ಸರಿಗಮಪ ಖ್ಯಾತಿಯ ಅಂಕಿತಾ ಕುಂಡು ಈಗ ಹೇಗಿದ್ದಾರೆ ಗೊತ್ತಾ? ಅವರ ಪಿ.ಯು.ಸಿ. ಮಾರ್ಕ್ಸ್ ಕೇಳಿದರೆ ಶಾಕ್ ಆಗ್ತೀರಾ!

0
7985

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

ಕರ್ನಾಟಕದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಯಾರಿಗೆ ತಾನೇ ಗೊತ್ತಿಲ್ಲ. ಈ ಕಾರ್ಯಕ್ರಮದಲ್ಲಿ ಹಾಡುವ ಎಲ್ಲಾ ಕಂಟೆಸ್ಟೆಂಟ್’ಗಳು ಉತ್ತಮ ಹೆಸರನ್ನು ಮಾಡುತ್ತಾರೆ, ಜೊತೆಗೆ ನೂರಾರು ಶೋಗಳನ್ನು ಕಾರ್ಯಕ್ರಮ ಮುಗಿದ ನಂತರ ಕೊಡುತ್ತಿರುತ್ತಾರೆ. ಅಷ್ಟೇ ಅಲ್ಲ ಅವರಲ್ಲಿ ಅತ್ಯಂತ ಪ್ರತಿಭಾವಂತರು ಹಿನ್ನೆಲೆ ಗಾಯಕರೂ ಸಹ ಆಗುತ್ತಾರೆ.

ಹಿನ್ನೆಲೆ ಗಾಯನವೆಂದರೆ ಅಷ್ಟು ಸುಲಭವಲ್ಲ, ಹಿನ್ನೆಲೆ ಗಾಯನಕ್ಕೆ ಬೇಕಾಗುವಂತಹ ಧ್ವನಿ ಇದ್ದರೆ ಸಂಗೀತ ನಿರ್ದೇಶಕರು ಅವರನ್ನು ಹಿನ್ನೆಲೆಗಾಯಕರನ್ನಾಗಿ ಮಾಡುವ ಬಯಕೆಯನ್ನು ವ್ಯಕ್ತಪಡಿಸುತ್ತಾರೆ. ಅಂತಹ ಕೆಲವು ಗಾಯಕರುಗಳಲ್ಲಿ ಚಿಕ್ಕವಯಸ್ಸಿನಲ್ಲಿಯೇ ಬೆಂಗಾಲ್ ನಿಂದ ಕಾರ್ಯಕ್ರಮಕ್ಕೆ ಹಾಡಲು ಬಂದಿದ್ದ ಅಂಕಿತ ಕುಂಡು ಸಹ ಒಬ್ಬರು.

ಅಂಕಿತ ಅವರಿಗೆ ಮೊದಲೇ ಹಿನ್ನೆಲೆ ಗಾಯನದ ಧ್ವನಿ ಇದ್ದಿದ್ದರಿಂದ ಅವರನ್ನು ನೇರವಾಗಿ ಹಲವಾರು ಸಂಗೀತ ಸಂಯೋಜಕರು ತಮ್ಮ ಸಂಯೋಜನೆಗೆ ಹಾಡುವಂತೆ ಬೇಡಿಕೆಯಿಟ್ಟಿದ್ದರು. ಅಂತೆಯೇ ರಿಕ್ಕಿ ಸಿನಿಮಾದ ‘ಮಲಗೆ ಮಲಗೆ ಎದೆಯ ಒಳಗೆ’ ಎಂಬ ಹಾಡಿಗೆ ಕಾರ್ತಿಕ್ ಅವರೊಂದಿಗೆ ಹಿನ್ನೆಲೆ ಗಾಯನವನ್ನು ಶುರುಮಾಡಿದ್ದರು ಅಂಕಿತ.

ಅಂಕಿತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನು ನಾಲ್ಕು ವರ್ಷದ ಮಗುವಾಗಿದ್ದಾಗಲೇ ಅವರ ಅಂಕಲ್ ದಿವಂಗತ ಅರುಣ್ಕುಮಾರ್ ಚಕ್ರವರ್ತಿ ಅವರಿಂದ ಕಲಿಯುತ್ತಿದ್ದರು.

ಈಗ ರಾಜನ್-ನಾಗೇಂದ್ರ ರವರಿಂದ ಮತ್ತಷ್ಟು ಸಂಗೀತದ ಜ್ಞಾನವನ್ನು ಅಂಕಿತ ಅವರು ಪಡೆದುಕೊಳ್ಳುತ್ತಿದ್ದಾರೆ. ಪ್ರಸ್ತುತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನು ಉಸ್ತಾದ್ ಇಮಾನ್ ದಾಸ್ ರವರಿಂದ ಕಲಿಯುತ್ತಿದ್ದಾರೆ.

