ಬಾಯಿರುಚಿಗೆ ಸಿಕ್ಕಿದ್ದಲ್ಲ ತಿಂದು ಹೊಟ್ಟೆ ನೋವು ಬಂದರೆ ಹೀಗೆ ಮಾಡಿ ತಕ್ಷಣ ನೆಮ್ಮದಿ ಸಿಗುತ್ತದೆ!

0
1700

ಫುಡ್ ಪಾಯ್ಸನ್ ಅಂದರೆ ನಾವು ತಿಂದ ಆಹಾರ ನಮ್ಮ ದೇಹದೊಳಗೆ ವಿಷವಾಗಿ ಪರಿವರ್ತನೆಯಾಗುವುದು, ಕಾರಣ ಮನುಷ್ಯರು ಹೆಚ್ಚು ನಾಲಿಗೆಗೆ ಪ್ರಾಮುಖ್ಯತೆಯನ್ನು ಕೊಡುತ್ತೇವೆ, ಹಾಗಾಗಿ ಸಂಜೆಯಾದರೆ ಸಾಕು ಒಂದು ರೌಂಡ್ ಮನೆ ಹೊರಗೆ ಸುತ್ತಾಡಿ ಏನೇನೋ ತಿಂದು ಮನೆಗೆ ಬರುತ್ತೇವೆ, ಆ ಕ್ಷಣಕ್ಕೆ ಅದು ಹಿತಕರವೇ ಆದರೆ ಮನೆಗೆ ಬಂದ ನಂತರ ಅದರಿಂದ ಆಗುವ ಸೈಡ್ ಎಫ್ಫೆಕ್ಟ್ಸ್ ಗೋಚರವಾಗುತ್ತದೆ, ರುಚಿಯಾಗಿರುವ ಆಹಾರ ಬೆಲ್ಲ ಶುದ್ಧವಾಗಿಯೂ ಆರೋಗ್ಯವಾಗಿರುತ್ತದೆ ಎಂಬ ಖಾತರಿ ಇರುವುದಿಲ್ಲ ಅಲ್ಲವೇ, ಮನೆಯ ಊಟ ಬಿಟ್ಟು ಹೋಟೆಲ್ ಊಟ ನಿಮ್ಮ ಆರೋಗ್ಯವನ್ನು ಆಗಾಗ ಕೆಡಿಸುತ್ತದೆ, ಇನ್ನು ಇಂತಹ ಫುಡ್ ಪಾಯಿಸನ್ ಸಮಸ್ಯೆಗೆ ಮನೆ ಮದ್ದಿನ ಬಗ್ಗೆ ನಿಮಗೆ ತಿಳಿಸುತ್ತೇವೆ.

ಇನ್ನು ಫುಡ್ ಪಾಯಿಸನ್ ಬಂದರೆ ವಾಕರಿಕೆ, ವಾಂತಿ, ಅತಿಸಾರ, ಹೊಟ್ಟೆ ನೋವು ಇವುಗಳು ಸಾಮಾನ್ಯ, ಇವುಗಳಿ ಉತ್ತಮ ಪರಿಹಾರ ಇಂದು ತಿಳಿಸುತ್ತೇವೆ.

ಹೊಟ್ಟೆ ನೋವಿನ ಸಮಸ್ಯೆಗೆ ಹಿಂದಿನಿಂದಲೂ ಶುಂಟಿಯನ್ನ ಬಳಸುತ್ತ ಬಂದಿದ್ದಾರೆ, ಅರ್ಥ ಶುಂಠಿ ಹಾಗು ಜೇನುತುಪ್ಪವನ್ನು ನೀರಿನಲ್ಲಿ ಚೆನ್ನಾಗಿ ಕಾಯಿಸಿ ಕುಡಿದರೆ ಹೊಟ್ಟೆ ನೋವು ತಕ್ಷಣಕ್ಕೆ ಕಡಿಮೆಯಾಗುತ್ತದೆ.

ಬೆಳ್ಳುಳ್ಳಿಯಲ್ಲಿದೆ ಆ್ಯಂಟಿವೈರಲ್ ಗುಣ, ಈ ಆ್ಯಂಟಿಬ್ಯಾಕ್ಟೀರಿಯಲ್​ ಮತ್ತು ಆ್ಯಂಟಿಫಂಗಲ್​ ಗುಣ ದೇಹವನ್ನು ಸ್ವಚ್ಛಗೊಳಿಸುವಲ್ಲಿ ಉತ್ತಮವಾದದ್ದು ಎಂದು ಹೇಳಲಾಗಿದೆ ಹಾಗು ಹಸಿ ಬೆಳ್ಳುಳ್ಳಿಯ ಎಸಳನ್ನು ನೀರಿನ ಜೊತೆ ಸೇವಿಸಿ, ಇದರಿಂದ ಹೊಟ್ಟೆ ಸಮಸ್ಯೆ ಮಾಯವಾಗುತ್ತದೆಯಂತೆ.

ನಿಂಬೆ ಹಣ್ಣಿನಲ್ಲೂ ಸಹ ಆ್ಯಂಟಿಆಕ್ಸಿಡೆಂಟ್ ಗುಣವಿದ್ದು, ದೇಹದ ಅರೋಗ್ಯ ಕಾಪಾಡುವಲ್ಲಿ ಉತ್ತಮ ಪಾತ್ರ ವಹಿಸುತ್ತದೆ, ಒಂದು ಲೋಟ ನೀರಿನಲ್ಲಿ ಅರ್ಧ ನಿಂಬೆ ಹೋಳಿನ ರಸ ಇಂಡಿ ಕುಡಿದರೆ ಹೊಟ್ಟೆ ತೊಳಸುವಿಕೆ ಕಡಿಮೆಯಾಗುತ್ತದೆ, ಅವಶ್ಯವಿದ್ದರೆ ಇದರಲ್ಲಿ ಜೇನು ತುಪ್ಪ ಸಹ ಬೆರಸಬಹುದು.

ಫುಡ್​ ಪಾಯಿಸ್ನಿಂಗ್​ ಸಮಸ್ಯೆಗೆ ಜೀರಿಗೆ ತಕ್ಷಣ ಪರಿಹಾರ ನೀಡುತ್ತದೆ. ಒಂದು ಚಮಚ ಜೀರಿಗೆಯನ್ನು ನೀರಿಗೆ ಹಾಕಿ ಕುದಿಸಿ. ಇದಕ್ಕೆ ಕೊತ್ತಂಬರಿ ರಸ ಹಾಗು ಸ್ವಲ್ಪ ಉಪ್ಪು ಹಾಕಿ, ಅದರ ಜೊತೆ ಬೆರೆಸಿ ಸೇವಿಸಿ. ಇದರಿಂದ ದೇಹ ಸ್ವಚ್ಛವಾಗುತ್ತದೆ.

LEAVE A REPLY

Please enter your comment!
Please enter your name here