ದೇವರು ಭಕ್ತರಿಂದ ತನಗಾಗಿ ಏನನ್ನೂ ಕೇಳುವುದಿಲ್ಲ. ದೇವರಲ್ಲಿ ಭಕ್ತಿ ಹೆಚ್ಚಾಗಿದ್ದರೆ ಸಾಕು. ನಾವು ನಮ್ಮ ಮನಸ್ಸಿನ ತೃಪ್ತಿಗಾಗಿ ನಮಗೆಂದು ಪ್ರಪಂಚದ ಎಲ್ಲ ಸುಖ ದುಖ್ಖಗಳನ್ನು ಕೊಟ್ಟಿರುವ ಭಗವಂತನಿಗೆ ಫಲ ಪುಷ್ಪಗಳನ್ನು ಅರ್ಪಿಸುತ್ತೇವೆ. ನಾವು ದೇವರ ಅಲಂಕಾರಕ್ಕಾಗಿ ಹೂಗಳು, ನೈವೇದ್ಯಕ್ಕಾಗಿ ಹಣ್ಣುಗಳು ಹಾಗೂ ಕೆಲವು ತಿಂಡತಿನಿಸುಗಳು ಇವೆಲ್ಲವುಗಳನ್ನು ದೇವರಿಗೆ ಅರ್ಪಿಸುವ ರೂಢಿಯನ್ನು ಬೆಳೆಸಿಕೊಂಡಿದ್ದೇವೆ.
ಇವೆಲ್ಲವುದರ ಜೊತೆಗೆ ಪ್ರತಿ ದಿನ ಪ್ರಾತಃಕಾಲದಲ್ಲಿ ಸ್ನಾನ ಇತ್ಯಾದಿಗಳನ್ನು ಮುಗಿಸಿದ ನಂತರ ದೇವರ ಮುಂದೆ ದೀಪ ಹಚ್ಚುವುದು ರೂಢಿಯಲ್ಲಿದೆ. ಆದರೆ ಯಾವ ದೀಪದಿಂದ ದೀಪ ಹಚ್ಚಿದರೆ ಯಾವ ಪರಿಣಾಮಗಳಾಗುತ್ತವೆ ಎಂಬುದು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ. ಅದಕ್ಕಾಗಿಯೇ ಇಂದು ನಾವು ಹಿತ್ತಾಳೆ ದೀಪ, ಸ್ಟೇನ್ಲೆಸ್ ಸ್ಟೀಲ್ ದೀಪ ಹಾಗೂ ಮಣ್ಣಿನ ಹಣತೆಗಳಿಂದ ದೀಪ ಹಚ್ಚಿದರೆ ಆಗುವ ಪರಿಣಾಮಗಳನ್ನು ತಿಳಿದುಕೊಳ್ಳೋಣ.
ಮನೆಯಲ್ಲಿ ದೇವರ ಮುಂದೆ ಹಿತ್ತಾಳೆ ದೀಪ ಹಚ್ಚುವುದರಿಂದ ಆಗುವ ಪ್ರಯೋಜನಗಳು ಹೀಗಿವೆ : ಯಾರ ಮನೆಯಲ್ಲಿ ಹಿತ್ತಾಳೆ ದೀಪದಿಂದ ದೀಪ ಹಚ್ಚುತ್ತಾರೆ ಅವರ ಮನೆಯಲ್ಲಿ ಸುಂದರವಾದ ಕಳೆ, ತೇಜಸ್ಸು ಇಮ್ಮಡಿಯಾಗುತ್ತದೆ. ಯಾರ ಮನೆಯಲ್ಲಿ ಕಂಚಿನ ಅಥವಾ ಹಿತ್ತಾಳೆಯ ದೀಪದಿಂದ ದೀಪ ಹಚ್ಚುತ್ತಾರೆ ಅವರ ಮನೆಯಲ್ಲಿ ರೋಗಬಾಧೆ ಅಪಮೃ’ತ್ಯು ಸಂಭವಿಸುವುದಿಲ್ಲ.
