ದೇವರ ದೀಪಕ್ಕೆ ಯಾವ ರೀತಿಯ ಬತ್ತಿಗಳನ್ನು ಉಪಯೋಗಿಸಿದರೆ ಯಾವ ಯಾವ ಫಲಗಳು ದೊರೆಯುತ್ತವೆ ಎಂದು ತಿಳಿದುಕೊಳ್ಳೋಣ. ಶುದ್ಧವಾದ ಹತ್ತಿಯಿಂದ ಬತ್ತಿ ಖುದ್ದಾಗಿ ತಾವುಗಳೇ ಮಾಡಿ ದೇವರಿಗೆ ಹಚ್ಚಬೇಕು. ಆಗ ಮನೆಯಲ್ಲಿ ಹಿರಿಯರಿಂದ ಆಗುವ ಲೋಪ ದೋಷಗಳು ನಿವಾರಣೆಯಾಗುತ್ತದೆ. ತಾವರೆ ಕಾಂ’ಡದ ಬತ್ತಿ ದೇವರಿಗೆ ಉಪಯೋಗಿಸಿದರೆ ಆ ಮನೆಯಲ್ಲಿ ಅಖಂಡ ಭಾಗ್ಯವು ದೊರೆಯುತ್ತದೆ. ಸಾಲದ ಬಾಧೆಯು ನಿವಾರಣೆ ಆಗುತ್ತದೆ. ಮಹಾಲಕ್ಷ್ಮಿ ದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತೇವೆ. ಸಾಯುಜ್ಯ ಪದವಿ ದೊರೆಯುತ್ತದೆ.
ಬಾಳೆದಿಂಡಿನ ಬತ್ತಿಯಿಂದ ದೇವರಿಗೆ ದೀಪ ಹಚ್ಚಿದರೆ ಆ ಮನೆಯಲ್ಲಿ ಉತ್ತಮವಾದ ಸಂತತಿ ಆಗುತ್ತದೆ. ಹಿರಿಯರ ಶಾ’ಪ ನಿವಾರಣೆಯಾಗುತ್ತದೆ. ಕುಲದೇವತೆಯ ಅನುಗ್ರಹ ಯಾವಾಗಲೂ ನಿಮ್ಮ ಮೇಲೆ ಪ್ರ’ಜ್ವಲಿಸುತ್ತದೆ. ಎಕ್ಕದ ಗಿಡದ ಬತ್ತಿಯಿಂದ ದೇವರಿಗೆ ದೀಪ ಹಚ್ಚಿದರೆ,ಆ ಮನೆಯಲ್ಲಿ ಅಪಾರ ಸಂಪತ್ತು ಪ್ರಾಪ್ತಿಯಾಗುತ್ತದೆ. ದು’ಷ್ಟ ಶ’ಕ್ತಿಗಳ ನಿವಾರಣೆಯಾಗುತ್ತದೆ. ಗಣಪತಿಯ ಅನುಗ್ರಹ ದೊರೆಯುತ್ತದೆ. ಅರಿಶಿನ ಬಟ್ಟೆಯ ಬತ್ತಿಯಿಂದ ದೀಪ ಹಚ್ಚಿದರೆ ಆಗುವ ಪ್ರಯೋಜನಗಳು ಇಂತಿವೆ.
ಮೊದಲಿಗೆ ಅರಿಶಿನದ ಬಟ್ಟೆಯಿಂದ ಬತ್ತಿಯನ್ನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ. ಹೊಸ ಬಟ್ಟೆಯನ್ನು ಒಂದು ಇಂಚು ಅಗಲ ಕತ್ತರಿಸಿ ಅದನ್ನು ಅರಿಶಿನದ ನೀರಿನಲ್ಲಿ ನೆನೆಸಿಡಿ. ನಂತರ ಒಣಗಿಸಿದ ಜೇನುತುಪ್ಪದಲ್ಲಿ ಅದ್ದಿ ಅದರಿಂದ ಬತ್ತಿ ಮಾಡಿಕೊಂಡು ದೇವರಿಗೆ ದೀಪ ಹ’ಚ್ಚಬೇಕು. ಹೀಗೆ ಮಾಡಿದರೆ ದೇವಿ ಕಟಾಕ್ಷವು ನಿತ್ಯವೂ ನಿಮ್ಮ ಮೇಲೆ ಇರುತ್ತದೆ. ಜ’ಠರ ಹಾಗೂ ಉದರವ್ಯಾ’ಧಿ ರೋ’ಗವು ವಾಸಿಯಾಗುತ್ತದೆ. ಕಾ’ಮಾಲೆ ರೋ’ಗವು ಬೇಗನೆ ವಾಸಿಯಾಗುತ್ತದೆ.
