ಕಣ್ಣು ಕಾಣಿಸದ ವಿದ್ಯಾರ್ಥಿನಿಗೆ SSLC ಯಲ್ಲಿ ಬಂದಿದ್ದು 100 ಅಂಕ ಆದರೆ ಕೊಟ್ಟಿದ್ದು 2 ಅಂಕ! ಮುಂದೆ ಏನಾಯ್ತು ಓದಿ

0
1376

ಆ ವಿದ್ಯಾರ್ಥಿಯ ಹೆಸರು ಸುಪ್ರಿಯಾ ಆಕೆಗೆ ಬಾಗಶಹ ಅಂಧತ್ವ ಕಾಡುತ್ತಿದೆ, ಆದರೂ ತಾನು ಚೆನ್ನಾಗಿ ಓದಬೇಕು ಎಂಬ ಹುಚ್ಚು ಅದೇ ರೀತಿ ಓದಿನಲ್ಲೂ ಆಕೆ ಮುಂದೆ, ಆಕೆ ಓದುತ್ತಿದ್ದದ್ದು ಹರಿಯಾಣದ ಒಂದು ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಸುಪ್ರಿಯ ಪರೀಕ್ಷೆಯನ್ನು ಸಹ ಬರೆದಿದ್ದಳು, ಎಲ್ಲಾ ವಿಷಯಗಳಲ್ಲಿ ಶೇಕಡ ತೊಂಬತ್ತಕ್ಕೂ ಹೆಚ್ಚಿನ ಅಂಕಗಳನ್ನು ಪಡೆದ ಈಕೆ ಗಣಿತದಲ್ಲಿ ಮಾತ್ರ ಕೇವಲ ಎರಡು ಅಂಕಗಳನ್ನು ಪಡೆದು ಫೇಲ್ ಆಗಿದ್ದಾರೆ.

ಇದನ್ನು ನೋಡಿದ ವಿದ್ಯಾರ್ಥಿನಿ ಹಾಗೂ ಆಕೆಯ ತಂದೆ ಇಬ್ಬರಿಗೂ ನಂಬಲು ಸಾಧ್ಯವಾಗಲಿಲ್ಲ, ಸುಪ್ರಿಯ ಅವರ ತಂದೆ ಕೂಡ ಗಣಿತದ ಶಿಕ್ಷಕರಾಗಿ ಕೆಲಸ ಮಾಡುತ್ತಾರೆ ನನ್ನ ಮಗಳು ಎಲ್ಲಾ ವಿಷಯದಲ್ಲೂ ಉನ್ನತ ಅಂಕವನ್ನು ಪಡೆದು ಗಣಿತದಲ್ಲಿ ಯಾವುದೇ ಕಾರಣಕ್ಕೂ ಕಡಿಮೆ ಅಂಕ ಪಡೆಯಲು ಸಾಧ್ಯವಿಲ್ಲ ಎಂದು 5000 ರೂಪಾಯಿ ಖರ್ಚು ಮಾಡಿ ಗಣಿತ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದರು ಆಗಲೇ ಮೌಲ್ಯಮಾಪಕರ ಲೋಪ ಗೊತ್ತಾಗಿದ್ದು.

ಸಾಮಾನ್ಯವಾಗಿ ಅಂಧ ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳ ಮೇಲೆ ತಾವು ಅಂದರು ಎಂದು ನಮೂದಿಸಿರುತ್ತಾರೆ, ಇಂತಹ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡುವಾಗ ಅದನ್ನು ಆಧಾರವಾಗಿಟ್ಟುಕೊಂಡು ಮೌಲ್ಯಮಾಪನ ಮಾಡಬೇಕಾಗಿ ಬರುತ್ತದೆ ಆದರೆ ಅದನ್ನು ಗಮನಿಸದ ಮೌಲ್ಯಮಾಪಕರು ಈಕೆಗೆ ಎರಡು ಅಂಕ ನೀಡಿ ಫೇಲ್ ಮಾಡಿದ್ದರು ಆದರೆ ಮರುಮೌಲ್ಯಮಾಪನ ದಲ್ಲಿ ಈಕೆಗೆ ನೂರಕ್ಕೆ ನೂರು ಅಂಕ ನೀಡಿ ತೇರ್ಗಡೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here