ಸಿದ್ಧಿ ಪುರುಷರು, ಮಂ’ತ್ರ ಸಿದ್ದರು, ಕಂಚಿನ ಅಥವಾ ಹಿತ್ತಾಳೆ ದೀಪಗಳಿಂದ ದೀಪ ಹಚ್ಚಿ ಮಂತ್ರ ಪಠಿಸುತ್ತಾ ಬಂದರೆ ಅವರಿಗೆ ಬೇಗ ಮಂತ್ರದ ಫಲ ಸಿಗುತ್ತದೆ. ಯಾರ ಮನೆಯಲ್ಲಿ ಕಂಚಿನ ಅಥವಾ ಹಿತ್ತಾಳೆ ದೀಪಗಳಿಂದ ದೀಪ ಹಚ್ಚುತ್ತಾರೆ ಅವರ ಮನೆಯಲ್ಲಿ ಆಯಸ್ಸು ವೃದ್ಧಿಯಾಗುತ್ತದೆ. ಗ್ರಹಣಕಾಲದಲ್ಲಿ ಹಿತ್ತಾಳೆ ದೀಪಗಳನ್ನು ಹಚ್ಚಿ ಕರಿಎಳ್ಳು ಹಾಕಿ ಮತ್ತು ಎಣ್ಣೆ ತುಪ್ಪದಿಂದ ದೀಪ ಹಚ್ಚಿದರೆ ಆ ದೀಪಗಳು ಚಿನ್ನದ ದೀಪಗಳಿಗೆ ಸಮಾನವಾಗಿರುತ್ತದೆ.
ಸ್ಟೇನ್ಲೆಸ್ ಸ್ಟೀಲ್ ದೀಪ ಹಚ್ಚಿದರೆ ಆಗುವ ಪರಿಣಾಮಗಳೇನು ಏನು ನೋಡೋಣ : ಯಾರ ಮನೆಯಲ್ಲಿ ಸ್ಟೇನ್ಲೆಸ್ ಸ್ಟೀಲ್ ದೀಪಗಳಿಂದ ದೇವರಿಗೆ ದೀಪ ಹಚ್ಚಿದರೆ, ಅವರ ಮನೆಯಲ್ಲಿ ಪ್ರತಿದಿನವೂ ನೆಮ್ಮದಿ ಇರುವುದಿಲ್ಲ. ಯಾರ ಮನೆಯಲ್ಲಿ ಮನೆದೇವರಿಗೆ ಸ್ಟೇನ್ಲೆಸ್ ಸ್ಟೀಲ್ ದೀಪಗಳಿಂದ ದೇವರಿಗೆ ದೀಪ ಹಚ್ಚುತ್ತಾರೆ ಅವರು ನಿತ್ಯ ದರಿದ್ರರಾಗುತ್ತಾರೆ. ಯಾರ ಮನೆಯಲ್ಲಿ ಈ ದೀಪಗಳಿಂದ ದೇವರಿಗೆ ದೀಪ ಹಚ್ಚುತ್ತಾರೆ ಅವರ ಮನೆಯಲ್ಲಿ ಪ್ರತಿದಿನವೂ ನೆಮ್ಮದಿ ಇರುವುದಿಲ್ಲ.
ದಿನವೂ ಮನೆಯಲ್ಲಿ ಸ್ಟೇನ್ಲೆಸ್ ಸ್ಟೀಲ್ ದೀಪಗಳಲ್ಲಿ ದೀಪ ಹಚ್ಚಿದರೆ ಅವರ ಮನೆಯಲ್ಲಿ ಯಾವಾಗಲೂ ಜಗಳಗಳು ನಡೆಯುತ್ತಿರುತ್ತದೆ. ಸ್ತ್ರೀ ಪುರುಷರಾಗಲಿ ದೇವರಿಗೆ ದೀಪಗಳನ್ನು ಹಚ್ಚುವಾಗ ಕುಕ್ಕರಗಾಲಿನಲ್ಲಿ ಕುಳಿತು ದೀಪ ಹಚ್ಚಬಾರದು. ಹೀಗೆ ಹಚ್ಚಿದರೆ ಅವರಿಗೆ ಕಾಲುಗಳಲ್ಲಿ ನೋವು, ಸೊಂಟ ನೋವು, ಮಂಡಿ ಚಿಪ್ಪಿನ ಕಾಯಿಲೆ ಬೇಗ ಬರುತ್ತದೆ. ದಿನವೂ ಮನೆಯಲ್ಲಿ ಸ್ಟೈನ್ ಲೆಸ್ ಸ್ಟೀಲ್ ದೀಪಗಳಲ್ಲಿ ದೀಪ ಹಚ್ಚುತ್ತಿದ್ದರೆ ಅವರ ಕುಟುಂಬದವರು ಕೋರ್ಟು ಕಚೇರಿಗಳಿಗೆ ಅಲಿಯಬೇಕಾಗುತ್ತದೆ.
