ತಿಳಿಯಲೇ ಬೇಕಾದ ದೀಪದ ಬತ್ತಿಯ ವಿಚಾರಗಳು.

0
2922

ದೇವರಿಗೆ ಪ್ರಾರ್ಥನೆ ಸಲ್ಲಿಸುವಾಗ ಭಕ್ತಿ ಮುಖ್ಯ. ಆದರೆ ಭಕ್ತಿಯ ಜೊತೆಗೆ ಸ್ವಚ್ಛತೆ ಹಾಗೂ ಕೆಲವು ಶಿಸ್ತು ನಿಯಮಗಳು ಕೂಡ ಮುಖ್ಯವಾಗುತ್ತವೆ. ಇದರಂತೆ ನಡೆದರೆ ಎಲ್ಲರಿಗೂ ಒಳಿತು. ದೀಪದ ಬತ್ತಿಯ ವಿಚಾರಗಳು. ನಾವು ದೇವರ ದೀಪವನ್ನು ಪ್ರತಿದಿನ ಸ್ನಾನ ಮುಗಿದ ನಂತರ ದೇವರಮನೆಗೆ ಪೂಜೆಗೆಂದು ಕೂರುವಾಗ ಹಚ್ಚುತ್ತೇವೆ. ಸಂಜೆಯ ವೇಳೆಯಲ್ಲಿ ಹಚ್ಚುತ್ತೇವೆ. ಆದರೆ ದೀಪ ಹಚ್ಚುವಾಗ ಬಳಸುವ ಬತ್ತಿಯು ಹೇಗಿರಬೇಕು ಎಂಬುವುದು ಯಾರಿಗೂ ತಿಳಿದಿರುವುದಿಲ್ಲ. ಇದರಿಂದ ಹಲವಾರು ಲಾಭ-ನ’ಷ್ಟಗಳು ಕೂಡ ಉಂಟಾಗುತ್ತದೆ.

ಈ ವಿಷಯಗಳನ್ನು ತಿಳಿದು ಅದರಂತೆಯೇ ದೀಪಗಳನ್ನು ಹಚ್ಚಲು ಶುರು ಮಾಡಿ. ವ್ಯತ್ಯಾಸವನ್ನು ನೀವೇ ಕಂಡುಕೊಳ್ಳುತ್ತೀರಿ. ಈಗ ಬತ್ತಿಯು ಹೇಗಿರಬೇಕು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ ಅಲ್ಲವೇ. ಹಾಗಾದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ದೀಪದ ಬತ್ತಿಯು ಮನೆಯಲ್ಲಿರುವವರಿಗೆ ಜ್ಞಾಪಕ ಶಕ್ತಿ ಕಡಿಮೆ ಇರುತ್ತದೆ. ದೀಪದ ಬತ್ತಿಯು ಕೊಳೆಯಿಂದ ಕೂಡಿದ್ದರೆ ಅನವಶ್ಯಕ ಯೋಚನೆಗಳಿಂದ ಮನೆಯಲ್ಲಿರುವವರು ಮನಶ್ಯಾಂತಿ ಕಳೆದುಕೊಳ್ಳುತ್ತಾರೆ.

ದೀಪ ಹಚ್ಚಲು ಬಳಸುವ ಬತ್ತಿಯು ಕಪ್ಪಾಗಿದ್ದರೆ ಜೀವನದಲ್ಲಿ ವಿವಿಧ ರೀತಿಯ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ದೀಪದ ಬತ್ತಿಯು ಹಾಲಿನಂತೆ ಬೆಳ್ಳಗೆ ಇದ್ದರೆ ಜೀವನದಲ್ಲಿ ಸಮಸ್ತ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ. ಬತ್ತಿಯು ಗಂಟುಗಳಾಗಿ ಇದ್ದರೆ ಜೀವನದಲ್ಲಿ ತುಂಬಾ ಕಷ್ಟಗಳು ಬಂದೊದಗುತ್ತವೆ. ಗಂಟು ಗಳಂತೆ ಬಿಡಿಸಿಕೊಳ್ಳಲು ಆಗುವುದಿಲ್ಲ ಒಂದರ ಮೇಲೊಂದರಂತೆ ಕಷ್ಟಗಳು ಬರುತ್ತಲೇ ಇರುತ್ತವೆ. ದೀಪದ ಬತ್ತಿಯು ತುಂಬಾ ಕಿರಿದಾಗಿದ್ದು ಜಿಪುಣತನ ಎದ್ದುಕಾಣುತ್ತದೆ. ಹೀಗಿರುವಾಗ ಮನೆಯಲ್ಲಿ ಕೋಪ ಮತ್ತು ಜಗಳಗಳು ತುಂಬಾ ಹೆಚ್ಚಾಗುತ್ತದೆ.

