ದೇವರಿಗೆ ಯಾವ ಪುಷ್ಪವನ್ನು ಅರ್ಪಿಸಿ ಪೂಜೆ ಮಾಡಿದರೆ ಯಾವ ಫಲ ದೊರೆಯುತ್ತದೆ ಎಂದು ನಾವು ತಿಳಿದುಕೊಳ್ಳೋಣ. ಮಲ್ಲಿಗೆ ಹೂವಿನಿಂದ ಪೂಜೆ ಮಾಡಿದರೆ ಎಲ್ಲಾ ರೋಗಗಳು ನಿವಾರಣೆಯಾಗುತ್ತವೆ ಆರೋಗ್ಯ ಭಾಗ್ಯವೂ ದೊರೆಯುತ್ತದೆ. ಕನಕಾಂಬರ ಹೂವಿನಿಂದ ಪೂಜೆ ಮಾಡಿದರೆ ವೈ’ರಾಗ್ಯ ದೊರೆಯುತ್ತದೆ. ತುಂಬೆ ಹೂವಿನಿಂದ ಪೂಜೆ ಮಾಡಿದರೆ ದೇವರಲ್ಲಿ ಭಕ್ತಿ ಇಮ್ಮಡಿಯಾಗುತ್ತದೆ. ನಂದಿಬಟ್ಟಲು ಹೂವಿನಿಂದ ಶಿವನಿಗೆ ಪೂಜೆ ಮಾಡಿದರೆ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ.
ಕಮಲದ ಹೂವಿನಿಂದ ಪೂಜೆ ಮಾಡಿದರೆ ದಾರಿದ್ರ ನಿವಾರಣೆಯಾಗಿ ಲಕ್ಷ್ಮಿ ಕಟಾಕ್ಷವು ದೊರೆಯುತ್ತದೆ. ಸಂಪಿಗೆ ಹೂವಿನಿಂದ ಪೂಜೆ ಮಾಡಿದರೆ ಮಾಂ’ತ್ರಿಕ ಪ್ರಯೋಗಗಳು ಕೆಲಸ ಮಾಡುವುದಿಲ್ಲ. ಶತ್ರುಗಳ ಬಾಧೆ ತಟ್ಟುವುದಿಲ್ಲ. ಕೇದಿಗೆ ಹೂವಿನಿಂದ ಪೂಜೆ ಮಾಡಿದರೆ ಅಧಿಕಾರದಲ್ಲಿರುವ ಮನಸ್ತಾ’ಪಗಳು ದೂರವಾಗುತ್ತದೆ. ರುದ್ರಾಕ್ಷಿ ಹೂವಿನಿಂದ ಪೂಜೆ ಮಾಡಿದರೆ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಜಯ ನಿಮ್ಮದಾಗುತ್ತದೆ. ಜಾಜಿ ಹೂವಿನಿಂದ ಪೂಜೆ ಮಾಡಿದರೆ ದುಷ್ಟ ಗುಣಗಳಿಂದ ದೂರಾಗಿ ಒಳ್ಳೆಯ ಗುಣವನ್ನು ಹೊಂದಿ ಬಾಳುತ್ತೀರಿ.
ಪಾರಿಜಾತ ಹೂವಿನಿಂದ ಪೂಜೆ ಮಾಡಿದರೆ ಕಾಳಸ’ರ್ಪದೋ’ಷ ನಿವಾರಣೆ ಆಗುತ್ತದೆ. ಮೇಲೆ ತಿಳಿಸಿರುವ ಪುಷ್ಪಗಳನ್ನು ದೇವರಿಗೆ ಅರ್ಪಿಸಿ ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ (ಬೆಳಿಗ್ಗೆ 5:00 ಗಂಟೆಯಿಂದ 6.30 ರವರೆಗೆ) ಭಕ್ತಿಯಿಂದ ಪೂಜೆ ಮಾಡಿದರೆ ಸಂತೃಪ್ತಿಯ ಜೀವನ ಪಡೆಯುವಿರಿ. ಜೀವನದಲ್ಲಿ ಯಾವುದೇ ತರಹದ ತೊಂದರೆಯೂ ಬರುವುದಿಲ್ಲ. ಬಯಸಿದ್ದ ಕಾರ್ಯಗಳೆಲ್ಲವೂ ಸಿದ್ಧಿಯಾಗುತ್ತದೆ. ಸಾಯಂಕಾಲದ ಪೂಜೆಯಿಂದ ದೇವರಲ್ಲಿ ಭಕ್ತಿಯು ಹೆಚ್ಚಾಗಿ ಸಮಸ್ತ ಕಷ್ಟಗಳಿಂದ ಪರಿಹಾರ ಸಿಗುತ್ತದೆ.
