ನಿಮ್ಮ ಕಿವಿಗಳನ್ನು ಮಸಾಜ್ ಮಾಡುವುದರಿಂದ ಸಿಗುವ ಅದ್ಭುತ ಆರೋಗ್ಯ ಲಾಭಗಳ ಬಗ್ಗೆ ಒಮ್ಮೆ ತಿಳಿಯಿರಿ.

0
2194

ದೇಹದ ಯಾವುದೇ ಮಸಲ್ಸ್ ಭಾಗದಲ್ಲಿ ನೋವು ಕಾಣಿಸಿಕೊಂಡಾಗ ನಾವು ಅಲ್ಲಿ ಮಸಾಜ್ ಮಾಡುತ್ತೇವೆ ಕಾರಣ ಈ ರೀತಿ ಸ್ವಲ್ಪ ಸಮಯ ಮಸಾಜ್ ಮಾಡುವುದರಿಂದ ಆ ಭಾಗದಲ್ಲಿ ರಕ್ತ ಸಂಚಾರ ಹೆಚ್ಚಾಗಿ ಉರಿಯೂತ ಕಡಿಮೆಯಾಗಿ ನೋವು ನಿವಾರಣೆಯಾಗುತ್ತದೆ, ಇದೇ ರೀತಿ ಕಿವಿಯ ಮಸಾಜ್ ಮಾಡುವುದರಿಂದ ದೇಹಕ್ಕೆ ಸಿಗುವ ಹಲವು ಬಗೆಯ ಲಾಭಗಳ ಬಗ್ಗೆ ಇಂದು ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಕಿವಿಯ ಮಸಾಜ್ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ, ಮಾನಸಿಕ ಒತ್ತಡವು ದೈನಂದಿನ ಜೀವನದ ಒಂದು ಭಾಗವಾಗಿ ಉಳಿದುಬಿಟ್ಟಿದೆ ಇದೇ ಕಾರಣಕ್ಕಾಗಿಯೇ ಮನಸ್ಸು ವಿಚಲಿತವಾಗಿ ಹಲವು ಆತಂಕ ಮತ್ತು ಒತ್ತಡಗಳು ಪ್ರತಿದಿನ ಇದ್ದೇ ಇರುತ್ತದೆ ಕಿವಿಯ ಮಸಾಜ್ ಮಾಡುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು, ಅಷ್ಟೇ ಅಲ್ಲದೆ ದೇಹದಲ್ಲಿನ ಆಂತರಿಕ ಗಡಿಯಾರ ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ, ಮೆದುಳಿಗೆ ತಲುಪಿರುವ ನರಗಳು ಸಕ್ರಿಯವಾಗಿ ಕೆಲಸ ಮಾಡಲು ನೆರವಾಗುತ್ತದೆ, ಹಾಗಾಗಿ ಕಿವಿಯ ಮಸಾಜ್ ಅನ್ನು ನೀವು ಯಾವ ಸ್ಥಳದಲ್ಲಿ ಹಾಗೂ ಯಾವ ಸಂದರ್ಭದಲ್ಲಿ ಬೇಕಾದರೂ ಮಾಡಿಕೊಳ್ಳಬಹುದು.

ವೈದ್ಯಕೀಯ ಭಾಷೆಯಲ್ಲಿ ಕಿವಿಯ ಮಸಾಜ್ ಅನ್ನು ಆರಿಕ್ಯುಲೋಥೆರಪಿ ಎಂದು ಕೂಡ ಕರೆಯಲಾಗುತ್ತದೆ, ಥೆರಪಿ ಮುಖಾಂತರವೇ ಕಿವಿಯಲ್ಲಿರುವ ಕೆಲವೊಂದು ಬಿಂದುಗಳು ಜಾಗೃತವಾಗುತ್ತದೆ, ಹಾಗೂ ಇದರಿಂದ ದೈಹಿಕ ಕಾಯಿಲೆ ಮತ್ತು ಮಾನಸಿಕ ಸ್ಥಿರತೆಯನ್ನು ದೂರ ಮಾಡಬಹುದು.

ದೇಹದ ಮಾಂಸಖಂಡಗಳಲ್ಲಿ ನೋವು ಕಾಣಿಸಿದರೆ ಕಿವಿಯ ಮಸಾಜ್ ಮಾಡುವ ಮೂಲಕ ಮಾಂಸಖಂಡಗಳ ನೋವನ್ನು ಕಡಿಮೆ ಮಾಡಿಕೊಳ್ಳಬಹುದು, ಕಿವಿಯನ್ನು ಒಮ್ಮೆ ಎಳೆದು ಉಜ್ಜಿಕೊಳ್ಳುವುದರಿಂದ ದೇಹದಲ್ಲಿ ರಕ್ತಸಂಚಾರ ಉತ್ತಮವಾಗುತ್ತದೆ ಹಾಗೂ ನರಗಳಿಗೆ ಉತ್ತೇಜನ ನೀಡುತ್ತದೆ, ಮುಖ್ಯವಾಗಿ ದೇಹದಲ್ಲಿ ಸಂತೋಷದ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ನೆರವಾಗುತ್ತದೆ, ತಲೆನೋವು ಮತ್ತು ಮೈಗ್ರೇನ್ ಸಹ ಇದರಿಂದ ನಿವಾರಣೆಯಾಗುತ್ತದೆ, ತೂಕ ಇಳಿಸಲು ಇದು ಸಹಕಾರಿ ಎಂದು ಹೇಳಲಾಗಿದ್ದು ನಿದ್ರಾಹೀನತೆ ಸಮಸ್ಯೆಯನ್ನು ದೂರ ಮಾಡಿ ದೇಹದಲ್ಲಿನ ಶಕ್ತಿಯ ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

LEAVE A REPLY

Please enter your comment!
Please enter your name here