ಇತ್ತೀಚಿನ ದಿನಗಳಲ್ಲಿ ಮಂಡಿನೋವು, ಬೆನ್ನು ನೋವು ಅಥವಾ ಕೀಲುನೋವು ವಯಸ್ಸಾದವರಲ್ಲಿ ಮಾತ್ರವಲ್ಲದೆ ಮಧ್ಯ ಪ್ರಾಯದವರಿಗೆ ಕಾಡಲು ಶುರು ಮಾಡಿದೆ, ಇಂತಹ ಸಮಸ್ಯೆಗಳಿಂದ ವಿಪರೀತವಾದ ನೋವನ್ನು ಅನುಭವಿಸುತ್ತಿದ್ದಾರೆ ಅರವತ್ತು ವರ್ಷದ ಮೇಲ್ಪಟ್ಟವರಿಗೆ ಇಂತಹ ಸಮಸ್ಯೆಗಳು ಎಂದೆಲ್ಲ ಬರುತ್ತಿತ್ತು ಆದರೆ ಈಗ ಬಲು ಬೇಗನೆ ಈ ಬೇನೆಗಳು ಮನುಷ್ಯನನ್ನು ಆವರಿಸುತ್ತಿದೆ, ಈ ಸಮಸ್ಯೆಗಳು ಒಮ್ಮೆ ಬಂದರೆ ಸಾಮಾನ್ಯವಾಗಿ ನಡೆಯುವುದು ಕಷ್ಟವಾಗಿಬಿಡುತ್ತದೆ ಇದೇ ಕಾರಣಕ್ಕಾಗಿ ಹಲವು ರೀತಿಯ ಔಷಧಿಗಳ ಬಳಕೆ ಮಾಡಿದರು ಆ ಕ್ಷಣದಲ್ಲಿ ಮಾತ್ರ ನೋವು ಕಡಿಮೆಯಾಗುತ್ತದೆ ಹೊರತು ತದನಂತರ ಮತ್ತೆ ಆ ನೋವು ಕಾಣಿಸಿಕೊಳ್ಳುತ್ತದೆ ಎಂದು ಹಲವರು ಹೇಳುತ್ತಾರೆ, ಆದರೆ ಇಂದು ನಾವು ನಿಮಗೆ ತಿಳಿಸುವ ಈ ಪಾನೀಯವನ್ನು ಮನೆಯಲ್ಲಿ ತಯಾರಿಸಿ ಕುಡಿದರೆ ಸಾಕು ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದು.
ಸೊಂಟ ನೋವು, ಮಂಡಿ ನೋವು, ಕೀಲುನೋವು ಈ ರೀತಿಯ ಸಮಸ್ಯೆಗಳಿಗೆ ಇಂದು ತಿಳಿಸುವ ಮನೆಮದ್ದನ್ನು ಒಮ್ಮೆ ತಯಾರಿಸಿ ಹಲವು ದಿನಗಳ ಬಳಕೆ ಮಾಡಬಹುದು, ಈ ಮನೆಮದ್ದನ್ನು ತಯಾರಿಸಲು ಬೇಕಾದ ಬಹುಮುಖ್ಯವಾದ ಪದಾರ್ಥಗಳು ಕಾಳು ಮೆಣಸು, ಜೀರಿಗೆ ಮತ್ತು ಮೆಂತ್ಯಕಾಳು.
ಮಾಡುವ ವಿಧಾನ : ಮೊದಲು ಒಂದು ಮಿಕ್ಸಿ ಜಾಡ್ ನಲ್ಲಿ ಎರಡು ಚಮಚ ಮೆಂತ್ಯ ಕಾಳು, ಒಂದು ಚಮಚ ಜೀರಿಗೆ, ಕೊನೆಯದಾಗಿ ಅರ್ಧಚಮಚ ಕಾಳುಮೆಣಸು ಬೆರೆಸಿ ಆದಷ್ಟು ನುಣ್ಣಗಾಗುವಂತೆ ರುಬ್ಬಿಕೊಳ್ಳಿ, ನಂತರ 1 ಗ್ಲಾಸ್ ನಲ್ಲಿ ನೀರು ತುಂಬಿಕೊಂಡು ಅದರಲ್ಲಿ ಮುಕ್ಕಾಲು ಚಮಚ ಈ ಪುಡಿಯನ್ನು ಮಿಶ್ರಣ ಮಾಡಿ ಅದನ್ನು ಕುಡಿಯಬೇಕು.
ಈ ಮಿಶ್ರಣದ ನೀರು ಕುಡಿಯಲು ಸ್ವಲ್ಪ ಕಹಿ ಇರುತ್ತದೆ ಆದಕಾರಣ ನಿಮಗೆ ಬೇಕಾದರೆ ಜೇನುತುಪ್ಪ ಅಥವಾ ಕಲ್ಲು ಸಕ್ಕರೆಯನ್ನು ಬೆರೆಸಿ ಕುಡಿಯಬಹುದು ಆದರೆ ಯಾವುದೇ ಕಾರಣಕ್ಕೂ ಸಕ್ಕರೆಯನ್ನು ಮಿಶ್ರ ಮಾಡಿ ಕುಡಿಯಬೇಡಿ, ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ತಪ್ಪದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಒಂದು ಒಳ್ಳೆಯ ವಿಷಯವೇ.