ರಾತ್ರಿ ಕಾಲದಲ್ಲಿ ಪೂಜೆಯಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ ಮಧ್ಯರಾತ್ರಿ ದೇವರ ಪೂಜೆಯನ್ನು ಎಂದಿಗೂ ಮಾಡಬಾರದು. ಮಧ್ಯರಾತ್ರಿ ದೇವರ ಪೂಜೆಯನ್ನು ಮಾಡಿದರೆ ಅಪ ಮೃ’ತ್ಯುವಿಗೆ ಈಡಾಗುತ್ತಾರೆ. ಬಿಳಿ ಎಕ್ಕದ ಹೂವಿನಿಂದ ಗಣೇಶನಿಗೆ ಶಿವನಿಗೆ ಪೂಜೆ ಮಾಡಿದರೆ ಸಮಸ್ತ ರೋಗಗಳಿಂದ ನಿವಾರಣೆಯಾಗಿ ಆರೋಗ್ಯ ಭಾಗ್ಯ ಲಭಿಸುತ್ತದೆ.
ಎಲ್ಲರ ಜೀವನದಲ್ಲೂ ಸಮಸ್ಯೆಗಳಿರುವುದು ಸಹಜ. ಸಮಸ್ಯೆಪಾಳಿಂದ ಪಾರಾಗಲು ಮಾರ್ಗವನ್ನು ನಾವು ಹುಡುಕುತ್ತಲೇ ಇರುತ್ತೇವೆ. ಯಾವ ಫಲಗಳನ್ನು ದೇವರಿಗೆ ನೈವೇದ್ಯ ಮಾಡಿದರೆ ಯಾವ ಫಲಗಳು ದೊರೆಯುತ್ತದೆ ಎಂದು ತಿಳಿದುಕೊಳ್ಳೋಣ. ಮಾವಿನ ಹಣ್ಣು, ಹಲಸಿನ ಹಣ್ಣು, ಸೇಬು ಹಣ್ಣು, ನೇರಳೆ ಹಣ್ಣು, ತೆಂಗಿನಕಾಯಿ, ಸಪೋಟ ಹಣ್ಣು, ಸೀಬೆ ಹಣ್ಣುಗಳನ್ನು ಪೂಜೆಗೆ ಬಳಸಿದರೆ ಸಿಗುವ ಫಲಗಳನ್ನು ತಿಳಿದುಕೊಳ್ಳೋಣ.
ಮಾವಿನಹಣ್ಣು : ಯಾರಾದರೂ ನಿಮಗೆ ನಂಬಿಸಿ ಮೋಸ ಮಾಡಿದ್ದರೆ, ಮಾವಿನಹಣ್ಣಿನ ಜೊತೆಗೆ ಜೇನು ತುಪ್ಪವನ್ನು ಹಾಕಿ ಅಭಿಷೇಕ ಮಾಡಬೇಕು. ನಂತರ ದೇವರಿಗೆ ಅರ್ಪಿಸಿದರೆ ಮೋಸ ಮಾಡಿದವರು ಕ್ಷಮೆಯನ್ನು ಕೇಳಿಕೊಂಡು ನಿಮ್ಮ ಹಣ ಮರಳಿ ತಂದು ಕೊಡುತ್ತಾರೆ. ಋತುಮತಿಯಾಗದ ಹೆಣ್ಣುಮಕ್ಕಳಿಗೆ ಮಾವಿನಹಣ್ಣಿನ ಜೊತೆಗೆ ಅಂಜೂರದ ಹಣ್ಣನ್ನು ಸೇರಿಸಿ ಪ್ರಸಾದ ಮಾಡಿ ದೇವರಿಗೆ ಅರ್ಪಿಸಬೇಕು. ನಂತರ ಅದನ್ನು ಹೆಣ್ಣುಮಕ್ಕಳಿಗೆ ಕೊಟ್ಟರೆ ದೇವರ ಅನುಗ್ರಹದಿಂದ ಋತುಮತಿಯಾಗುತ್ತಾರೆ.
