ದೇವರ ಕೋಣೆಯಲ್ಲಿ ನೀವು ಮಾಡುವ ಈ ತಪ್ಪುಗಳಿಂದಲೇ ನಿಮಗೆ ಕಷ್ಟಗಳು ಬೆನ್ನು ಬಿಡದಂತೆ ಕಾಡುವುದು.

0
1438

ದೇವರಕೋಣೆಯಲ್ಲಿ ನಮ್ಮ ಇಷ್ಟದೇವರ, ಮೂಲದೇವರ ಮೂರ್ತಿಗಳನ್ನು ಹಾಗೆಯೇ ಚಿತ್ರ ಪಟಗಳನ್ನು ಇಟ್ಟುಕೊಂಡು ಪೂಜೆ ಮಾಡ್ತೀವಿ. ನಾವು ಯಾವುದೇ ಧಾರ್ಮಿಕ ದೇವಾಲಯಗಳಿಗೆ ಹೋದರೂ ಅಲ್ಲಿನ ನೆನಪಿಗಾಗಿ ಆ ದೇವರುಗಳ ಪಟಗಳನ್ನು ಖರೀದಿಸಿ ತರುತ್ತೇವೆ. ಆದರೆ ಅಪ್ಪಿ ತಪ್ಪಿಯೂ ಈ ಆರು ಮೂರ್ತಿಗಳನ್ನು ದೇವರ ಕೋಣೆಯಲ್ಲಿ ಇಡಬೇಡಿ. ಹಾಗೇನಾದರೂ ಇಟ್ಟಿದ್ದೇ ಆದರೆ ನಿಮ್ಮ ಜೀವನ ಮಾತ್ರ ನರಕವಾಗುತ್ತೆ.

ದೇವರ ಕೋಣೆಯಲ್ಲಿ ಮೂರ್ತಿಗಳನ್ನು ಪೂಜೆ ಮಾಡುವ ಉದ್ದೇಶ ಏನಪ್ಪಾ ಅಂತಂದ್ರೆ ಅಲ್ಲಿ ಏಕಾಗ್ರತೆಯಿಂದ, ಭಕ್ತಿ ಶ್ರದ್ದೆಯಿಂದ ಭಗವಂತನ ಪ್ರಾರ್ಥನೆ ಮಾಡಲು ಅದೊಂದು ಸ್ಥಳ. ಇದರಿಂದ ನಮಗೆ ಮಾನಸಿಕ ದೃಢತೆ ಸಿಗುತ್ತೆ, ಮನೋಬಲ ಹೆಚ್ಚುತ್ತೆ, ಆರೋಗ್ಯ ಹೆಚ್ಚಿ ಯಾವುದೇ ಸಮಸ್ಯೆ ಇದ್ದರೂ ಅದನ್ನು ಧೈರ್ಯವಾಗಿ ಎದುರಿಸುವ ಚೈತನ್ಯ ಬರುತ್ತೆ.

ವಾಸ್ತು ಪ್ರಕಾರ ಮನೆಯ ಈಶಾನ್ಯ ಭಾಗದಲ್ಲಿ ದೇವರ ಕೋಣೆಯನ್ನು ಇಟ್ಟುಕೊಳ್ಳುವುದು ಉತ್ತಮ. ದೇವರ ಕೋಣೆಯಲ್ಲಿರುವ ಮೂರ್ತಿಗಳಿಗೂ, ದೇವರ ಪ್ರತಿಮೆಗಳಿಗೂ, ಚಿತ್ರ ಪಟಗಳಿಗೂ ನಮ್ಮ ಜೀವನಕ್ಕೂ ಅವಿನಾಭಾವ ಸಂಬಂಧ ಇದೆ. ಹಾಗಾದರೆ ಯಾವ ಬಗೆಯ ಮೂರ್ತಿಗಳನ್ನ ಮನೆಯಲ್ಲಿ ಇಡಬಾರದು ಅಂತ ತಿಳಿಯೋಣ. ಈ ಮೂರ್ತಿಗಳಿಂದ ಜೀವನ ಕಷ್ಟಮಯವಾಗಿ, ನರಕವಾಗುತ್ತೆ ಅನ್ನೋದನ್ನ ಹೇಳ್ತೇವೆ.

ಮೊದಲನೆಯದು ದುರ್ಗೆಯ ಮೂರ್ತಿ. ಆಕೆ ಶಕ್ತಿ ಸ್ವರೂಪಿಣಿ, ದುಷ್ಟ ಸಂಹಾರಿಣಿ, ಶಿಷ್ಟರ ರಕ್ಷಣೆ ಮಾಡಿದಾಕೆ. ಆದರೆ ದುರ್ಗೆಯ ಆ ವಿದ್ವಂಸಕಾರಿ ರೂಪವಾದ ದುರ್ಗೆಯ ರೂಪವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಇದರಿಂದ ಮನೆಯಲ್ಲಿ ಸ್ವಲ್ಪ ಮಾನಸ್ ಖಿನ್ನತೆ ಉಂಟಾಗಬಹುದು. ಇಲ್ಲವೇ ಸಿಟ್ಟು, ಕೋಪ ತಾಪಗಳು ಹೆಚ್ಚಾಗಬಹುದು.

