ದೇಶದ ಆರ್ಥಿಕ ಸುಧಾರಣೆಗಾಗಿ ನರೇಂದ್ರ ಮೋದಿ ಅವರಿಗೆ 3 ಟಿಪ್ಸ್ ನೀಡಿದ ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್!

0
1825

ಕೊರೊನ ದಿಂದ ದೇಶದ ಆರ್ಥಿಕ ಸ್ಥಿತಿಗೆ ಬಹುದೊಡ್ಡ ಹೊಡೆತ ಬಿದ್ದಿದೆ, ಹಾಗು ಕೊರೊನ ಬರುವ ಮುಂಚೆಯೇ ದೇಶದದ ಆಟೋ ತಂತ್ರಜ್ಞಾನ, ಟೆಲಿಕಾಮ್, ಎನ್‍ಬಿಎಫ್‍ಸಿ ಅಂತಹ ವಲಯಗಳು ಆರ್ಥಿಕ ಸಂಕಷ್ಟದಲ್ಲಿ ಇತ್ತು, ಗಾಯದ ಮೇಲೆ ಬರೆ ಬಿದ್ದ ಹಾಗೆ ಈ ವೈರಾಣು ದೇಶವನ್ನು ಮತ್ತಷ್ಟು ಕಾಡುತ್ತಿದೆ ಇನ್ನೂ ಅನೇಕ ಆರ್ಥಿಕ ವಲಯಗಳಲ್ಲಿ ಚೇತರಿಕೆ ಕಂಡಿಲ್ಲ ಕಷ್ಟದ ಪರಿಸ್ಥಿತಿ ಎದುರಾಗಿದೆ, ದೇಶದಲ್ಲಿ ಅತಿ ಹೆಚ್ಚು ಜನರು ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ, ಕೇಂದ್ರ ಸರ್ಕಾರವು ಆರ್ಥಿಕ ಸುಧಾರಣೆಯ ದೃಷ್ಟಿಯಿಂದ ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುತ್ತಿದೆ ಹಾಗೂ ದೇಶದ ಆರ್ಥಿಕತೆಯ ಮಟ್ಟವನ್ನು ಸುಧಾರಣೆ ಮಾಡಲು ಇನ್ನು ಹಲವು ಯೋಜನೆಗಳನ್ನು ಪ್ರಕಟಮಾಡಿದೆ, ಅದರ ಜೊತೆಗೆ ಮಾಜಿ ಪ್ರಧಾನಿಗಳಾದ ಮನಮೋಹನ ಸಿಂಗ್ ಅವರು ಇನ್ನು ಮೂರು ಮಹತ್ವದ ಟಿಪ್ಸ್ಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಿದ್ದಾರೆ.

ಸೂತ್ರ 1 : ದೇಶದಲ್ಲಿರುವ ಜನರಿಗೆ ಸರ್ಕಾರ ಮೊದಲು ಆರ್ಥಿಕ ಭದ್ರತೆಯನ್ನು ಕೊಡಬೇಕು, ನಾಗರೀಕರ ಖಾತೆಗೆ ನೇರವಾಗಿ ನಗದು ವರ್ಗಾವಣೆ ಮಾಡಿ ಅವರ ಜೀವನೋಪಾಯಕ್ಕೆ ದಾರಿ ಮಾಡಿಕೊಡಬೇಕು ಹಾಗೂ ಜನರು ಹಣ ಖರ್ಚು ಮಾಡುವ ಸಾಮರ್ಥ್ಯವನ್ನು ಹೆಚ್ಚಿಸಬೇಕು ಈ ರೀತಿ ನೋಡಿಕೊಳ್ಳಬೇಕು.

ಸೂತ್ರ 2 : ಹೊಸ ವ್ಯವಹಾರಗಳಿಗೆ ಸರ್ಕಾರ ಕ್ರೆಡಿಟ್ ಗ್ಯಾರೆಂಟಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇದರ ಮೂಲಕ ನೆರವಾಗಬೇಕು, ಈ ರೀತಿ ಮಾಡುವುದರಿಂದ ಹೊಸ ವ್ಯವಹಾರಗಳು ಸೃಷ್ಟಿಯಾದರೆ ಅದರಿಂದ ಉದ್ಯೋಗ ಸೃಷ್ಟಿಯೂ ಆಗುತ್ತದೆ.

ಸೂತ್ರ 3 : ದೇಶದಲ್ಲಿ ದೀರ್ಘ ಸಮಯದ ವರೆಗೂ ಇರುವ ಆರ್ಥಿಕ ಸಮಸ್ಯೆ ಇದು ಎಂದು ಹೇಳಿರುವ ಮನಮೋಹನ್ ಸಿಂಗ್ ಅವರು ಸಾಂಸ್ಥಿಕ ಸ್ವಾಯತ್ತತೆಯ ಸಹಾಯ ಮಾಡಿ ಹಣಕಾಸಿನ ವಲಯಗಳನ್ನು ಸುಧಾರಣೆ ಮಾಡಬೇಕಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here