ಹಲಸಿನ ಹಣ್ಣು : ಹಲಸಿನ ಹಣ್ಣನ್ನು ದೇವರಿಗೆ ನೇವೇದ್ಯ ಮಾಡಿದರೆ ಸಕಲ ಕಷ್ಟಗಳು, ರೋಗಗಳು, ಶತ್ರುಗಳ ನಿವಾರಣೆಯಾಗುತ್ತದೆ. ಅಂಜೂರದ ಹಣ್ಣುಗಳನ್ನು ದೇವರಿಗೆ ನೈವೇದ್ಯ ಮಾಡಿದರೆ ಲೋ ಬಿ.ಪಿ ಇರುವವರು ಶ್ರೀ ಗಣೇಶನಿಗೆ 21 ದಿನಗಳ ಕಾಲ ಪೂಜೆ ಮಾಡಿಸಬೇಕು. ನಂತರ ತೀರ್ಥ ಹಾಗೂ ಫಲ ಪ್ರಸಾದ ಸೇವನೆ ಮಾಡಿದರೆ ಬಿ.ಪಿ ನಾರ್ಮಲ್’ಗೆ ಬಂದು ಆರೋಗ್ಯವು ಸುಧಾರಿಸುತ್ತದೆ. ಅಂಜೂರದ ಹಣ್ಣನ್ನು ಗಣಪತಿ ದೇವಸ್ಥಾನಗಳಲ್ಲಿ ನೈವೇದ್ಯ ಮಾಡಿಸಿ ಸೇವನೆ ಮಾಡಿದರೆ ಆರೋಗ್ಯ ಭಾಗ್ಯ ಸದಾ ಲಭಿಸುತ್ತದೆ.
ಸೇಬು ಹಣ್ಣು : ಸೇಬು ಹಣ್ಣಿನಿಂದ ನೈವೇದ್ಯ ಮಾಡಿದರೆ ಶ್ರೀಮಂತಿಕೆ ರಾಜ ಗೌರವಗಳು ಪ್ರಾಪ್ತಿಯಾಗುತ್ತದೆ. ದಾರಿದ್ರ್ಯ ನಿವಾರಣೆ ಆಗುತ್ತದೆ. ನೇರಳೆ ಹಣ್ಣು : ಪೂಜೆ ಮಾಡಿರುವಂತಹ ನೇರಳೆಹಣ್ಣನ್ನು ಬ್ರಾಹ್ಮಣರಿಗೆ ಕೊಟ್ಟರೆ ಎಂದಿಗೂ ದೇಹಕ್ಕೆ ರೋಗ ಬಾಧೆಗಳು ಬರುವುದಿಲ್ಲ. ನೇರಳೆ ಹಣ್ಣನ್ನು ಪುಣ್ಯಕ್ಷೇತ್ರಗಳಲ್ಲಿ ಬ್ರಾಹ್ಮ’ಣರಿಗೆ ತಾಂಬೂಲ ಸಮೇತ ದಾನಮಾಡಿದರೆ ಭೂದಾನ ಮಾಡಿದಷ್ಟೇ ಫಲಪ್ರಾಪ್ತಿಯಾಗುತ್ತದೆ. ಶನೇಶ್ವರ ಸ್ವಾಮಿಗೆ ನೇರಳೆಹಣ್ಣನ್ನು ನೈವೇದ್ಯ ಮಾಡಿ ಪ್ರಸಾದ ಸೇವನೆ ಮಾಡಿದರೆ ಬೆನ್ನು ನೋವು, ಸೊಂ’ಟ ನೋವು, ಮಂಡಿ ನೋವು ಮಾಯವಾಗುತ್ತದೆ.
ಶನೇಶ್ಚರ ಸ್ವಾಮಿಗೆ ಪ್ರಿಯವಾದ ಕರೆ ಎಳ್ಳಿನ ಜೊತೆ ನೇರಳೆಹಣ್ಣನ್ನು ಸೇರಿಸಿ ದಾನಮಾಡಿದರೆ ಶನೇಶ್ವರ ಸ್ವಾಮಿಯ ಕಾಟವು ಬರುವುದಿಲ್ಲ. ಪ್ರತಿದಿನವೂ ಒಂದೊಂದು ನೇರಳೆಹಣ್ಣನ್ನು ತಿನ್ನುತ್ತಾ ಬಂದರೆ ವೈದ್ಯರಿಂದ ದೂರವಿರಬಹುದು. ಬಾಳೆಹಣ್ಣು : ಬಾಳೆಹಣ್ಣನ್ನು ದೇವರಿಗೆ ನೈವೇದ್ಯ ಮಾಡಿದರೆ ಇಷ್ಟಾರ್ಥಸಿದ್ಧಿ ಆಗುವುದು. ತೆಂಗಿನಕಾಯಿ : ತೆಂಗಿನಕಾಯಿಯನ್ನು ದೇವರಿಗೆ ನೈವೇದ್ಯ ಮಾಡಿದರೆ ಕೆಲಸಕಾರ್ಯಗಳು ನಾವು ಅಂದುಕೊಂಡಂತೆಯೇ ಆಗುತ್ತದೆ. ಇದರಲ್ಲಿ ಸಂದೇಹವೇ ಇಲ್ಲ ಪೂರ್ಣಪ್ರಮಾಣದ ಫಲ ದೊರೆಯುತ್ತದೆ.
