ತಿರುತ್ತಾರೆ, ಈ ಅನುಭವ ಹಲವರಲ್ಲಿ ಇರುತ್ತದೆ.

ಹಾಗಾದರೆ ಈ ಮರೆವಿನ ಕಾಯಿಲೆಗೆ ಔಷಧ ವಾದರೂ ಏನು ಎಂಬ ಸಮಸ್ಯೆಗೆ ಪರಿಹಾರವನ್ನು ತಿಳಿಸುತ್ತೇವೆ ಸಂಪೂರ್ಣವಾಗಿ ಓದಿ.

ನೆನಪಿನ ಶಕ್ತಿ ಕಡಿಮೆಯಾಗಲು ಮುಖ್ಯ ಕಾರಣಗಳು ಆಕರ್ಷಣೆ ಇಲ್ಲದಿರುವುದು, ಇತರ ದುಃಖ ದುಮ್ಮಾನ, ಬೇಸರ, ಭಯ, ಆತಂಕಗಳು, ಅನಾರೋಗ್ಯ ಇವು ಮುಖ್ಯ ಕಾರಣಗಳು.

ಮೆದಳು ಸರಿಯಾಗಿ ಕೆಲಸ ಮಾಡಬೇಕು ಅಂದರೆ ನಿಮ್ಮ ದೇಹಕ್ಕೆ ಹಾಗೂ ಮೆದುಳಿಗೆ ಶಕ್ತಿಯನ್ನು ಪೂರೈಸುವಂತೆ ಉತ್ತಮ ಆಹಾರಗಳನ್ನು ಸೇವನೆ ಮಾಡಬೇಕು.

ಕೆಲವು ವಿಚಾರಗಳನ್ನು ನೀವು ಬರೆಯಲು ಶುರು ಮಾಡಿದ್ದರೆ ಆ ವಿಚಾರಗಳ ಬಗ್ಗೆ ಹೆಚ್ಚು ಗಮನವನ್ನು ಕೊಡಬೇಕು  ಹಾಗೂ ಆಸಕ್ತಿಯನ್ನು ನೀಡಬೇಕು.

ಓದುವಾಗ ಆದಷ್ಟು ಜೋರಾಗಿ ಓದುವ ಅಭ್ಯಾಸವನ್ನು ಮಾಡಿಕೊಂಡರೆ ಓದಿದ ವಿಚಾರಗಳು ಕಿವಿಗೆ ಮುಖಾಂತರ ನಿಮ್ಮ ನೆನಪಿನ ಶಕ್ತಿಯಲ್ಲಿ ಉಳಿದುಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ.

ಓದಲು ಪ್ರತಿದಿನ ಒಂದು ಅನುಕೂಲಕರವಾದ ಸಮಯವನ್ನು ನಿಗದಿ ಮಾಡಿಕೊಳ್ಳಬೇಕು ಹಾಗೂ ಪ್ರತಿದಿನ ಅದೇ ಸಮಯದಲ್ಲಿ ಓದುವ ಅಭ್ಯಾಸವನ್ನು ಮಾಡಿಕೊಳ್ಳಬೇಕು.

ಓದಿದ ವಿಚಾರಗಳನ್ನು ಅಥವಾ ಪಾಠವನ್ನು ನಿಮ್ಮ ಸಹಪಾಠಿ ಗಳೊಂದಿಗೆ ಹಂಚಿಕೊಳ್ಳುವುದರಿಂದ ಓದಿದ್ದು ನೆನಪಿನಲ್ಲಿ ಉಳಿಯುತ್ತವೆ.

ಈ ರೀತಿಯ ಕೆಲವು ಉಪಾಯಗಳು ಓದಿದ್ದು ನೆನಪಿನಲ್ಲಿ ಇಡಲು ಸಹಕಾರಿಯಾಗಿರುತ್ತದೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here