ಕೋಟ್ಯಂತರ ಜನರ ಪ್ರಾರ್ಥನೆ ಫಲಿಸಿತು! ಎಸ್.ಪಿ.ಬಿ. ಅವರ ಆರೋಗ್ಯದ ಬಗ್ಗೆ ಸಿಹಿ ಸುದ್ದಿ.

0
490

ಗಾನ ಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಕೋವಿಡ್ ಪಾಸಿಟಿವ್ ಬಂದಿರುವುದು ವಿಷಾದನೀಯ ವಿಚಾರ. ಪ್ರತಿದಿನವೂ ಬುಲೆಟಿನ್’ನಲ್ಲಿ ವಿಶೇಷ ಮಾಹಿತಿಗಳು ಹೊರಬರುತ್ತಿವೆ. ಅವರ ಮಗ ಅವರ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನದ ಆರೋಗ್ಯ ಮಾಹಿತಿಯನ್ನು ವೀಡಿಯೋ ಮೂಲಕ ತಿಳಿಸುತ್ತಿದ್ದಾರೆ.

ಮೊದಲಿಗೆ ಕರೋನ ವೈರಸ್’ನ ಸೂಚನೆಗಳು ಕಂಡಾಗ ಎಸ್.ಪಿ.ಬಿ. ಅವರೇ ಖುದ್ದಾಗಿ ವಿಡಿಯೋ ಮಾಡಿ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ತಿಳಿಸಿದ್ದರು. ನಂತರ ತೀವ್ರ ರಕ್ತಸ್ರಾವದಿಂದ ಅವರನ್ನು ಇಂಟೆನ್ಸಿವ್ ಕೇರ್ ಯೂನಿಟ್’ಗೆ ವರ್ಗಾಯಿಸಲಾಯಿತು.

ಕೋವಿಡ್ ವರದಿ ನೆಗೆಟಿವ್ ಎಂಬ ವದಂತಿ ಹರಡಿದ ಬೆನ್ನಿನಲ್ಲಿ ಅವರ ಮಗ ಇನ್ಸ್ಟಾಗ್ರಾಂ’ನಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ, ಹಾಗೂ ರೂಮರ್’ಗಳಿಗೆ ತಲೆ ಕೊಡಬೇಡಿ ಎಂದು ಹೇಳಿದ್ದಾರೆ. ಎಸ್.ಪಿ.ಬಿ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಸ್ಥಿರತೆಯು ಅವರ ಶ್ವಾಸಕೋಶವನ್ನು ಸಾಧ್ಯವಾದಷ್ಟು ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ಆದ್ದರಿಂದ ದಯವಿಟ್ಟು ವದಂತಿಯನ್ನು ದೂರವಿಡಿ ಎಂದು ಅವರ ಪುತ್ರ ಎಸ್.ಪಿ.ಚರಣ್ ಹೇಳಿದರು.

ಎಸ್.ಪಿ.ಬಿ. ಅವರನ್ನು ಭೇಟಿಯಾಗಲು ಅವರ ಮಗನಿಗೆ ವೈದ್ಯರು ಇಂದು ಅವಕಾಶ ನೀಡಿದ್ದಾರೆ. ಅಷ್ಟೇ ಅಲ್ಲ, ಸನ್ನೆಗಳ ಮೂಲಕ ಎಸ್.ಪಿ.ಬಿ. ಹಾಗೂ ಅವರ ಪುತ್ರ ಮಾತನಾಡಿದ್ದಾರೆ. ಎಸ್.ಪಿ.ಬಿ. ಅವರಿಗೆ ನೀವು ಹೇಗಿದ್ದೀರಿ ಎಂದಾಗ ಕೈಸನ್ನೆ ಮಾಡಿ ನಾನು ಚೆನ್ನಾಗಿದ್ದೇನೆ ನೀನು ಹಾಗೂ ನಿನ್ನ ತಾಯಿ ಹೇಗಿದ್ದೀರಿ ಎಂದು ಕೇಳಿದ್ದಾರೆ.

ಇದಕ್ಕೆ ಉತ್ತರ ನೀಡಿದ ಎಸ್.ಪಿ.ಬಿ. ಅವರ ಪುತ್ರ, ಕೋಟ್ಯಂತರ ಜನರು ನಿಮಗಾಗಿ ಪ್ರಾರ್ಥಿಸುತ್ತಿದ್ದಾರೆ. ಅವರೆಲ್ಲರ ಪ್ರಾರ್ಥನೆ ಫಲಿಸಲಿ ಎಂಬುದೇ ನಮ್ಮ ಹಾರೈಕೆ ಎಂದು ತಮ್ಮ ತಂದೆಯವರಿಗೆ ತಿಳಿಸಿದ್ದಾರೆ. ಅದಕ್ಕೆ ಎಸ್.ಪಿ.ಬಿ. ಥಮ್ಸ್ ಅಪ್ ಎಂದು ಸನ್ನೆ ಮಾಡಿದ್ದಾರೆ. ಅವರಿಗಾಗಿ ಪ್ರಾರ್ಥಿಸಿದ ಭಾರತದ ಹಾಗೂ ಪ್ರಪಂಚದಾದ್ಯಂತ ಇರುವ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದ ಹೇಳುವಂತಿತ್ತು ಎಂದು ಅವರ ಮಗ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.

ಸಾವಿರಾರು ಹಾಡುಗಳು ಹಾಗೂ ನೂರಾರು ಕಾರ್ಯಕ್ರಮಗಳನ್ನು ನೀಡಿರುವ ಎಸ್ ಪಿ ಬಾಲಸುಬ್ರಹ್ಮಣ್ಯಮ್ ಅವರಿಗೆ ಅವರ ಮಗನನ್ನು ಒಬ್ಬ ದೊಡ್ಡ ನಟನನ್ನಾಗಿ ಮಾಡುವ ಆಸೆ ಇತ್ತು. ಆದರೆ ಅವನು ದೊಡ್ಡ ನಟನಾಗಬೇಕು ಎಂಬ ಆಸೆ ನೆರವೇರಲಿಲ್ಲ ಎಂಬ ಕೊರಗು ಕೂಡ ತಮ್ಮ ಮನಸ್ಸಿನಲ್ಲಿಯೇ ಕಾಡುತ್ತಿತ್ತು.

ಇಷ್ಟೆಲ್ಲ ಸಾಧನೆಗಳನ್ನು ಮಾಡಿರುವ ಎಸ್ ಪಿ ಬಾಲಸುಬ್ರಹ್ಮಣ್ಯಮ್ ಅವರು ಆದಷ್ಟು ಬೇಗ ಗುಣಮುಖರಾಗಲಿ, ಆಸ್ಪತ್ರೆಯಿಂದ ಹೊರಬರಲಿ ಎಂದು ಅವರ ಲಕ್ಷಾಂತರ ಅಭಿಮಾನಿಗಳು ಪ್ರಪಂಚದಾದ್ಯಂತ ಪ್ರಾರ್ಥಿಸುತ್ತಿದ್ದಾರೆ. 23 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ನಮ್ಮ ಭಾರತದ ಹೆಮ್ಮೆಯ ಗಾಯಕ ಎಸ್.ಪಿ.ಬಿ. ಅವರು ಬಹುಬೇಗ ಚೇತರಿಕೆ ಕಂಡು ಮತ್ತೆ ಗಾನ ಲೋಕಕ್ಕೆ ಪಾದಾರ್ಪಣೆ ಮಾಡಲಿ ಎಂಬುದು ಕೋಟ್ಯಂತರ ಜನರ ಹಾರೈಕೆ.

ಜಾಹಿರಾತು : ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 95350 04448 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here