ಈ ಸಣ್ಣ ಕೆಲಸವೊಂದನ್ನು ಮಾಡಿದರೆ 100 ವರ್ಷವಾದರೂ ನಿಮಗೆ ಸೊಂಟದ ನೋವು ಬರುವುದಿಲ್ಲ!

0
1731

ಆಧುನಿಕತೆಯ ಸಾಗರದಲ್ಲಿ ಮುಳುಗಿರುವ ನಾವು ದೈಹಿಕ ಕೆಲಸಗಳನ್ನು ಸಾಕಷ್ಟು ಕಡಿಮೆ ಮಾಡಿಕೊಂಡಿದ್ದೇವೆ, ಪ್ರತಿಯೊಂದು ನಮ್ಮ ದೈನಂದಿನ ಕೆಲಸಗಳನ್ನು ಮಾಡಲು ಯಂತ್ರಗಳ ಬಳಕೆ ಹೆಚ್ಚಾಗಿ ಮಾಡುತ್ತಿದ್ದೇವೆ, ಈ ರೀತಿ ದೇಹವು ನಿರಾಯಾಸವಾಗಿ ಇರುವುದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಮನೆಯಲ್ಲಿರುವ ಗೃಹಿಣಿಯರಿಗೆ ಅಥವಾ ಹೊರಗೆ ಹೋಗಿ ಕೆಲಸ ಮಾಡಿ ದಣಿದು ಬರುವ ಪುರುಷರಿಗೆ ಅತಿಯಾಗಿ ಸೊಂಟದ ನೋವು ಕಾಣಿಸಿಕೊಳ್ಳುತ್ತದೆ, ನಿಮಗೆ ಆಶ್ಚರ್ಯ ಅನಿಸಬಹುದು ಒಂದು ಕಾಲದಲ್ಲಿ 40 ವರ್ಷ ದಾಟಿದವರಿಗೆ ಮಾತ್ರ ಸ್ವಂತದ ನೋವು ಕಾಣಿಸಿಕೊಳ್ಳುತ್ತಿತ್ತು ಆದರೆ ಈಗ 20 ವರ್ಷದಿಂದ 30 ವರ್ಷದ ಒಳಗೆ ಇರುವವರೆಗೂ ಸೊಂಟದ ನೋವು ಮಾಡಲು ಶುರುಮಾಡಿದೆ.

ಈ ರೀತಿಯ ಸೊಂಟದ ನೋವು ದಿನಗಟ್ಟಲೆ ಕೆಲವೊಮ್ಮೆ ವಾರಗಟ್ಟಲೆ ನಿಮ್ಮನ್ನು ಕಾಡಲು ಶುರು ಮಾಡುತ್ತದೆ, ಹಾಗಾದರೆ ಈ ಸ್ವಂತ ನೋವಿಗೆ ಏನಾದರೂ ಶಾಶ್ವತ ಪರಿಹಾರವಿದೆಯೇ ಆಯುರ್ವೇದ ಅಥವಾ ನಮ್ಮ ಗಿಡಮೂಲಿಕೆಗಳಲ್ಲಿ ಶಾಶ್ವತ ಪರಿಹಾರ ಸಿಗಬಹುದೇ ಹೌದು ನಾವು ನಮ್ಮ ಮನೆಯಲ್ಲಿ ಮಾಡುವ ಮನೆಮದ್ದು ಗಳ ಮುಖಾಂತರ ಸೊಂಟ ನೋವಿನ ಸಮಸ್ಯೆಗೆ ಶಾಶ್ವತ ಪರಿಹಾರಗಳನ್ನು ಕಾಣಬಹುದು, ಅತಿ ಕಡಿಮೆ ಸಮಯದಲ್ಲಿ ಹಾಗೂ ಅತಿ ಕಡಿಮೆ ಬೆಲೆಯಲ್ಲಿ ಸೊಂಟ ನೋವಿನ ಮನೆಮದ್ದುಗಳನ್ನು ತಯಾರು ಮಾಡುವ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಎಳ್ಳೆಣ್ಣೆ ಮತ್ತು ಸಾಸುವೆ ಎಣ್ಣೆ ಮಿಶ್ರಣ : ತಲಾ ಎರಡು ಚಮಚ ಗಳಂತೆ ಎಳ್ಳೆಣ್ಣೆ ಮತ್ತು ಸಾಸುವೆ ಎಣ್ಣೆಗಳನ್ನು ಒಂದು ಸೌಟಿನಲ್ಲಿ ಹಾಕಿಕೊಳ್ಳಿ, ಹಾಗೂ ಅದನ್ನು ಉಗುರು ಬೆಚ್ಚಗೆ ಆಗುವಷ್ಟು ಕಾಯಿಸಿಕೊಂಡು, ನಂತರ ಇದನ್ನು ನಿಮ್ಮ ಸೊಂಟದ ಮೇಲೆ ಹಾಕಿಕೊಂಡು ನಿಮ್ಮವರ ಜೊತೆ ಮಸಾಜ್ ಮಾಡಿಸಿಕೊಳ್ಳಿ, ಅಥವಾ ನೋವಿರುವ ಭಾಗದಲ್ಲಿ ನೀವೇ ಸ್ವಲ್ಪ ಮಸಾಜ್ ಮಾಡಿಕೊಳ್ಳಿ, ಇದಾದ ಅರ್ಧ ಗಂಟೆ ಬಳಿಕ ಬಿಸಿ ನೀರಿನಿಂದ ಸ್ನಾನ ಮಾಡಿಕೊಳ್ಳಿ ಇದರಿಂದ ನಿಮ್ಮ ಸೊಂಟದ ನೋವು ಮಾಯವಾಗುತ್ತದೆ.

