ಈ ನಟರು ಹಾಗೂ ಅವರ ಹವ್ಯಾಸಗಳಿಗೆ ಸಂಬಂಧವೇ ಇಲ್ಲ. ವಿಚಿತ್ರವಾದರೂ ಸತ್ಯ.

0
2285

ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದಂತಹ ಕೆಲವೊಂದು ಹವ್ಯಾಸಗಳು ಇರುತ್ತವೆ. ಹವ್ಯಾಸಗಳು ಕೆಲವೊಮ್ಮೆ ಅವರಿಗೆ ಉತ್ತಮ ರೀತಿಯಲ್ಲೂ ಒಳಿತು ಮಾಡಬಹುದು. ಕೆಲವೊಮ್ಮೆ ದು’ಷ್ಪರಿಣಾಮಗಳನ್ನು ಬೀರಬಹುದು. ದಕ್ಷಿಣ ಭಾರತದ ಈ ಕೆಲವು ನಟರು ವಿಚಿತ್ರವಾದ ಹವ್ಯಾಸದ ಬಗ್ಗೆ ಇಂದು ತಿಳಿಯೋಣ. ಮೊದಲನೆಯದಾಗಿ ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್. ಈಕೆಗೆ ಒಂದು ವಿಚಿತ್ರವಾದ ಹವ್ಯಾಸವಿದೆ. ಅದೇನೆಂದರೆ ಅವಳಿಗೆ ಯಾವಾಗ ಸಮಯ ಸಿಗುತ್ತದೆ ಆಗೆಲ್ಲ ಆಕೆ ಈಜುವುದಕ್ಕೆ ಇಷ್ಟಪಡುತ್ತಾರೆ.

ಸಾಧಾರಣವಾಗಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜುವುದಕ್ಕೆ ಆಕೆ ಇಷ್ಟಪಡುತ್ತಾರೆ. ಎರಡನೆಯದಾಗಿ ದಕ್ಷಿಣ ಭಾರತದ ಮತ್ತೊಬ್ಬ ಖ್ಯಾತ ನಟಿ ನಯನತಾರಾ. ನಯನತಾರ ರವರು ಮೂಲತಹ ಮಲಯಾಳಿ ಕ್ರಿಶ್ಚಿಯನ್ ಆದರೂ ಆಕೆ ಸಮಯ ಸಿಕ್ಕಾಗಲೆಲ್ಲ ಹಿಂದೂ ದೇವಸ್ಥಾನಗಳಿಗೆ ಭೇಟಿ ಕೊಡುವುದಕ್ಕೆ ಬಹಳ ಇಷ್ಟಪಡುತ್ತಾರೆ. ಮೂರನೆಯದಾಗಿ ತಮಿಳುನಾಡಿನ ಖ್ಯಾತ ನಟ ಹಾಗೂ ರಜನಿಕಾಂತ್ ಅವರ ಅಳಿಯ ಧನುಷ್. ಧನುಶ್ ಅವರು ಶುದ್ಧ ಸಸ್ಯಹಾರಿ. ಜೊತೆಗೆ ಅವರಿಗೆ ಮೊದಲಿನಿಂದಲೂ ಅಡುಗೆಭಟ್ಟ ಅಂದರೆ ಶಫ್ ಆಗಬೇಕು ಎಂಬ ಆಸೆ.

ಜೊತೆಗೆ ತನ್ನದೇ ಆದ ಹೋಟೆಲ್ ಇಟ್ಟುಕೊಳ್ಳಬೇಕು ಎಂಬ ಆಸೆ ಇದೆಯಂತೆ. ಅವರಿಗೆ ಹೋಟೆಲ್ ಮ್ಯಾನೇಜ್ಮೆಂಟ್ ಕೆಲಸ ಕೂಡ ಇಷ್ಟವಂತೆ. ಮತ್ತೊಬ್ಬ ದಕ್ಷಿಣ ಭಾರತದ ಖ್ಯಾತ ನಟ ವಿಜಯ್. ವಿಜಯ್ ಅವರಿಗೆ ಕಾರು ಓಡಿಸುವುದು ಎಂದರೆ ಅತ್ಯಂತ ಒಲವು. ಅವರು ಕಾರನ್ನು ತುಂಬಾ ಸ್ಪೀಡಾಗಿ ಓಡಿಸುವುದಕ್ಕೆ ಇಷ್ಟಪಡುತ್ತಾರಂತೆ. ಇದೇ ಕಾರಣಕ್ಕಾಗಿ ಅತಿವೇಗದ ಕಾರಣದಿಂದ ಅವರು ಹಲವಾರು ಬಾರಿ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ.