ದೀಪದ ಬತ್ತಿಯು ತುಂಬಾ ಉದ್ದವಾಗಿದ್ದರೆ ಮನೆಯಲ್ಲಿ ತುಂಬಾ ಖರ್ಚುಗಳು ಹೆಚ್ಚಾಗುತ್ತವೆ. ದೇವರ ಅನುಗ್ರಹ ಹಾಗೂ ದೈವಭಕ್ತಿ ಹೆಚ್ಚಾಗುತ್ತದೆ. ಬತ್ತಿಯು ಬಣ್ಣಗಳಿಂದ ಕುಡಿದರೆ ದೇಹಕ್ಕೆ ಚರ್ಮವ್ಯಾಧಿಗಳು ಅಂಟಿಕೊಳ್ಳುತ್ತವೆ. ದೀಪದ ಬತ್ತಿಯು ತುಂಬಾ ಸಡಿಲವಾಗಿದ್ದರೆ ಜೀವನದಲ್ಲಿ ಯಾರಿಂದಲೂ ಸಹಾಯವಾಗುವುದಿಲ್ಲ. ಹಾಗೂ ಕೈಗೊಂಡ ಕಾರ್ಯಗಳು ಬೇಗನೆ ನೆರವೇರುವುದಿಲ್ಲ. ದೀಪದ ಬತ್ತಿ ಬಲು ಗಟ್ಟಿಯಾಗಿದ್ದರೆ ಸಂಸಾರದಲ್ಲಿ ಒಗ್ಗಟ್ಟಾಗಿ ಬಾಳಿ ಬದುಕುತ್ತಾರೆ.

ದೀಪದ ಬತ್ತಿಯು ಕೃಶವಾಗಿದ್ದರೆ ಮನೆಯ ಹಿರಿಯರ ಆರೋಗ್ಯವೂ ಕೂಡ ಕೃಶವಾಗುತ್ತಾ ಬರುತ್ತದೆ. ಹಾಗೂ ಬತ್ತಿಯು ದೃಢವಾಗಿದ್ದರೆ ಕುಟುಂಬ ಸದಸ್ಯರ ಆರೋಗ್ಯ ಒಳ್ಳೆಯದಾಗಿರುತ್ತದೆ. ದೀಪದ ಬತ್ತಿಯು ಒಂದು ದೊಡ್ಡದು ಹಾಗೂ ಮತ್ತೊಂದು ಚಿಕ್ಕದಾಗಿದ್ದರೆ ಆ ಮನೆಯ ಯಜಮಾನನ ಗೆಳೆಯರಿಂದ ಬಹಳ ಅನುಕೂಲವಾಗುತ್ತದೆ. ದೀಪದ ಬತ್ತಿಯು ಎರಡಕ್ಕಿಂತ ಹೆಚ್ಚಾಗಿದ್ದರೆ ದೇವರ ಗುರುಗಳ ಅನುಗ್ರಹ ಇದು ಸ್ನೇಹಿತರ ಸಹಾಯದಿಂದ ಕೆಲಸಗಳು ಸುಗಮವಾಗಿ ನಡೆಯುತ್ತದೆ.

ಒಂದೊಂದು ದೀಪಕ್ಕೆ ಒಂದೊಂದು ಬತ್ತಿಯಂತೆ ಎರಡು ದೀಪ ಹಚ್ಚಿದರೆ ಮನೆಯಲ್ಲಿ ಸುಖ ಸಂತೋಷ ಯಾವಾಗಲೂ ನೆಲೆಯೂರಿ ನಿಲ್ಲುತ್ತದೆ. ಎರಡೆರಡು ಬತ್ತಿಗಳನ್ನು ಪ್ರತಿ ದೀಪದಲ್ಲಿ ಹಚ್ಚಿದರೆ ಕುಟುಂಬದ ಎಲ್ಲಾ ಸದಸ್ಯರು ನೆಮ್ಮದಿಯಿಂದ ಜೀವನ ಸಾಗಿಸುತ್ತಾರೆ. 3 ಪ್ಲಸ್ 3 ಎಂಬುವಂತೆ ಒಟ್ಟು ಆರು ಬತ್ತಿಯನ್ನು ಹಚ್ಚಿದರೆ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತಲೇ ಇರುತ್ತದೆ. 4 ಪ್ಲಸ್ 4 ಎಂಬಂತೆ 8 ಬತ್ತಿ ಹಚ್ಚುತ್ತಿದ್ದರೆ ಮನೆಯಲ್ಲಿ ಎಲ್ಲರೂ ಯಾವುದೇ ರೋಗಬಾಧೆ ಇಲ್ಲದೆ ಆರೋಗ್ಯವಂತರಾಗಿ ಬಾಳುತ್ತಾರೆ.

5 ಪ್ಲಸ್ 5 ಎಂಬುವಂತೆ 10 ವಾದಿಗಳನ್ನು ಹಚ್ಚಿದರೆ ಗುರುಗಳ ಅನುಗ್ರಹ ಮನೆಯಲ್ಲಿ ಸದಾ ಇರುತ್ತದೆ. ಹಾಗೆಯೇ ದೇವರ ದೀಪಕ್ಕೆ ಯಾವ ರೀತಿಯ ಬತ್ತಿಗಳನ್ನು ಉಪಯೋಗಿಸಿದರೆ ಯಾವ ಯಾವ ಫಲಗಳು ದೊರೆಯುತ್ತವೆ ಎಂದು ತಿಳಿಯಲು ಇದನ್ನು ಓದಿ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here