ದಿನವೂ ದೇವರ ಮನೆಯಲ್ಲಿ ಸ್ಟೇನ್ಲೆಸ್ ಸ್ಟೀಲ್ ದೀಪಗಳಲ್ಲಿ ದೀಪ ಹಚ್ಚಿದರೆ ಅವರ ಮನೆಯಲ್ಲಿ ಪ್ರತಿದಿನವೂ ರೋಗಬಾಧೆ, ಸಾಲದ ಬಾಧೆ, ಶತ್ರುಗಳ ಬಾಧೆಯು ಇದ್ದೇ ಇರುತ್ತದೆ. ದಿನವೂ ಮನೆಯಲ್ಲಿ ಸ್ಟೀಲ್ ದೀಪದಿಂದ ದೀಪ ಹಚ್ಚುವುದರಿಂದ ಕೆಟ್ಟ ಕನಸುಗಳು ಬೀಳುತ್ತದೆ. ಕುಟುಂಬದ ಎಲ್ಲ ಸದಸ್ಯರು ಆಲಸಿಗಳಾಗುತ್ತಾರೆ. ಆದ್ದರಿಂದ ಸ್ಟೇನ್ಲೆಸ್ ಸ್ಟೀಲ್ ದೀಪಗಳಲ್ಲಿ ದೀಪಗಳನ್ನು ಹಚ್ಚುವುದನ್ನು ಬಿಟ್ಟು ತಕ್ಕಮಟ್ಟಿಗೆ ಹಿತ್ತಾಳೆ ಅಥವಾ ಕಂಚಿನಲ್ಲಿ ದೀಪ ಹಚ್ಚಿದರೆ ನೆಮ್ಮದಿ ಜೀವನ ನಿಮ್ಮದಾಗುತ್ತದೆ.
ಮಣ್ಣಿನ ಹಣತೆಯ ದೀಪ ಹಚ್ಚುವುದರಿಂದ ಆಗುವ ಪರಿಣಾಮಗಳು : ಮಣ್ಣಿನ ಹಣತೆಯಲ್ಲಿ ದೇವರಿಗೆ ದೀಪಗಳನ್ನು ಹಚ್ಚಿದರೆ ಆ ಮನೆಗೆ ದೃಷ್ಟಿ ದೋಷ ಹಾಗೂ ಮಾಂ’ತ್ರಿಕ ಭಾದೆ ತಟ್ಟುವುದಿಲ್ಲ. ಮಣ್ಣಿನ ಹಣತೆಯಲ್ಲಿ ದೇವರಿಗೆ ದೀಪಗಳನ್ನು ಹಚ್ಚಿದರೆ ಆ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತಲೇ ಇರುತ್ತದೆ. ಗುರುಗಳ ಹಾಗೂ ದೇವತೆಗಳ ಅನುಗ್ರಹಕ್ಕಾಗಿ ಮಣ್ಣಿನ ಹಣತೆಯಲ್ಲಿ ದೇವರಿಗೆ ದೀಪಗಳನ್ನು ಹಚ್ಚಬೇಕು. ಕಾರ್ತಿಕ ಸೋಮವಾರ ಶಿವನ ದೇವಾಲಯಗಳಲ್ಲಿ ಹಣತೆ ದೀಪ ಹಚ್ಚಿದರೆ ಶಿವಾನುಗ್ರಹ ಮತ್ತು ವಿಷ್ಣು ದೇವರಿಂದ ಸಾಯುಜ್ಯ ಪದವಿಯು ದೊರೆಯುತ್ತದೆ.
ಮಣ್ಣಿನ ಹಣತೆಯಲ್ಲಿ ದುರ್ಗಾ ದೇವತೆಗೆ ದೀಪಗಳನ್ನು ಹಚ್ಚಿ ಸಪ್ತಶತಿ ಪಾರಾಯಣ ಮಾಡಿದರೆ ನೆನೆದ ಕಾರ್ಯಗಳು ಬೇಗನೆ ಕೈಗೂಡುತ್ತದೆ. ದೇವರ ಮುಂದೆ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚಿದರೆ ಅವರಿಗೆ ಹಾಗೂ ಅವರ ಕುಟುಂಬಕ್ಕೆ ದೈವಭಕ್ತಿ ಇಮ್ಮಡಿಯಾಗುತ್ತದೆ. ಪಿಂಗಾಣಿ ಹಣತೆಯಲ್ಲಿ ದೇವರಿಗೆ ದೀಪಗಳನ್ನು ಹಚ್ಚಿದರೆ ಅವರ ಮನೆಗೆ ವಾಹನಗಳ ಕೊಳ್ಳುವ ಯೋಗಗಳು ಹೆಚ್ಚಾಗುತ್ತವೆ. ಪಿಂಗಾಣಿ ಹಾಗೂ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚಿದರೆ ಅವರ ಮನೆಯಲ್ಲಿ ಅವರ ಸಮಸ್ತ ವಾದ ಪಾಪಗಳು ನಿವಾರಣೆಯಾಗಿ ಭಗವಂತನ ಅನುಗ್ರಹ ಹೆಚ್ಚಾಗುತ್ತದೆ.