ಸೈಕಲ್ ಪ್ರಿಯರಿಗೆ ಗುಡ್ ನ್ಯೂಸ್, ಇನ್ನು ಮುಂದೆ ಬಸ್ನಲ್ಲಿ ಸೈಕಲ್ ತೆಗೆದುಕೊಂಡು ಹೋಗಬಹುದು.

0
1502

ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣ ಮಾಡುವವರು ಬಸ್ ನಿಲ್ದಾಣದವರೆಗೂ ಅಥವಾ ಬಸ್ ಬರುವ ಅಥವಾ ನಿಲ್ಲುವ ಜಾಗದವರೆಗೂ ನಡೆದುಕೊಂಡು ಹೋಗಬೇಕಿತ್ತು ಅಥವಾ ಮನೆಯವರ ಬಳಿ ಬೇರೆ ವಾಹದನದಲ್ಲಿ ಡ್ರಾಪ್ ತೆಗೆದುಕೊಳ್ಳಬೇಕಿತ್ತು ಇಲ್ಲ ಆಟೋರಿಕ್ಷಾಗಳನ್ನು ಹತ್ತಬೇಕಿತ್ತು ಆದರೆ ಇನ್ನು ಮುಂದೆ ಆ ರೀತಿಯ ಕಷ್ಟ ಇರುವುದಿಲ್ಲ ಕಾರಣ ನೀವು ಸೈಕಲ್ನಲ್ಲಿ ಬಸ್ ನಿಲ್ದಾಣಕ್ಕೆ ಹೋದರೆ ಅದೇ ಬಸ್ನಲ್ಲಿ ನಿಮ್ಮ ಸೈಕಲನ್ನು ಕೂಡ ತೆಗೆದುಕೊಂಡು ಹೋಗಬಹುದು, ಈ ರೀತಿಯ ಹೊಸ ಆಲೋಚನೆ ಬೆಂಗಳೂರಿನ ಬಿಎಂಟಿಸಿ ಬಸ್ ಗಳ ಮೂಲಕ ಪ್ರಾರಂಭಿಸಲಾಗಿದೆ.

ಅಂದರೆ ಸೈಕಲ್ ಮುಖಾಂತರವೇ ಬಸ್ ನಿಲ್ದಾಣಕ್ಕೆ ಬಂದು ಮತ್ತು ನಿಮ್ಮ ಸೈಕಲ್ ನನ್ನು ಬಸ್ ಮುಖಾಂತರ ನೀವು ಹೋಗಬೇಕಾದ ಜಾಗಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ ಮತ್ತೆ ನೀವು ಸೈಕಲನ್ನು ತುಳಿದುಕೊಂಡು ನಿಮ್ಮ ಮನೆ ಅಥವಾ ಆಫೀಸ್ ಸೇರುವ ಹೊಸ ಉಪಾಯ, ಇದಕ್ಕಾಗಿ ಈಗಾಗಲೇ ಒಟ್ಟು 100 ಬಸ್ಸುಗಳಿಗೆ ಸೈಕಲ್ ಜೋಡಿಸುವ ರಾಕ್ ಗಳನ್ನು ವ್ಯವಸ್ಥೆ ಮಾಡಲಾಗಿದೆ.

ಬಿಎಂಟಿಸಿ ಬಸ್ಸುಗಳ ಮುಂದೆ ವಿಶೇಷ ಎರಡು ಸೈಕಲ್ ಗಳನ್ನು ಜೋಡಿಸಬಹುದಾದ ವ್ಯವಸ್ಥೆ ಮಾಡಲಾಗಿದ್ದು ಇದರಲ್ಲಿ ನಿಮ್ಮ ಸೈಕಲ್ ನನ್ನು ಬಿಟ್ಟು ನೀವು ಮುಖಾಂತರ ಪ್ರಯಾಣ ಮಾಡಬಹುದಾಗಿದೆ, ಈ ಪ್ರಯತ್ನ ಯಶಸ್ವಿಯಾದರೆ ಮುಂದೆ ಬೆಂಗಳೂರಿನ ಎಲ್ಲಾ ಬಿಎಂಟಿಸಿ ಬಸ್ ಗಳಿಗೂ ಈ ವ್ಯವಸ್ಥೆ ಮಾಡಲಾಗುವುದು, ಈ ಮೂಲಕ ದೇಹದ ಆರೋಗ್ಯವನ್ನು ಕಾಪಾಡಿಕೊಂಡು ಅದರ ಜೊತೆಯಲ್ಲಿ ಪರಿಸರದ ಮಾಲಿನ್ಯವನ್ನು ಕೂಡ ತಡೆಗಟ್ಟಬಹುದು ಈ ವಿನೂತನ ಪ್ರಯೋಗದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here