ತೆಂಗಿನ ಎಣ್ಣೆ ಮತ್ತು ಕರ್ಪೂರ : ದೊಡ್ಡಗಾತ್ರದ ಪಾತ್ರೆಯಲ್ಲಿ ತೆಂಗಿನ ಎಣ್ಣೆಯನ್ನು ಹಾಕಿಕೊಂಡು ಅದರಲ್ಲಿ ಕರ್ಪೂರವನ್ನು ಸಂಪೂರ್ಣವಾಗಿ ಕರಗಿಸಬೇಕು, ನಂತರ ಇದನ್ನು ಬಿಸಿಮಾಡಿ ನಂತರ ಅದನ್ನು ತಣ್ಣಗಾಗಲು ಬಿಡಿ ನಂತರ ಇದನ್ನು ಒಂದು ಬಟ್ಟಲಿನಲ್ಲಿ ಹಾಕಿ ಕೊಳ್ಳಿ, ನಿಮಗೆ ಯಾವಾಗ ಸೊಂಟ ನೋವು ಕಾಣಿಸಿಕೊಳ್ಳುತ್ತದೆ ಯೋ ಆವಾಗಲೇ ಅಗತ್ಯವಾದ ಭಾಗಗಳಿಗೆ ಈ ಎಣ್ಣೆಯನ್ನು ಹಚ್ಚಿಕೊಂಡು ಮಸಾಜ್ ಮಾಡುವುದರಿಂದ ಆ ಜಾಗದ ನೋವನ್ನು ಆದಷ್ಟು ಬೇಗ ಕಡಿಮೆ ಮಾಡಿಕೊಳ್ಳಬಹುದು.

ಶುಂಠಿಯರಸ ಮತ್ತು ಅರಿಶಿಣದ ಮಿಶ್ರಣ : ಅರ್ಧ ಗ್ಲಾಸ್ ಶುಂಠಿಯರಸ ಕ್ಕೆ ಒಂದು ಚಿಟಿಕೆ ಅರಿಶಿನ ಪುಡಿಯನ್ನು ಸೇರಿಸಿ ಇದನ್ನು ನಾವು ದಿನ ಕುಡಿಯುವುದರಿಂದ ಸೊಂಟದ ನೋವಿಗೆ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ, ನಿಯಮಿತವಾಗಿ ಈ ರಸವನ್ನು ಕುಡಿಯುವುದರಿಂದ ನಮ್ಮ ಜೀವಮಾನದಲ್ಲಿ ನಮಗೆ ಸೊಂಟ ನೋವು ಬರದಂತೆ ಕಾಯುತ್ತದೆ.

ಅಕ್ಕಿ : ಮನೆಯಲ್ಲಿ ಒಂದು ಹಿಡಿ ಅಕ್ಕಿ ಅನ್ನು ಬಟ್ಟೆಯಲ್ಲಿ ಇಟ್ಟು ಗಂಟನ್ನ ಕಟ್ಟಿಕೊಳ್ಳಿ ನಂತರ ಅದನ್ನು ಓವೆನ್ ಅಥವಾ ನೀರಿನಲ್ಲಿ ಮುಳುಗಿಸಿ ಬಿಸಿಮಾಡಿಕೊಳ್ಳಿ, ನಿಮ್ಮ ಕೈಬಿಸಿ ತಡೆಯುವಷ್ಟು ಅದನ್ನು ಇಟ್ಟುಕೊಳ್ಳಬಹುದು, ನಂತರ ಸೊಂಟ ನೋವು ಇರುವ ಭಾಗದಲ್ಲಿ ಇದನ್ನು ಇಟ್ಟು ಒತ್ತಬೇಕು, ಇದರಿಂದ ಸೊಂಟದ ನೋವು ಶೀಘ್ರವಾಗಿ ಪರಿಹಾರವಾಗುತ್ತದೆ.

LEAVE A REPLY

Please enter your comment!
Please enter your name here