ಅಂಗೈ ಅಷ್ಟು ಸಣ್ಣದಾದ ರಾಮಮಂದಿರ ನಿರ್ಮಾಣ ಮಾಡಿದ ಹೆಮ್ಮೆಯ ಕನ್ನಡಿಗ! ಹೇಗಿದೆ ನೋಡಿ ಈ ಪುಟ್ಟ ರಾಮಮಂದಿರ

0
992

ಆಗಸ್ಟ್ 15 ನೇ ತಾರೀಕು ಅಯೋಧ್ಯೆಯಲ್ಲಿ ಪ್ರಸಿದ್ಧ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪುಣ್ಯಭೂಮಿಯಲ್ಲಿ ಪೂಜೆ ನಡೆದಿದೆ ಇದರಿಂದ ಇಡೀ ದೇಶವೇ ಶ್ರೀರಾಮನ ರಚನೆಯಲ್ಲಿ ಮುಳುಗಿದೆ ಆದರೆ ಇದೇ ಸಂದರ್ಭದಲ್ಲಿ ಗಡಿನಾಡು ಕಾಸರಗೋಡಿನ ಮಂಜೇಶ್ವರದ ನಿವಾಸಿಯಾದ ಮೌನೇಶ ಆಚಾರ್ಯ ಅವರು ತಮ್ಮ ಅಂಗೈ ಅಗಲದ ಹಾಗೂ ತಮ್ಮದೇ ಕಲ್ಪನೆಯ ಶ್ರೀರಾಮ ಮಂದಿರವನ್ನು ನಿರ್ಮಿಸಿದ್ದಾರೆ.

ಹೌದು ಈ ಸಣ್ಣದಾದ ರಾಮಮಂದಿರವನ್ನು ನಿರ್ಮಿಸಲು ಅವರು ಬಳಸಿರುವುದು ಕೇವಲ ಊದು ಬತ್ತಿಯಾ ಕಡ್ಡಿಗಳನ್ನು, ಇವುಗಳನ್ನು ಬಳಸಿ ಶ್ರೀರಾಮಮಂದಿರದ ಕಲ್ಪನೆಯ ಒಂದು ರೂಪ ನೀಡಿ ವಿಸ್ಮಯ ಸೃಷ್ಟಿಸಿದ್ದಾರೆ, ಈ ಕಾರ್ಯವನ್ನೂ ಮೌನೇಶ್ ಆಚಾರ್ಯ ಅವರು ರಾಮಮಂದಿರ ನಿರ್ಮಾಣ ಮಾಡಲು ಕೋರ್ಟ್ ಅನುಮತಿ ನೀಡಿದ ದಿನದಿಂದ ಶುರು ಮಾಡಿದ್ದರು ಎನ್ನಲಾಗಿದೆ.

ಮೌನೇಶ್ ಆಚಾರ್ಯ ಅವರು ಮೂಲತಹ ಕರಕುಶಲಕರ್ಮಿ ಆಗಿದ್ದು ಅಷ್ಟೇ ಅಲ್ಲದೆ ಹಲವಾರು ಸಾಹಿತ್ಯಗಳನ್ನು ರಚನೆ ಮಾಡಿದ್ದಾರೆ ತಮ್ಮದೇ ಕ್ಷೇತ್ರದಲ್ಲಿ ಯುವ ಕವಿಯಾಗಿ ಗುರುತಿಸಿಕೊಂಡಿದ್ದಾರೆ, ಶ್ರೀರಾಮನ ಪರಮ ಭಕ್ತರಾದ ಇವರು ತಮ್ಮ ಕುಶಲತೆಯಿಂದ ಊದುಬತ್ತಿಗಳು ಕಡ್ಡಿಯನ್ನು ಬಳಸಿ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡುವ ಕೆಲಸ ಮಾಡಿದ್ದಾರೆ, ಹಾಗೂ ಈ ಕೆಲಸ ಅಯೋಧ್ಯೆ ಎಲ್ಲಿ ಶ್ರೀರಾಮಮಂದಿರದ ಶಿಲಾನ್ಯಾಸದ ಸಂದರ್ಭಕ್ಕೆ ಸರಿಯಾಗಿ ಮುಗಿದಿದೆ ಎಂದು ತಿಳಿಸಿದರು.

ಈ ಸಣ್ಣದಾದ ರಾಮ ಮಂದಿರವನ್ನು ನಿರ್ಮಾಣ ಮಾಡಲು ಸರಿಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಊದುಬತ್ತಿ ಗಳನ್ನು ಬಳಸಲಾಗಿದೆ, 5 ಇಂಚು ಎತ್ತರ ಇರುವ ಈ ಸುಂದರ ಮಂದಿರ, 4 ಇಂಚು ಎತ್ತರದ ಗೋಪುರಗಳನ್ನು ಹೊಂದಿದೆ, ಪ್ರತಿದಿನ ದೇವರಿಗೆ ಊದುಬತ್ತಿ ಹಚ್ಚಿ ಬೆಳಗಿನ ಕಡ್ಡಿಗಳನ್ನು ಸಂಗ್ರಹಿಸಿ ಈ ರೀತಿಯ ವಿಶಿಷ್ಟ ಮಂದಿರವನ್ನು ತಯಾರು ಮಾಡಿದ್ದಾರೆ.

LEAVE A REPLY

Please enter your comment!
Please enter your name here