ರಾತ್ರಿಯ ಸಮಯದಲ್ಲಿ ಕೂದಲನ್ನು ಏಕೆ ಬಾಚಬಾರದು ಗೊತ್ತಾ ??

0
1090

ಸುಂದರ ಬದುಕು ನಮ್ಮದಾಗಲೆಂದೇ ನಮ್ಮ ಹಿರಿಯರು ನಮಗೆ ಹಲವು ನಿಯಮಗಳನ್ನು ಹಾಗು ಆಚರಣೆಗಳನ್ನು ನಮಗೆ ತಿಳಿ ಹೇಳಿದ್ದಾರೆ, ಪ್ರತಿಯೊಂದು ನಿಮಗಳ ಬಗ್ಗೆ ನಾವು ಚರ್ಚೆ ಮಾಡುತ್ತಲೇ ಇರುತ್ತೇವೆ, ಅದರಂತೆ ಇಂದು ಬಹಳ ಮುಖ್ಯವಾದ ಆಚರಣೆಗಳಲ್ಲಿ ಒಂದು ಹೆಂಗಸರು ಕತ್ತಲು ಕವಿದ ಮೇಲೆ ಅವರ ಕೂದಲನ್ನ ಭಾಚಬಾರದು ಎಂದು, ಈ ಆಚರೆ ಏಕೆ ಬಂತು ಇದು ಕೆಲವ ಮೂಢನಂಬಿಕೆಯೇ ಅಥವಾ ಇದಕ್ಕೆ ಏನಾದರೂ ವೈಜ್ಞಾನಿಕ ಕಾರಣಗಳು ಇದ್ಯಾ ಮುಂದೆ ಓದಿ.

ರಾತ್ರಿಯ ಸಮಯದಲ್ಲಿ ಕೂದಲನ್ನು ಏಕೆ ಬಾಚಬಾರದು? ರಾತ್ರಿಯ ಸಮಯದಲ್ಲಿ ವಾಯುಮಂಡಲದಲ್ಲಿ ತ್ರಾಸದಾಯಕ ಲಹರಿಗಳ ಪ್ರಮಾಣವು ಹೆಚ್ಚಿಗೆ ಇರುತ್ತದೆ. ವೇಗವಾಗಿ ಸಂಚರಿಸುವ ಈ ತ್ರಾಸದಾಯಕ ಲಹರಿಗಳಿಂದ ವಾತಾವರಣದಲ್ಲಿ ಉಷ್ಣ ಇಂಧನದ ನಿರ್ಮಿತಿಯಾಗುತ್ತಿರುತ್ತದೆ.

ಕೂದಲನ್ನು ಬಾಚುವ ಘರ್ಷಣಾತ್ಮಕ ಪ್ರಕ್ರಿಯೆಯಿಂದ ಹಾಗೂ ಕೂದಲಿನ ಚಲನವಲನದಿಂದ ನಿರ್ಮಾಣವಾಗುವ ನಾದಲಹರಿಗಳ ಕಡೆಗೆ ವಾಯುಮಂಡಲದಲ್ಲಿ ಸಂಚರಿಸುವ ತ್ರಾಸದಾಯಕ ಲಹರಿಗಳು ಆಕರ್ಷಿತವಾಗುತ್ತವೆ.

ಕೂದಲುಗಳ ತುದಿಗಳಿಂದ ತ್ರಾಸದಾಯಕ ಲಹರಿಗಳು ಜೀವದ ದೇಹವನ್ನು ವೇಗವಾಗಿ ಪ್ರವೇಶಿಸುತ್ತವೆ. ಇದರಿಂದ ಜೀವಕ್ಕೆ ಅಸ್ವಸ್ಥವಾಗುವುದು, ಶರೀರ ಜಡವೆನಿಸುವುದು, ಕೆಟ್ಟ ಕನಸುಗಳು ಬೀಳುವುದು, ಜುಮ್ಮುಗಟ್ಟಿದಂತಾಗಿ ಶರೀರಕ್ಕೆ ಸ್ಪರ್ಶಜ್ಞಾನವಿಲ್ಲದಂತಾಗುವುದು ಮುಂತಾದ ತೊಂದರೆಗಳು ಆಗುತ್ತವೆ.

ವೇಗವಾಗಿ ಸಂಕ್ರಮಿತವಾಗುವ ಈ ತ್ರಾಸದಾಯಕ ಲಹರಿಗಳಿಂದ ಕೆಲವೊಮ್ಮೆ ಯಾವುದಾದರೊಂದು ಕೆಟ್ಟ ಶಕ್ತಿಯು ದೇಹವನ್ನು ಪ್ರವೇಶಿಸಬಹುದು. ಕೆಟ್ಟ ಶಕ್ತಿಗಳ ತೊಂದರೆಯಾಗುವ ಸಾಧ್ಯತೆಯಿರುವುದರಿಂದ ರಾತ್ರಿ ಸಮಯದಲ್ಲಿ ಕೂದಲನ್ನು ಬಾಚಬಾರದು.

LEAVE A REPLY

Please enter your comment!
Please enter your name here