ಸಪೋಟ ಹಣ್ಣು : ಮದುವೆಗೆ ಹೆಣ್ಣನ್ನು ನೋಡಿದ ಗಂಡಿನ ಮನೆಯವರು ಒಪ್ಪಿಗೆ ಸೂಚಿಸಲು ನಿಧಾನಿಸಿದರೆ, ನಿರಾಕರಿಸಿದರೆ, ಮನೆಯಲ್ಲಿ ದೇವರಿಗೆ ಸಪೋಟ ಹಣ್ಣಿನ ನೈವೇದ್ಯ ಮಾಡಿದರೆ ಯಾವುದೇ ತರಹದ ತೊಂದರೆಯೂ ಉಂಟಾಗುವುದಿಲ್ಲ. ಕಿತ್ತಲೆ ಹಣ್ಣು : ಯಾರಿಂದ ಕೆಲಸ ಕಾರ್ಯಗಳು ಆಗುತ್ತವೆ ಎಂದು ನಿರೀಕ್ಷಿಸುತ್ತೇವೋ, ಅವರುಗಳಿಂದ ಸ್ವಲ್ಪ ತಡವಾಗಿ, ಅಥವಾ ನಿಲ್ಲಿಸಿ ಬಿಟ್ಟಿರುತ್ತಾರೋ, ಅಂತಹ ವೇಳೆಯಲ್ಲಿ ದೇವರಿಗೆ ಕಿತ್ತಳೆ ಹಣ್ಣನ್ನು ನೇವೇದ್ಯ ಮಾಡಿದರೆ ಆಗುವ ಕಾರ್ಯಗಳು ಶೀಘ್ರದಲ್ಲಿ ನೆರವೇರುತ್ತದೆ.
ಸೀಬೆ ಹಣ್ಣು : ಶ್ರೀಮಹಾಗಣಪತಿಗೆ ಸೀಬೆ ಹಣ್ಣನ್ನು ನೈವೇದ್ಯ ಮಾಡಿದರೆ ಜೀವನದಲ್ಲಿ ಮರ್ಯಾದೆ, ರಾಜ ಗೌರವ ಸಿಗುತ್ತದೆ. ವಾಯು ಪ್ರಕೋಪ ಉದರ ವ್ಯಾಧಿಗಳು ಮಾಯವಾಗುತ್ತದೆ. ಮದುವೆಯಾಗದ ಹೆಣ್ಣು ಮಕ್ಕಳ ಕೈಯಿಂದ ಪೂಜೆ ಮಾಡಿಸಿ ಸುಮಂಗಲಿಯರಿಗೆ ತಾಂಬೂಲ ಸಮೇತ ದಾನ ಕೊಟ್ಟರೆ ಬೇಗನೆ ವಿವಾಹ ಕಾರ್ಯ ನೆರವೇರುತ್ತದೆ. ಧನ್ವಂತರಿ ಹೋಮದಲ್ಲಿ ಸೀಬೆ ಹಣ್ಣನ್ನು ಹಾಕಿದರೆ ಸಕ್ಕರೆ ಕಾ’ಯಿಲೆಗಳು ಮತ್ತು ದೀರ್ಘ ಕಾ’ಯಿಲೆಗಳು ವಾಸಿಯಾಗುತ್ತವೆ. ಆರೋಗ್ಯ ಭಾಗ್ಯ ಎಂದೆಂದಿಗೂ ನಿಮ್ಮದಾಗುತ್ತದೆ.
ದುರ್ಗಾದೇವಿಯ ದೀಪ ನಮಸ್ಕಾರ ಸಮಯದಲ್ಲಿ ನೇವೇದ್ಯ ಮಾಡಿ ಮಕ್ಕಳಿಲ್ಲದವರಿಗೆ ಪ್ರಸಾದ ರೂಪದಲ್ಲಿ ಕೊಟ್ಟರೆ ಒಂದು ವರ್ಷದಲ್ಲಿ ಸಂ’ತಾನಭಾಗ್ಯ ಪ್ರಾಪ್ತಿಯಾಗುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.