ಬಾಳೆಹಣ್ಣಿನ ಜೊತೆ ಈ ಆಹಾರಗಳು (BP) ರ’ಕ್ತದೊತ್ತಡ ಬರದಂತೆ ಕಾಯುತ್ತದೆ! ಯಾವುದು ನೋಡಿ

0
967

ಸಧ್ಯದ ಪರಿಸ್ಥಿಯಲ್ಲಿ ಜನರು ಸೇವಿಸುತ್ತಿರುವ ಆಹಾರದ ಮೇಲೆ ಇತ್ತೀಚಿಗಿನ ಅಧ್ಯನ ಒಂದು ನೆಡೆದಿದ್ದು ಅದರ ಪ್ರಕಾರ ಜನರು ಸೇವಿಸುತ್ತಿರುವ ಆಹಾರದಲ್ಲಿ ಸರಾಸರಿ 9.5-10.5ಗ್ರಾಂ ನಷ್ಟು ಉಪ್ಪನ್ನು ಪ್ರತಿನಿತ್ಯ ಸೇವಿಸುತ್ತಿದ್ದಾರೆ, ಈ ರೀತಿಯ ಅಹಾರ ಸೇವನೆ ಪದ್ಧತಿಯಿಂದ ಅಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚಾಗಿ ಕಂಡು ಬಂದಿದೆ, ನಿಮಗೆ ನೆನಪಿರಲಿ ನೀವು ಯಾವುದೇ ಆಹಾರ ಸೇವಿಸಿದರು ಅದು ನೇರವಾಗಿ ನಿಮ್ಮ ರಕ್ತದ ಮೇಲೆ ಪರಿಣಾಮ ಬೀರುತ್ತದೆ.

ಹಾಗಾಗಿ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿ ಇಡಲು ನಾವು ತಿಳಿಸುವ ಈ ಆಹಾರವು ನಿಮಗೆ ಬಹಳ ಉಪಕಾರಿಯಾಗಲಿದೆ.

ಪೊಟ್ಯಾಶಿಯಂ ಅಂಶ ಹೆಚ್ಚಿರುವ ಆಹಾರವನ್ನು ಸೇವಿಸುವುದರಿಂದ ಸೊಡಿಯೋ ಅಂಶವು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವದನ್ನು ತಡೆಯುತ್ತದೆ, ಆದ್ದರಿಂದ ಪೊಟ್ಯಾಶಿಯಂ ಅಂಶ ಹೆಚ್ಚಿರುವ ಬಾಳೆಹಣ್ಣನ್ನು ಪ್ರತಿ ನಿತ್ಯ ಸೇವಿಸುವುದರಿಂದ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ನಿವಾರಣೆ ಹೊಂದಲು ಸಹಕಾರಿ.

ವಾರದಲ್ಲಿ ಐದು ಬಾರಿ ಯೋಗಾರ್ಟ್ ಸೇವಿಸುವುದರಿಂದ ಅಧಿಕ ರಕ್ತದೊತ್ತಡದ ಸಂಭವವನ್ನು 20% ಕಡಿಮೆ ಮಾಡಬಹುದು, ಯೋಗಾರ್ಟ್​ ರುಚಿಯಾಗಿಯೂ ಇರುವುದರಿಂದ ಸ್ನ್ಯಾಕ್ಸ್​, ಹಣ್ಣುಗಳ ಜೊತೆ ಸೇವಿಸಬಹುದು.

ದೇಹದಲ್ಲಿ ನೈಟ್ರಿಕ್​ ಆ್ಯಸಿಡ್​ ಅಂಶ ಹೆಚ್ಚಿಸಲು ಬೆಳ್ಳುಳ್ಳಿ ಸಹಾಯಕಾರಿ, ಇದರಿಂದ ಅಪಧಮನಿಗಳು ಹಿಗ್ಗುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

ಮೇಲೆ ತಿಳಿಸದ ಹಾಗೆ ಪೊಟ್ಯಾಶಿಯಂ ಜಾಸ್ತಿ ಇರುವ ಮೊತ್ತೊಂದು ಆಹಾರ ಕ್ಯಾರೆಟ್, ಈ ತರಕಾರಿಯ ಸೇವನೆಯಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ ಹಾಗೂ ಹೃದಯದ ಆರೋಗ್ಯವನ್ನೂ ಕಾಪಾಡಬಹುದು.