Advertisement: Sri Choudi Mahashakti Jyotish Peetha Pradhaan tantrik and divine priest Scholar Sri Sri Damodar Guruji. One stop solution for all your personal problems. Permanent solutions for all your problems. Call 900 8906 888 for solutions within two days for various long-standing issues.

ಅಂಕಿತ ರವರು ಕನ್ನಡದಲ್ಲಿ ಹಾಡುವುದಕ್ಕೂ ಮೊದಲು 11 ವರ್ಷದ ಹುಡುಗಿಯಾಗಿದ್ದಾಗಲೇ ಬೆಂಗಾಲಿ ಸೋಲೋ ಆಲ್ಬಂನಲ್ಲಿ ಹಾಡಿದ್ದರು. ಅಷ್ಟೇ ಅಲ್ಲ 2015ರಲ್ಲಿ ನಡೆದ ಸರಿಗಮಪ ಸೀಸನ್ ನಲ್ಲಿ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಈಗ ಹದಿನೈದಕ್ಕೂ ಹೆಚ್ಚು ಗೀತೆಗಳಿಗೆ ಕನ್ನಡ ಚಿತ್ರರಂಗದಲ್ಲಿ ಹಿನ್ನೆಲೆಯ ಧ್ವನಿಯಾಗಿದ್ದಾರೆ ಅಂಕಿತ.

ಚಿತ್ರಗಳ ಹೆಸರುಗಳು ಇಂತಿವೆ : ರಿಕ್ಕಿ, ಜಗತ್ ಕಿಲಾಡಿ, ಮುಂಬೈ, ಫೈಜಿ, ಮೋಜೋ, ಫ್ಯಾನ್, ಮದುವೆ ಮಾಡ್ರಿ ಸರಿಹೋಗ್ತಾನೆ ಮತ್ತು ಹತ್ತು ಹಲವಾರು.
ಅಷ್ಟೇ ಅಲ್ಲ ಬಾಲಿವುಡ್ನ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಶಂಕರ್ ಮಹದೇವನ್ ರವರ ಹಲ್ಕಾ ಎನ್ನುವ ಒಂದು ಹಾಡಿಗೆ ಹಿನ್ನೆಲೆ ಧ್ವನಿಯಾಗಿದ್ದಾರೆ.

ಇಷ್ಟೆಲ್ಲಾ ಸಾಧನೆ ಮಾಡಿರುವ ಅಂಕಿತ ಕುಂಡು ತಮ್ಮ ದ್ವಿತೀಯ ಪಿಯುಸಿಯಲ್ಲಿ ಪಡೆದಿರುವ ಅಂಕ 85 ಪರ್ಸೆಂಟ್. 2015 ರಲ್ಲಿ ನಡೆದ ಸರಿಗಮಪ ಲಿಟಲ್ ಚಾಂಪ್ಸ್ ನಲ್ಲಿ ಪ್ರತಿ ಎಪಿಸೋಡ್’ನಲ್ಲೂ ರೋಚಕ ಸ್ಪರ್ಧೆ ನೀಡಿ ಕೊನೆಗೆ ಫಿನಾಲೆ ಯಲ್ಲಿ ಕೂಡ ಸುಪ್ರಿಯ ಜೋಷಿ ಅವರೊಂದಿಗೆ ಅಂತಿಮ ಸೆಣೆಸಾಟ ನಡೆಸಿದ್ದರು. ಕೊನೆಗೆ ಸುಪ್ರಿಯಾ ಜೋಷಿಯವರು ವಿಜೇತರಾಗಿ, ಅಂಕಿತಾರವರು ದ್ವಿತೀಯ ಸ್ಥಾನದ ಪಟ್ಟಕ್ಕೆ ಏರಿದ್ದರು.

ಜೊತೆಗೆ ಕರೋನಾ ಮಹಾಮಾರಿ ಎಲ್ಲೆಡೆ ಇರುವ ಕಾರಣ ಮನೆಯಲ್ಲಿಯೇ ಪ್ರತಿನಿತ್ಯ ಸಂಗೀತಾಭ್ಯಾಸ ಮಾಡಿಕೊಂಡು ತಮ್ಮ ಪ್ರೀತಿಯ ನಾಯಿಯೊಂದಿಗೆ ಹಾಗೂ ಪೋಷಕರೊಂದಿಗೆ ಒಳ್ಳೆಯ ಸಮಯ ಕಳೆಯುತ್ತಿದ್ದಾರೆ. ಜೊತೆಗೆ ಇತ್ತೀಚೆಗಷ್ಟೇ ನಡೆದ ಹಲವು ಕಾರ್ಯಕ್ರಮಗಳಲ್ಲಿ ತಮ್ಮ ಗಾಯನವನ್ನು ಪ್ರದರ್ಶಿಸಿದ್ದಾರೆ.

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here