ಕುಂಕುಮದ ನೀರಿನಿಂದ ನೆನೆಸಿದ ಬಟ್ಟೆಯ ಬತ್ತಿಯಿಂದ ದೇವರಿಗೆ ದೀಪ ಹಚ್ಚಿದರೆ ಆ ಮನೆಯಲ್ಲಿ ವಿವಾಹದ ತೊಂದರೆ ಇದ್ದಾರೆ ನಿವಾರಣೆಯಾಗುತ್ತದೆ. ಸಂತಾನಕ್ಕೆ ಇರುವ ದೋ’ಷಗಳು ನಿವಾರಣೆಯಾಗಿ ದೇವರ ಅನುಗ್ರಹದಿಂದ ಶೀಘ್ರದಲ್ಲಿ ಸಂತಾನ ಭಾಗ್ಯ ದೊರೆಯುತ್ತದೆ. ಮನೆಯಲ್ಲಿ ವಿವಾಹ ದೋ’ಷಗಳೆಲ್ಲವೂ ಕರಗಿ ಒಳ್ಳೆಯ ಕಾರ್ಯಗಳು ಶೀಘ್ರದಲ್ಲಿ ಫಲಪ್ರದವಾಗುತ್ತದೆ. ಮನೆಯಲ್ಲಿ ಯಾವುದೇ ಮಾಂ’ತ್ರಿಕ ಶ’ಕ್ತಿಯ ಆಟ ನಡೆಯುವುದಿಲ್ಲ.
ಬತ್ತಿಯನ್ನು ಪನ್ನೀರಿನಲ್ಲಿ ಅದ್ದಿ ನಂತರ ತುಪ್ಪದ ದೀಪ ಹಚ್ಚಿದರೆ ಮನೆಯಲ್ಲಿ ಎಲ್ಲಾ ಸದಸ್ಯರು ಕೀರ್ತಿವಂತರಾಗುತ್ತಾರೆ. ಎಲ್ಲರಿಗೂ ಲಕ್ಷ್ಮಿ ಕಟಾಕ್ಷವು ನಿರಂತರವಾಗಿರುತ್ತದೆ. ಹಣಕಾಸಿನ ತೊಂದರೆಯು ಕಾಣಿಸುವುದೇ ಇಲ್ಲ. ಮಹಾಲಕ್ಷ್ಮಿಯ ಕೃಪೆಯು ನಿತ್ಯ ನಿರಂತರವಾಗಿ ಮನೆಯಲ್ಲಿ ಬೆಳಗುತ್ತಿರುತ್ತದೆ. ವಿವಿಧ ರೀತಿಯ ದೇವರ ದೀಪದ ಮುಖಗಳು ಅಥವಾ ಬತ್ತಿಗಳು. ಒಂದು ಮುಖ : ಒಂದು ಮುಖ ಅಥವಾ ಒಂದು ಬತ್ತಿಯ ದೀಪವನ್ನು ಹಚ್ಚಿದರೆ ಮಧ್ಯಮ ಲಾಭ ಉಂಟಾಗುತ್ತದೆ.
ದ್ವಿಮುಖ ದೀಪ : ದ್ವಿಮುಖ ಅಥವಾ ಎರಡು ಬತ್ತಿಗಳ ದೀಪದಿಂದ ಕುಟುಂಬದಲ್ಲಿ ಯಾವಾಗಲೂ ಒಗ್ಗಟ್ಟು ನೆಲೆಯೂರಿ ನಿಲ್ಲುತ್ತದೆ. ತ್ರಿಮುಖ ದೀಪ : ತ್ರಿಮುಖ ದೀಪ ಅಥವಾ ಮೂರು ಬತ್ತಿಗಳನ್ನು ಹಚ್ಚಿ ದೀಪ ಬೆಳಗುವುದರಿಂದ ಸಂ’ತಾನಭಾಗ್ಯ ಪ್ರಾಪ್ತಿಯಾಗುತ್ತದೆ. ಚತುರ್ಮುಖ ದೀಪ : ಚತುರ್ಮುಖ ದೀಪ ಅಥವಾ 4 ಬತ್ತಿಗಳಿಂದ ದೀಪವನ್ನು ಹಚ್ಚಿದರೆ ಧನಸಂ’ಪತ್ತು ಅಷ್ಟೈಶ್ವರ್ಯಗಳು ಲಭಿಸುತ್ತದೆ. ಪಂಚಮುಖ ದೀಪ : ಪಂಚಮುಖ ದೀಪ ಅಥವಾ ಐದು ಬತ್ತಿಗಳಿಂದ ದೀಪವನ್ನು ಹಚ್ಚಿದರೆ ಧನಕನಕ ಸುಖ-ಶಾಂತಿ ಜೀವನ ನಿಮ್ಮದಾಗುತ್ತದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.