ಸೂರ್ಯಕಾಂತಿ ಬೀಜದಲ್ಲಿ ವಿಟಮಿನ್​ ಇ, ಫೋಲಿಕ್​ ಆ್ಯಸಿಡ್​, ಪ್ರೋಟೀನ್ ಹಾಗೆ ಫೈಬರ್​ ಅಂಶವಿದೆ ಇವು ಹೃದಯದ ಆರೋಗ್ಯಕ್ಕೆ ಉತ್ತಮ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ ಆದರೆ ಸೂರ್ಯಕಾಂತಿ ಬೀಜವನ್ನು ಉಪ್ಪು ಸೇರಿಸದೇ ಸೇವಿಸಿ.

ನೀವು ದಿನವೂ ಸೇವಿಸುತ್ತಿರುವ ಆಹಾರದಲ್ಲಿ ಪೋಷಕಾಂಶ ಸರಿಯಾಗಿ ಸಿಗುತ್ತಿದ್ಯ.

ನಮ್ಮ ಆಹಾರ ಸೇವನೆಯಲ್ಲಿ ಪೋಷಕಾಂಶದ ಕೊರತೆಯು ಹೆಚ್ಚಾದರೆ ನಮಗೆ ಬಗೆ ಬಗೆಯ ರೋಗಗಳು ಆವರಿಸಲು ಪ್ರಾರಂಭವಾಗುತ್ತದೆ, ಪೋಷಕಾಂಶದ ಅವಶ್ಯಕತೆಯು ಮುಖ್ಯವಾಗಿ ಮಕ್ಕಳಿಗೆ ಮತ್ತು ಸ್ತ್ರೀಯರಿಗೆ ಹೆಚ್ಚಾಗಿರುತ್ತದೆ, ಇತ್ತೀಚಿನ ದಿನಗಳಲ್ಲಿ ನಾವು ಬೆಳೆಯುತ್ತಿರುವ ಹಣ್ಣು, ತರಕಾರಿ ಮತ್ತು ಆಹಾರ ಪದಾರ್ಥಗಳಲ್ಲಿ ಪೋಷಕಾಂಶದ ಕೊರತೆಯು ಹೆಚ್ಚಾಗಿ ಕಂಡುಬರುತ್ತಿದೆ.

ಏಕೆಂದರೆ ನಾವು ಬೆಳೆಯುತ್ತಿರುವ ಬೆಳೆಗಳಿಗೆ ಸಾರವತ್ತಾದ ಗೊಬ್ಬರವನ್ನು ಸಕ್ರಮವಾಗಿ ಹಾಕದೆ ಹೆಚ್ಚು ಇಳುವರಿ ಬರಬೇಕೆಂಬ ಉದ್ದೇಶದಿಂದ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಬೆಳೆಯುವ ಧವಸ ಧಾನ್ಯಗಳಲ್ಲಿ ಪೋಷಕಾಂಶದ ಕೊರತೆಯು ಹೆಚ್ಚಾಗಿದೆ.

ಪೋಷಕಾಂಶದ ಕೊರತೆ ಹೆಚ್ಚಾದಲ್ಲಿ ರಕ್ತಹೀನತೆಯು ಹೆಚ್ಚಾಗುತ್ತದೆ, ಇದರ ಪರಿಣಾಮವಾಗಿ ಬಗೆ ಬಗೆಯ ರೋಗಗಳು ಆವರಿಸಿ ನಮ್ಮ ಆರೋಗ್ಯವು ಹದಗೆಡುತ್ತದೆ, ಆದ್ದುದರಿಂದ ನಾವು ಸೇವಿಸುವ ಆಹಾರಗಳಲ್ಲಿ ಹಣ್ಣುಗಳು, ಸೊಪ್ಪುಗಳು, ತರಕಾರಿ ಹೆಚ್ಚಾಗಿರುವಂತೆ ಜಾಗ್ರತೆ ವಹಿಸ ಬೇಕು, ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಪದಾರ್ಥಗಳ ಸೇವನೆಯನ್ನು ಹೆಚ್ಚಾಗಿ ಮಾಡಬೇಕು.

ನಾವು ಸೇವಿಸುವ ಆಹಾರವು ನಿರಂತರ ಒಂದೇ ರೀತಿಯದಾಗಿದ್ದರೆ ನಮ್ಮಲಿ ಪೋಷಕಾಂಶಗಳ ಕೊರತೆಯು ಹೆಚ್ಚಾಗುತ್ತದೆ, ಆದ್ದರಿಂದ ನಾವು ಸೇವಿಸುವ ದಿನ ನಿತ್ಯದ ಆಹಾರದಲ್ಲಿ ಹಣ್ಣುಗಳು, ಸೊಪ್ಪುಗಳು ಹಾಗು ತರಕಾರಿಯು ಹೆಚ್ಚಾಗಿರುವಂತೆ ನೋಡಿಕೊಳ್ಳಬೇಕು.

LEAVE A REPLY

Please enter your comment!
Please enter your name here