ಸೌಂದರ್ಯ ಅವರ ಸಹೋದರಿ ಕಿರುತೆರೆ ಧಾರವಾಹಿಯ ಖ್ಯಾತ ನಟಿ. ಯಾರು ನೀವೇ ನೋಡಿ.

0
2721

ಕಲರ್ಸ್ ಕನ್ನಡದಲ್ಲಿ ಬರುತ್ತಿದ್ದ ಪ್ರಖ್ಯಾತ ಧಾರವಾಹಿ ಲಕ್ಷ್ಮೀ ಬಾರಮ್ಮ ನಿಮಗೆಲ್ಲ ಗೊತ್ತೇ ಇದೆ. ಈ ಧಾರವಾಹಿ ಒಂದು ಕಾಲದಲ್ಲಿ ತನ್ನದೇ ಆದ ಛಾಪನ್ನು ಕರ್ನಾಟಕದ ಮೀಡಿಯಾದ ಮನೆಮನೆಗಳಲ್ಲಿ ನಿದ್ದೆಗೆಡಿಸುವಂತೆ ಮಾಡಿದ್ದು ವಾಸ್ತವಿಕ. ಅದೇ ರೀತಿಯಲ್ಲಿ ಎಲ್ಲ ಧಾರವಾಹಿಗಳನ್ನು ಹಿಂದಿಕ್ಕಿ ಕಲರ್ಸ್ ಕನ್ನಡ ಒಂದು ಕಾಲದಲ್ಲಿ ತನ್ನ ಧಾರಾವಾಹಿಗಳಿಂದ ಟಿ.ಆರ್.ಪಿ ಯಲ್ಲಿ ಅನರ್ಘ್ಯವಾದ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿತು.

ಲಕ್ಷ್ಮೀ ಬಾರಮ್ಮ ಧಾರವಾಹಿ 2013ರಲ್ಲಿ ಶುರುವಾಗಿತ್ತು. ಹಲವಾರು ಬಾರಿ ಧಾರವಾಹಿಯಲ್ಲಿ ಪಾತ್ರಗಳ ಬದಲಾವಣೆ ಕಂಡರೂ ಸಹ ರೇಟಿನಲ್ಲಿ ಕೊಂಚ ಬದಲಾವಣೆಗಳನ್ನು ಅಥವಾ ಏರಿಳಿತಗಳನ್ನು ಕಂಡಿರಲಿಲ್ಲ. ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಜೊತೆಜೊತೆಗೆ ಬಂದ ಅಗ್ನಿಸಾಕ್ಷಿ, ಪುಟ್ಟಗೌರಿ ಮದುವೆ ಮತ್ತು ಹಲವಾರು ಧಾರವಾಹಿಗಳು ಒಂದಕ್ಕಿಂತ ಒಂದು ಸ್ಪರ್ಧೆಗೆ ಬಿದ್ದು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದವು. ಈ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮುಖ್ಯ ಪಾತ್ರವೂ ಎರಡು ಬಾರಿ ಬದಲಾವಣೆಗೊಂಡಿದೆ, ಮೊದಲು ಪಾತ್ರ ವಹಿಸುತ್ತಿದ್ದ ನಟಿಯ ನಂತರ ಅದೇ ಪಾತ್ರಕ್ಕೆ ಕವಿತಾರವರು ಲಕ್ಷ್ಮಿಯ ಪಾತ್ರವನ್ನು ಮಾಡಲು ಒಪ್ಪಿದ್ದರು. ಕೆಲವು ವರ್ಷಗಳು ಕವಿತಾರವರು ಪಾತ್ರವನ್ನು ವಹಿಸಿದ ನಂತರ ಅನಿವಾರ್ಯ ಕಾರಣಗಳಿಂದ ಅವರು ಧಾರವಾಹಿಯನ್ನು ಮತ್ತು ಪಾತ್ರವನ್ನು ತ್ಯ’ಜಿಸಬೇಕಾಗಿ ಬಂದಿತ್ತು. ಇಂತಹ ಸಮಯದಲ್ಲಿ ಆ ಪಾತ್ರಕ್ಕೆ ಸೂಕ್ತವಾಗುವ ಮತ್ತೊಂದು ಮುಖವನ್ನು ವಾಹಿನಿಯು ಹುಡುಕುತ್ತಿತ್ತು.

