ಕೇವಲ 20 ನಿಮಿಷ ಚಾರ್ಜ್ ಮಾಡಿದರೆ 483 ಕಿಲೋಮೀಟರ್ ಚಲಿಸುವ ಕಾರು ಇದು.

  0
  1467

  ಫಾಸ್ಟ್ ಚಾರ್ಜಿಂಗ್ ಎಂದರೆ ಥಟ್ಟನೆ ನೆನಪಾಗುವುದು ನಮಗೆ ಮೊಬೈಲ್ ಫೋನ್ಗಳು ಅಲ್ಲವೇ ಆದರೆ ಈಗ ಸ್ಮಾರ್ಟ್ ಕಾರಿಗೂ ಬಂದಿದೆ ಅಂದರೆ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ, ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯ ಈ ಕಾರುಗಳಿಗೂ ಬಂದಾಯಿತು, ಇಂದು ನಾವು ನಿಮಗೆ ತಿಳಿಸುತ್ತಿರುವ ಈ ಕಂಪನಿಯ ಕಾರು ಕೇವಲ 20 ನಿಮಿಷ ಚಾರ್ಜ್ ಮಾಡಿದರೆ ಸಾಕು ಬರೋಬ್ಬರಿ 483 ಕಿಲೋಮೀಟರ್ ಚಲಿಸುತ್ತದೆ ಎಂದು ಅಮೆರಿಕ ಮೂಲದ ಕಂಪನಿ ಬಹಿರಂಗಪಡಿಸಿದೆ.

  ಈ ಕಂಪನಿಯ ಹೆಸರು ಲುಸಿಡ್ ಮೋಟರ್ಸ್ ಈ ಕಂಪನಿ ಎಲೆಕ್ಟ್ರಿಕ್ ಸ್ಟೇಟಸ್ ಕಾರುಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ, ಕಂಪನಿ ಹೇಳಿಕೊಂಡಿರುವ ಪ್ರಕಾರ ಈಗಾಗಲೇ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸಿದೆ ಹಾಗೂ ಈ ಕಾರು ಸಪ್ಟೆಂಬರ್ 9 ನೇ ತಾರೀಕು ಬಿಡುಗಡೆ ಮಾಡಲಿದೆ, ಮುಂದಿನ ವರ್ಷ ಈ ಕಾರು ಗ್ರಾಹಕರಿಗೆ ಲಭ್ಯವಾಗಲಿದೆ.

  ಈಗಾಗಲೇ ಹೇಳಿದಂತೆ 20 ನಿಮಿಷ ಚಾರ್ಜ್ ಮಾಡಿದರೆ 483 ಕಿಲೋಮೀಟರ್ ಚಲಿಸುವ ಕಾರು ಸಂಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ 832 ಕಿಲೋಮೀಟರ್ ಚಲಿಸುತ್ತದೆ ಎಂದು ಈ ಕಂಪನಿ ಅಧಿಕೃತವಾಗಿ ಘೋಷಣೆ ಮಾಡಿದೆ, ಇದಕ್ಕೂ ಮುಂಚೆ ಬಿಡುಗಡೆಯಾದ ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್ ಕಾರು ಎಸ್ ಲಾಂಗ್ ರೇಂಜ್ ಪ್ಲಸ್ ಸಂಪೂರ್ಣ ಚಾರ್ಜ್ ಮಾಡಿದರೆ 647 ಕಿಲೋಮೀಟರ್ ಚಲಿಸುವ ಸಾಮರ್ಥ್ಯ ಹೊಂದಿತ್ತು ಇದೇ ವಿಶ್ವದಲ್ಲಿ ಅತ್ಯಂತ ಹೆಚ್ಚು ಮೈಲೇಜ್ ನೀಡುವ ಕಾರು ಎಂದು ಕಂಪನಿ ಹೇಳಿಕೆ ನೀಡಿದ್ದು, ಆದರೆ ಇದೇ ಮಾದರಿಯ ಸೆಡಾನ್ ಕಾರು ಇದಕ್ಕೂ ಹೆಚ್ಚು ಮೈಲೇಜ್ ನೀಡುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ.

  LEAVE A REPLY

  Please enter your comment!
  Please enter your name here