ಮತ್ತೊಬ್ಬ ದಕ್ಷಿಣ ಭಾರತದ ಖ್ಯಾತ ನಟಿ ಶ್ರುತಿ ಹಾಸನ್. ಶ್ರುತಿ ಹಾಸನ್ ಅವರು ತಮ್ಮ ಉಡುಗೆ-ತೊಡುಗೆಗಳ ಬಗ್ಗೆ ಹೆಚ್ಚು ಗಮನ ವಹಿಸುತ್ತಾರಂತೆ. ಆಕೆ ಸಮಯ ಸಿಕ್ಕಾಗಲೆಲ್ಲ ವಿವಿಧ ಬ್ರಾಂಡ್’ಗಳ ಪಾದರಕ್ಷೆಗಳನ್ನು ಸಂಗ್ರಹಿಸುವಲ್ಲಿ ಸಮಯ ಕಳೆಯುತ್ತಾರಂತೆ. ಜೊತೆಗೆ ಆಕೆಯ ಬಳಿ 150 ಕ್ಕೂ ಹೆಚ್ಚು ಜೊತೆಯ ಪಾದರಕ್ಷೆಗಳು ಹಾಗೂ ಹೈ ಹೀಲ್ಡ್ ಇದೆಯಂತೆ. ಮತ್ತೊಬ್ಬ ಪ್ರಖ್ಯಾತ ನಟಿ ಅನುಷ್ಕಾ ಶೆಟ್ಟಿ.

ಅನುಷ್ಕಾ ರವರು ಯಾವಾಗಲೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಆಕೆ ಸಮಯ ಸಿಕ್ಕಾಗಲೆಲ್ಲಾ ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಸದಾ ಯೋಗ ಹಾಗೂ ಧ್ಯಾನವನ್ನು ಮಾಡುತ್ತಾರೆ. ಮತ್ತೊಬ್ಬ ಖ್ಯಾತ ನಟ ಅಜಿತ್ ಕುಮಾರ್. ಇವರಿಗೆ ಫೋಟೋಗ್ರಫಿಯಲ್ಲಿ ಬಹಳವೇ ಆಸಕ್ತಿ ಇದೆಯಂತೆ. ಆತ ಎಲ್ಲಿಗೆ ಹೋದರು ಅಲ್ಲಿ ತಮ್ಮ ಕ್ಯಾಮರಾವನ್ನು ಕೊಂಡೊಯ್ಯುತ್ತಾರಂತೆ.

ಮತ್ತೊಬ್ಬ ಸೂಪರ್ ಸ್ಟಾರ್ ರಜನಿಕಾಂತ್. ರಜನಿಕಾಂತ್ ಅವರು ದಕ್ಷಿಣ ಭಾರತದ ಕಿರೀಟ ಎಂದೇ ಹೇಳಬಹುದು. ರಜನಿಕಾಂತ್ ಅವರು ತಮ್ಮ ಹೆಂಡತಿಯ ಮಾತನ್ನು ಬಿಟ್ಟು ಇನ್ನು ಯಾರ ಮಾತಿಗೂ ಅಷ್ಟು ಬೆಲೆ ಕೊಡುವುದಿಲ್ಲವಂತೆ. ಬೇರೆಯವರ ಅಭಿಪ್ರಾಯಗಳಿಗಿಂತ ಹೆಂಡತಿಯ ಅಭಿಪ್ರಾಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರಂತೆ.

ಮತ್ತೊಬ್ಬ ಖ್ಯಾತ ನಟ ಸೂರ್ಯ. ಸೂರ್ಯರವರು ಒಬ್ಬ ಸೆಲೆಬ್ರಿಟಿ ಯಾಗಿರುವುದರಿಂದ ಅವರು ಹೊರಗೆ ಹೋಗುವುದಕ್ಕೂ ಮುನ್ನ ಕನಿಷ್ಠವೆಂದರೂ ಹತ್ತು ವಿವಿಧ ಬಟ್ಟೆಯನ್ನು ಧರಿಸಿ ಪರೀಕ್ಷಿಸುತ್ತಾರೆ. ನಂತರ ಅವರು ಹೊರಗೆ ಹೋಗುತ್ತಾರೆ. ಅವರಿಗೆ ಸಮಾಧಾನವಾಗುವವರೆಗೂ ಅವರು ಬಟ್ಟೆಗಳನ್ನು ಬದಲಾಯಿಸುತ್ತಾರಂತೆ. ಮತ್ತೊಬ್ಬ ಖ್ಯಾತ ನಟ ಸಿಂಬು. ಇವರು ಚಿತ್ರೀಕರಣದ ಸಂದರ್ಭದಲ್ಲಿ ಏನಾದರೂ ತೊಂದರೆ ಎದುರಾದಾಗ ಅಲ್ಲಿ ಸ್ಥಳದಲ್ಲೇ ಕೈಯಲ್ಲಿ ಒಂದು ರೂಪಾಯಿ ಅಥವಾ 25 ಪೈಸೆ ನಾಣ್ಯವನ್ನು ಹಿಡಿದು ದೇವರಲ್ಲಿ ಪ್ರಾರ್ಥನೆ ಶುರು ಮಾಡುತ್ತಾರಂತೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಖಂಡಿತವಾಗಿಯೂ ಶೇರ್ ಮಾಡಿ.

LEAVE A REPLY

Please enter your comment!
Please enter your name here