ಸಕಲ ಸರ್ಪ ದೋಷ ನಿವಾರಣೆಗೆ ಇರುವ ಶಕ್ತಿಶಾಲಿ ಏಕೈಕ ಗರುಡ ದೇವಾಲಯ ಎಲ್ಲಿದೆ ನೋಡಿ

0
1493

ಇಡಿ ವಿಶ್ವದಲ್ಲೇ ಕೆಲವೇ ಕೆಲವು ಗರುಡ ದೇವಸ್ಥಾನಗಳಲ್ಲಿ ಈ ದೇವಸ್ಥಾನ ಮುಂಚೂಣಿಯಲ್ಲಿದೆ ಮತ್ತು ಇಲ್ಲಿ ಗರುಡನ ದರ್ಶನ ಮಾಡಿದರೆ ಸಾಕು ಅದೃಷ್ಟ ಕುಲಾಹಿಸುತ್ತೆ ಅನ್ನುವ ಮಾತಿದೆ ಸಂತಾನ ಭಾಗ್ಯ, ಆರೋಗ್ಯ ಸಮಸ್ಯೆ, ಆರ್ಥಿಕ ಸಮಸ್ಯೆ ಹಾಗೆ ಇಡಿ ವೈದ್ಯಲೋಕಕ್ಕೆ ಸವಾಲಾಗಿರುವ ಈ ದೇವರು ನಂಬಿ ಬಂದ ಭಕ್ತರ ಕೈ ಎಂದಿಗೂ ಬಿಡುವುದಿಲ್ಲವಂತೆ ಹಾಗೆ ಈ ಸ್ಥಳಕ್ಕೆ ಒಮ್ಮೆ ಬೇಟಿ ನೀಡಿದರೆ ಸಾಕು 8 ರೀತಿಯ ಸರ್ಪ ದೋಷಗಳು ಪರಿಹಾರವಗುತ್ತವೆಯಂತೆ.

ಹಲವು ಪವಾಡಗಳ ಮೂಲಕವೇ ಜಗತ್ ಪ್ರಸಿದ್ದವಾಗಿರುವ ಈ ಕ್ಷೇತ್ರಕ್ಕೆ ಒಮ್ಮೆ ಬಂದರೆ ಸಾಕು ನಿಮಗೆ ಋಣಾತ್ಮಕ ಶಕ್ತಿಯ ಅರಿವಾಗುತ್ತದೆ. ಇದೆ ದೇವಸ್ಥಾನದಲ್ಲಿ ಆಂಜನೇಯ ಸ್ವಾಮಿಯ ಮೂರ್ತಿ ಇದ್ದು ಅವರ ದರ್ಶನವು ಪಡೆಯಬಹುದಾಗಿದೆ ಹಾಗೆ ಮತ್ತೊಂದು ವಿಶೇಷವೆಂದರೆ ಮೂಲ ವಿಗ್ರಹದಲ್ಲಿ ಗರುಡನ ಒಂದು ಭುಜದ ಮೇಲೆ ವಿಷ್ಣು ಮತ್ತು ಇನ್ನೊಂದು ಭುಜದ ಮೇಲೆ ಲಕ್ಷ್ಮಿ ಇರುವುದು ಕಾಣಬಹುದು ಹಾಗಾಗಿ ಗರುಡ ಸ್ವಾಮಿಯೊಂದಿಗೆ ಭಗವಾನ್ ವಿಷ್ಣುವಿನ ಆಶಿರ್ವಾದವೂ ಪಡೆಯಬಹುದಾಗಿದೆ.

ಪುರಾಣಗಳ ಪ್ರಕಾರ ದ್ವಾಪರ ಯುಗದಲ್ಲಿ, ಅರ್ಜುನ ಬೇಟೆಗಾಗಿ ಕಾಡಿಗೆ ಹೋಗಿದ್ದಾಗ ಉತ್ಸಾಹದಲ್ಲಿ ಬಿಟ್ಟ ಉಗ್ರ ಬಾಣಗಳು ಕಾಡಿನಲ್ಲಿ ಬೆಂಕಿಯನ್ನು ಸೃಷ್ಟಿಸೋದಲ್ಲದೆ ಆ ಅಗ್ನಿಯಲ್ಲಿ ಹಲವಾರು ಸರ್ಪಗಳು ಸಹ ಕೊಲ್ಲಲ್ಪದುತ್ತದೆ. ಅರ್ಜುನನು ಸತ್ತ ಹಾವುಗಳಿಂದ ಶಾಪಗ್ರಸ್ತನಾಗಿರುತ್ತಾನೆ (ಅವನು ಸರ್ಪ ದೋಷವನ್ನು ಪಡೆಯುತ್ತಾನೆ). ಈ ಶಾಪದಿಂದ ಬಿಡುಗಡೆ ಹೊಂದಲು, ಪಂಡಿತರು ಅರ್ಜುನನಿಗೆ ಗರುಡನಿಗೆ ಪ್ರಾರ್ಥಿಸಲು ಸಲಹೆ ನೀಡುತ್ತಾರೆ. ಆದ್ದರಿಂದ, ಅರ್ಜುನನು ಕೋಲದೇವಿ ಗರುಡ ದೇವಸ್ಥಾನದಲ್ಲಿ ಗರುಡ ದೇವತೆಯನ್ನು ಸ್ಥಾಪಿಸಿದನೆಂದು ಸ್ಥಳೀಯ ನಂಬಿಕೆ.

ಮತ್ತೊಂದು ಜನಪ್ರಿಯ ದಂತಕಥೆಯ ಪ್ರಕಾರ ರಾಮಾಯಣದಲ್ಲಿ ರಾವಣನು ಸೀತೆಯನ್ನು ಅಪಹರಿಸಿ ಪುಷ್ಪಕವಿಮಾನದಲ್ಲಿ ಕರೆದುಕೊಂಡು ಹೋಗುವಾಗ, ಜಟಾಯು (ಗರುಡ) ಸೀತೆಯನ್ನು ರಕ್ಷಿಸಲು ಬರುತ್ತದೆ. ದುರದೃಷ್ಟವಶಾತ್, ಜಟಾಯು ರಾವಣನ ಕೈಯಿಂದ ಕೊಲ್ಲಲ್ಪತ್ತಿತಂತೆ. ಈ ಸ್ಥಳದಲ್ಲಿ ಜಟಾಯು ಕುಸಿಯಿತು ಎಂದು ನಂಬಲಾಗಿದೆ, ಆದ್ದರಿಂದ ಕೋಲದೇವಿ ಎಂಬ ಹೆಸರು ಬಂದಿದೆ. ಕನ್ನಡದಲ್ಲಿ, ಕೊ’ಲ್ಲು ಎಂದರೆ ಕೊ’ಲ್ಲುವುದು. ಜಟಾಯುವಿನ ಪ್ರಯತ್ನಗಳಿಂದ ಸಂತೋಷಗೊಂಡ ವಿಷ್ಣು, ಜಟಾಯುವನ್ನು ಆಶೀರ್ವದಿಸುತ್ತಾನೆ ಮತ್ತು ಆದ್ದರಿಂದ ಗರುಡ ಮತ್ತೆ ಈ ಸ್ಥಳಕ್ಕೆ ದೇವರಾಗಿ ಬರುತ್ತದೆ. ಈ ಐತಿಹಾಸಿಕ ಪುಣ್ಯ ಸ್ಥಳವಿರುವುದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊಲದೇವಿ ಎಂಬ ಗ್ರಾಮದಲ್ಲಿ.

LEAVE A REPLY

Please enter your comment!
Please enter your name here