ಅದೇ ಸಮಯಕ್ಕೆ ಬಂದವರು ನಟಿ ರಶ್ಮಿ ಪ್ರಭಾಕರ್. ರಶ್ಮಿ ಪ್ರಭಾಕರ್ ಅವರು ಮೂಲತಹ ಭರತನಾಟ್ಯ ಕಲಾವಿದೆ. ಒಬ್ಬ ಒಳ್ಳೆಯ ನಟಿಯಾಗಬೇಕು ಎಂಬ ಮಹದಾಸೆಯಿಂದ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಪ್ರಮುಖ ಪಾತ್ರಕ್ಕಾಗಿ ಕಾಯುತ್ತಿದ್ದರು. ಇದೇ ಸಮಯದಲ್ಲಿ ಬಯಸದೆ ಬಳಿ ಬಂದಂತೆ ಬಂದಿತ್ತು ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಲಚ್ಚಿ ಪಾತ್ರ. ಲಕ್ಷಿ ಪಾತ್ರವನ್ನು ಮೊದಲಿಗೆ ಕವಿತಾ ಅವರು ಬಿಟ್ಟರೆ ಇನ್ಯಾರು ಅತ್ಯಂತ ಸುಲಭವಾಗಿ ನಿಭಾಯಿಸುವುದಕ್ಕೆ ಸಾಧ್ಯವಿಲ್ಲ ಎಂದುಕೊಂಡಿದ್ದರು ಕರ್ನಾಟಕದ ಜನ. ಆದರೆ ಕ್ರಮೇಣ ಕವಿತಾರವರನ್ನು ಮರೆಸುವಂತೆ ರಶ್ಮಿ ಪ್ರಭಾಕರ್ ಅವರು ಲಚ್ಚಿಯ ಪಾತ್ರವನ್ನು ಅತ್ಯಂತ ಮಧುರವಾಗಿ ನಿಭಾಯಿಸಿ, ಆ ಪಾತ್ರಕ್ಕೆ ಜೀವ ತುಂಬಿದ್ದರು. ದಿನೇದಿನೇ ಕಳೆದಂತೆ ಕವಿತಾರವರು ಈ ಧಾರವಾಹಿಯಲ್ಲಿದ್ದರು ಎಂಬುದನ್ನೇ ಮರೆತ ಜನ, ಲಕ್ಷ್ಮೀ ಬಾರಮ್ಮದಲ್ಲಿನ ಹೊಸ ಲಚ್ಚಿಯನ್ನು ತಮ್ಮ ಮನೆ ಮಗಳಾಗಿ ಸ್ವೀಕರಿಸಿದರು.

ಅನುಬಂಧ ಅವಾರ್ಡ್ಸ್’ನಲ್ಲಿ ರಶ್ಮಿ ಪ್ರಭಾಕರ್ ಅವರು ತಮಗೆ ಒಂದು ಕಣ್ಣು 70 ಪರ್ಸೆಂಟ್ ಕಾಣುವುದಿಲ್ಲವೆಂದು ಹೇಳಿದ್ದರು. ಇಷ್ಟೇ ಅಲ್ಲ ಖ್ಯಾತ ನಟಿ, ಎಂದೆಂದೂ ಮರೆಯಲಾಗದ ಕನ್ನಡದ ಮಹಾ ನಟಿ ಸೌಂದರ್ಯ’ರವರ ಬಹಳ ಹತ್ತಿರದ ಸಂಬಂ’ಧಿಯಾಗಿರುವ ರಶ್ಮಿ ಪ್ರಭಾಕರ್ ಅವರು, ನೋಡಲು ಕೊಂಚ ಸೌಂದರ್ಯ ಅವರನ್ನೇ ಹೋಲುವುದು ಸತ್ಯ. ನಟಿ ಸೌಂದರ್ಯ ಅವರಿಗೆ ಸಹೋದರಿ ಸಂಬಂ’ಧಿ ಆಗಬೇಕಿರುವ ರಶ್ಮಿ ಪ್ರಭಾಕರ್’ಅವರು ಅವರಂತೆ ನಟನೆಯಲ್ಲಿ ಮಹೋನ್ನತ ಸ್ಥಾನಕ್ಕೇರಲಿ ಎಂಬುದು ಕರುನಾಡ ಕನ್ನಡಿಗರ ಮನದಾಳದ ಹಾರೈಕೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here