ಎರಡನೆಯದು ಮಹಾಲಕ್ಷ್ಮಿಯ ನಿಂತ ಮೂರ್ತಿಯನ್ನು ಪೂಜಿಸಬಾರದು. ನಿಂತ ಲಕ್ಷ್ಮಿ ಚಂಚಲೆ, ಆಕೆ ಯಾವಾಗ ಬೇಕಾದರೂ ಹೊರ ಹೋಗಬಹುದು. ಅದಕ್ಕೆ ಕುಳಿತ ಲಕ್ಷ್ಮಿಯನ್ನು ಪೂಜಿಸಬೇಕು ಎಂದು ನಮ್ಮ ಗುರು ಹಿರಿಯರು ಹೇಳುತ್ತಾರೆ. ಇದರಿಂದ ಸಿರಿಸಂಪನ್ನಗಳಿಗೆ ಕೊರತೆ ಉಂಟಾಗುವುದಿಲ್ಲ.

ಮೂರನೆಯದು ನಟರಾಜನ ಮೂರ್ತಿ. ಪರಮೇಶ್ವರ ನ ಸ್ವರೂಪವಾದ ನಟರಾಜ ಪರಮೇಶ್ವರ ರೌದ್ರನಾದಾಗ ಮಾತ್ರ ನಟರಾಜನ ನೃತ್ಯ ಮಾಡುತ್ತಾನೆ. ಅದರಿಂದ ಮನೆಯಲ್ಲಿ ಸಿಟ್ಟು, ಕೋಪ ತಾಪಗಳು ಹೆಚ್ಚಾಗುತ್ತದೆ. ಮನೆಯಲ್ಲಿ ಶಾಂತಿ ನೆಲೆಸಬೇಕೆಂದರೆ ನಟರಾಜನ ಮೂರ್ತಿಯನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡಬಾರದು.

ಇನ್ನೂ ನಾಲ್ಕನೆಯದು ಶನಿ ದೇವನ ಮೂರ್ತಿಯನ್ನು ಇಟ್ಟು ಪೂಜೆ ಮಾಡಬಾರದು. ಅದರ ಬದಲು ದೇವಸ್ಥಾನಕ್ಕೆ ಹೋಗಿ ಅಲ್ಲಿ ನವಗ್ರಹಗಳಲ್ಲಿ ಒಂದಾದ ಶನಿದೇವರ ಪೂಜೆ ಮಾಡಿಕೊಂಡು ಬರಬಹುದು. ಮನೆಯಲ್ಲಿ ಶನಿ ದೇವನ ಪೂಜೆ ಮಾಡಬೇಕಾದರೆ ಕೆಲವೊಂದು ನೇಮಗಳನ್ನು ಮಾಡಬೇಕಾಗುತ್ತೆ. ಆ ನೇಮಗಳನ್ನು ಮನೆಯಲ್ಲಿ ಮಾಡಲು ಕಷ್ಟವಾಗಬಹುದು. ಆದ ಕಾರಣ ಮನೆಯಲ್ಲಿ ಶನಿಯ ಮೂರ್ತಿಯನ್ನು ಇಟ್ಟು ಪೂಜೆ ಮಾಡಬಾರದು.

ಇನ್ನೂ ಐದನೆಯದು ಕಾಲಭೈರವನ ಮೂರ್ತಿ. ಇದು ಪರಮೇಶ್ವರನ ಮತ್ತೊಂದು ಸ್ವರೂಪ. ಕಾಲಭೈರವನ ಪೂಜೆ ಮಾಡಲು ಸಾಧ್ಯವಾಗುವುದಿಲ್ಲ, ಏಕೆಂದರೆ ಭೈರವನ ಪೂಜೆಗೆ ಮಂತ್ರ, ತಂತ್ರಗಳ ಅಗತ್ಯ ಸಾಕಷ್ಟು ಇದೆ. ಅದಕ್ಕೆ ಭೈರವನ ಮೂರ್ತಿಯನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡಬಾರದು.

ಕೊನೆಯದಾಗಿ ಆರನೆಯದು ಒಂದೇ ದೇವರ ಎರಡೆರಡು ಫೋಟೋಗಳನ್ನು, ಮೂರ್ತಿಗಳನ್ನು ಇಟ್ಟು ಪೂಜೆ ಮಾಡಬಾರದು ಅಂತ ಹೇಳ್ತಾರೆ. ಒಂದು ವೇಳೆ ಆ ಎರಡೂ ಮೂರ್ತಿಗಳನ್ನು ಇಟ್ಟುಕೊಳ್ಳುವುದರಿಂದ ಸಂಬಂಧಗಳಲ್ಲಿ ಬಿರುಕು ಉಂಟಾಗುತ್ತದೆ, ವೈಮನಸ್ಯ ಮೂಡುತ್ತದೆ ಎಂದು ಹಿರಿಯರು ಹೇಳ್ತಾರೆ. ಹಾಗಾಗಿ ಈ ಮೂರ್ತಿಗಳನ್ನು ಅಕ್ಕಪಕ್ಕ ಇಡುವ ಬದಲು ಎದುರು ಬದುರಾಗಿ ಇಟ್ಟು ಪೂಜೆ ಮಾಡಬಹುದು.

ಪ್ರತಿಮೆಗಳು, ಪಟಗಳು ಹಾಗೂ ಮೂರ್ತಿಗಳು ಆಶೀರ್ವಾದ ಮಾಡುವಂತೆ ಇರಬೇಕು. ಸದಾ ಹಸನ್ಮುಖರಾಗಿ ನಗುತ್ತಾ ಇರಬೇಕು. ಹೀಗಿದ್ದಾಗ ಜೀವನ ಸರಳವಾಗಿ, ಸುಂದರವಾಗಿ ಸಾಗುತ್ತದೆ ಎನ್ನುವುದಕ್ಕೆ ಸಂಕೇತವಾಗಿರುತ್ತದೆ, ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here