ವಿಶ್ವದಲ್ಲಿ ಅತಿ ದುಬಾರಿ ಬೆಲೆಯ ಮಾಸ್ಕ್ ಇದು! ಇದರ ಬೆಲೆ ಕೇಳಿದರೆ ತಲೆ ತಿರುಗುತ್ತದೆ

0
1434

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

ಕರೋನವೈರಸ್ ಪ್ರಪಂಚದ ಮಾನವಕುಲ ತಪ್ಪದೇ ಮಾಸ್ಕ್ ಹಾಕಿಕೊಂಡು ಬದುಕುವ ಹಾಗೆ ಮಾಡಿಬಿಟ್ಟಿದೆ, ಮೈಯ ಮೇಲಿರುವ ಬಟ್ಟೆಯ ರೀತಿಗೆ ಮುಖದ ಮೇಲಿರುವ ಮಾಸ್ಕ್ ಅತಿ ಪ್ರಾಮುಖ್ಯತೆ ಪಡೆದಿದೆ, ಆದ್ದರಿಂದ ಎಲ್ಲರೂ ತಪ್ಪದೇ ತಮ್ಮ ಆರೋಗ್ಯದ ದೃಷ್ಟಿಯಿಂದ ಮಾಸ್ಕನ್ನು ಬಳಕೆ ಮಾಡುತ್ತಿದ್ದಾರೆ, ಆದರೆ ಇನ್ನು ಕೆಲವು ವ್ಯಕ್ತಿಗಳು ತಮ್ಮ ಶ್ರೀಮಂತಿಕೆ ಗಳನ್ನು ಬಿಂಬಿಸಿಕೊಳ್ಳಲು ಮಾಸ್ಕನ್ನು ಬಳಕೆ ಮಾಡುತ್ತಿರುವುದು ನಿಜವಾಗಿಯೂ ಅಚ್ಚರಿ ಮೂಡಿಸಿದೆ.

ಸಾಮಾನ್ಯವಾಗಿ ಹತ್ತು ರೂಪಾಯಿಂದ ನೂರು ರೂಪಾಯಿಯವರೆಗೆ ಮಾಸ್ಕನ್ನು ನಾವು ಖರೀದಿ ಮಾಡಿ ಬಳಕೆ ಮಾಡುತ್ತೇವೆ ಅದಕ್ಕೂ ಹೆಚ್ಚು ಎಂದರೆ ಕಳೆದ ತಿಂಗಳು ಕೊಯಮತ್ತೂರಿನ ವ್ಯಕ್ತಿಯೊಬ್ಬ 2.75 ಲಕ್ಷದ ಬಂಗಾರದ ಮಾಸ್ಕ್ ಮಾಡಿಸಿಕೊಂಡಿದ್ದ, ಮತ್ತೊಬ್ಬ ವ್ಯಕ್ತಿ 15000 ಖರ್ಚುಮಾಡಿ ಬೆಳ್ಳಿಯ ಮಾಸ್ಕ್ ಮಾಡಿಸಿಕೊಂಡಿದ್ದ ಇದೆಲ್ಲಾ ಸಾವಿರ ಮತ್ತು ಲಕ್ಷದ ಲೆಕ್ಕದಲ್ಲಿ ಇದ್ದರೆ ಇನ್ನೊಬ್ಬ ವ್ಯಕ್ತಿ ಕೋಟಿ ಬೆಲೆಯ ಮಾಸ್ಕ್ ತಯಾರಿ ಮಾಡಲು ಹಾಗೂ ಪ್ರಪಂಚದ ಅತಿ ದುಬಾರಿಯಾದ ಮಾಸ್ ಆಗಿರಬೇಕು ಬೇಡಿಕೆ ಇಟ್ಟಿದ್ದಾನೆ.

ಹೌದು ಇಸ್ರೇಲ್ ದೇಶದ ಚಿನ್ನ ಮತ್ತು ವಜ್ರ ಹಳ್ಳಿ ವ್ಯಾಪಾರದ ಕಂಪನಿಯೊಂದು ಈ ಕುರಿತು ಮಾಹಿತಿಯೊಂದನ್ನು ನೀಡಿದ್ದಾರೆ, ಅಮೆರಿಕ ಮೂಲದ ಚೀನಾದ ಒಬ್ಬ ವ್ಯಕ್ತಿ ಜಗತ್ತಿನಲ್ಲಿ ಅತಿ ದುಬಾರಿಯಾದ ಮಾಸ್ಕ್ ಸಿದ್ಧಪಡಿಸಿ ನೀಡಬೇಕಾಗಿ ಬೇಡಿಕೆ ಇಟ್ಟಿದ್ದಾರೆ, ಅದಕ್ಕಾಗಿ 15 ಲಕ್ಷ ಡಾಲರ್ ವೆಚ್ಚದಲ್ಲಿ ಈ ಮಾಸ್ಕ್ ತಯಾರು ಮಾಡುತ್ತಿದ್ದೇವೆ ಅಂದರೆ ಭಾರತದ ರೂಪಾಯಿಯಲ್ಲಿ ಹೇಳಬೇಕಾದರೆ ಬರೋಬ್ಬರಿ ಹನ್ನೊಂದು ಕೋಟಿ ರೂಪಾಯಿ.

18 ಗ್ರಾಂ ಬಂಗಾರದಲ್ಲಿ ಸಿದ್ಧವಾಗಿರುವ ಈ ಫೇಸ್ ಮಾಸ್ಕ್ ನಲ್ಲಿ 3600 ಬಿಳಿ ಹಾಗೂ ಕಪ್ಪು ವಜ್ರಗಳನ್ನು ಸಹ ಬಳಕೆ ಮಾಡಲಾಗಿದೆಯಂತೆ ಇಸ್ರೇಲ್ ಮೂಲದ ಯುವೇಲ್ ಕಂಪನಿ ಇದನ್ನು ಮಾಡಿದ್ದು, ಇದರಲ್ಲೂ ಸಹ 99 ಫಿಲ್ಟರ್ ಅಳವಡಿಸಲಾಗಿದೆ, ಇಂದು ಅದೇ ಕಂಪನಿಯ ಮಾಲಿಕ ಇಸಾಕ್ ಲೇವಿ ಮಾಹಿತಿ ನೀಡಿದ್ದಾರೆ.

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here