ಒಂದೇ ಸಿನಿಮಾದಿಂದ ಇಷ್ಟೊಂದು ಸಂಭಾವನೆ ಹೆಚ್ಚಿಸಿಕೊಂಡು ಬಿಟ್ಟರಲ್ಲ ನಟಿ ಪೂಜಾ ಹೆಗಡೆ

0
2112

ಮೂಲತಹ ಕನ್ನಡದವರಾದ ನಟಿ ಪೂಜಾ ಹೆಗಡೆ ಪ್ರಸ್ತುತ ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ, ಅದರಲ್ಲೂ ತೆಲುಗು ಚಿತ್ರರಂಗದಲ್ಲಿ ಪೂಜಾ ಅವರ ಅದೃಷ್ಟ ನಿಜವಾಗಿಯೂ ಚೆನ್ನಾಗಿದೆ, ಮೊಟ್ಟಮೊದಲ ಬಾರಿಗೆ ಅಲ್ಲು ಅರ್ಜುನ್ ಅಭಿನಯದ ದುವ್ವಾಡ ಜಗನ್ನಾಥಂ ಎನ್ನುವ ಚಿತ್ರದ ಮೂಲಕ ಅವಕಾಶ ಗಿಟ್ಟಿಸಿಕೊಂಡು ಪೂಜಾ ಈಗ ಬಹುತೇಕ ದೊಡ್ಡ ನಟರ ಸಿನಿಮಾಗಳಲ್ಲಿ ಅವಕಾಶ ಪಡೆದು ಮಿಂಚುತ್ತಿದ್ದಾರೆ.

ನಟಿ ಪೂಜಾ ಹೆಗಡೆ ಇದ್ದಕ್ಕಿದ್ದಹಾಗೆ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಈಗ ಹರಿದಾಡುತ್ತಿದ್ದು ಅಲ್ಲು ಅರ್ಜುನ್ ಜೊತೆ ಅಭಿನಯಿಸಿದ ಅಲಾ ವೈಕುಂಠಪುರಮಲೋ ಚಿತ್ರದ ನಂತರ ಇವರ ಸಂಭಾವನೆ ಅತಿ ಹೆಚ್ಚಾಗಿದ್ದು ಆದರೂ ಇವರಿಗೆ ಹಲವು ಆಫರ್ಗಳು ಬರುತ್ತಲೇ ಇದೆ, ಸತ್ಯ ಪ್ರಭಾಸ್ ನಟನೆಯ ರಾಧಾಕೃಷ್ಣ ಸಿನಿಮಾದಲ್ಲಿ ನಟಿಸುತ್ತಿದ್ದು ಇದನ್ನು ಬಿಟ್ಟರೆ ನಾಗಾರ್ಜುನ ಅವರ ಕೊನೆಯ ಮಗ ಅಕಿಲ್ ಜೊತೆಗೆ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂಬ ಚಿತ್ರದಲ್ಲೂ ನಟಿಸಲಿದ್ದಾರೆ.

ಪೂಜಾ ಹೆಗಡೆ ತಮ್ಮ ಚಿತ್ರ ದುವ್ವಾಡ ಜಗನ್ನಾಥಂ ಹಾಗೂ ಮಹೆಂಜೋದಾರೋ ಬಳಿಕ ತಮ್ಮ ಸಂಭಾವನೆಯನ್ನು ಏರಿಸಿಕೊಂಡು ಸಾಕ್ಷ್ಯಂ ಸಿನಿಮಾಗೆ 1.40 ಕೋಟಿ ಸಂಭಾವನೆ ಪಡೆದಿದ್ದರು, ಆನಂತರ ಜೂನಿಯರ್ ಎನ್ಟಿಆರ್ ಜೊತೆ ಹಾಗೂ ಮಹೇಶ್ ಬಾಬು ಜೊತೆಯಲ್ಲಿ ಅಭಿನಯ ಮಾಡಿ ಸೈ ಎನಿಸಿಕೊಂಡರು ಆದರೆ ಈಗ ಅವರ ಸಂಭಾವನೆ ಎರಡು ಕೋಟಿ ಇದೆ ಎಂದು ಹೇಳಲಾಗುತ್ತಿದೆ, ಆದರೂ ಇವರಿಗೆ ತೆಲುಗು ಹಾಗೂ ಹಿಂದಿ ಚಿತ್ರರಂಗದಿಂದ ಅತಿ ಹೆಚ್ಚು ಆಫರ್ ಗಳು ಬರುತ್ತಿವೆ.

LEAVE A REPLY

Please enter your comment!
Please enter your name here